ಕೊಡೇಕಲ್ : ಪ್ರಸಕ್ತ ೨೦೨೪-೨೫ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಆರಂಭೋತ್ಸವಕ್ಕೆ ಎಲ್ಲ ಸರ್ಕಾರಿ ಶಾಲೆ ಹಾಗೂ ಅನುದಾನಿತ ಶಾಲೆಗಳು ತಳಿರು ತೋರಣದಿಂದ ಸಿಂಗಾರಗೊಳಿಸುವ ಮೂಲಕ ಶುಕ್ರವಾರ ಮಕ್ಕಳನ್ನು ಹೂಮಳೆಗೈಯುವ ಮೂಲಕ ಶಿಕ್ಷಕ ಸಿಬ್ಬಂದಿ ಅದ್ದೂರಿಯಾಗಿ ಸ್ವಾಗತಿಸಿದರು.
ಸ್ಥಳೀಯ ಮಂಡೆಲ್ಲಮ್ಮಗುಡಿ ಬಳಿಯ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಬೆಳಗ್ಗೆ ಶಾಲೆಗೆ ಬಂದ ಮಕ್ಕಳಿಗೆ ಶಿಕ್ಷಕರು ಹೂ ನೀಡಿ ಸ್ವಾಗತಿಸಿದರು. ಪ್ರಾರ್ಥನೆ ನಡೆದ ನಂತರ ಮಕ್ಕಳಿಗೆ ಶಿಕ್ಷಕರು ನೋಟ್‌ಬುಕ್ ಮತ್ತು ಪೆನ್ನು ನೀಡಿ, ನಂತರ ಸಿಹಿ ಊಟ ನೀಡಲಾಯಿತು. ಮುಖ್ಯಗುರು ಓಂಕಾರ ನಾಕೆ, ಕೋರಿಸಂಗಯ್ಯ ಗಡ್ಡದ, ನೀಲಮ್ಮ ಹಾವೇರಿ ಇತರರಿದ್ದರು.
ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಶಾಲೆಗೆ ಆಗಮಿಸಿದ ಮಕ್ಕಳಿಗೆ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಮಕ್ಕಳಿಗೆ ಗುಲಾಬಿ ಹೂ ಮತ್ತು ಸಿಹಿ ನೀಡುವುದು ಮೂಲಕ ಸ್ವಾಗತಿಸಿಕೊಂಡರು, ಸಂಸ್ಥೆ ಅಧ್ಯಕ್ಷ ಗವಿಸಂಗಯ್ಯ ಪಂಜಗಲ್, ಗೌಡಪ್ಪ ರಾಮನಗೌಡ್ರ, ಡಾ.ಜಿ.ಎಸ್.ಪಂಜಗಲ್, ಮುಖ್ಯಗುರು ಪ್ರಕಾಶ ಬಾಚಿಹಾಳ, ರೇಣುಕಾ ಪತ್ತಾರ, ಈರಸಂಗಯ್ಯ ಡಂಬಳ, ಬಸಲಿಂಗಪ್ಪ ಗಿರಣಿ, ದೇವಣ್ಣ ಆರೆತ್ತಿನವರ, ಸೋಮಶೇಖರಯ್ಯ, ಹಣಮಪ್ಪ, ಹನುಮಂತನಾಯ್ಕ ಇದ್ದರು.
ಮದಲಿಂಗನಾಳ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಬೆಳಗ್ಗೆ ಶಾಲೆಗೆ ಮಕ್ಕಳಿಗೆ ಗೇಟನ ಮುಂಭಾಗದಲ್ಲಿಯೇ ಶಿಕ್ಷಕರು ಮಕ್ಕಳಿಗೆ ಹೂ ನೀಡಿ ಸ್ವಾಗತಿಸಿಕೊಂಡರು. ನಂತರ ಸಾಮೂಹಿಕ ಪ್ರಾರ್ಥನೆ ಮಾಡುವ ಸಿಹಿ ಊಟ ನೀಡಲಾಯಿತು. ಮುಖ್ಯಗುರು ವೆಂಕಪ್ಪ, ಹಣಮಂತ್ರಾಯ, ಮಲ್ಲಿಕಾರ್ಜುನ, ರುದ್ರಪಶುಪತಿ, ಹಣಮೇಶ ಗಿಡನ್ನೂರ, ಶರಣಪ್ಪ, ದೀಪಾ ಇತರರಿದ್ದರು.
ಜುಮಾಲಪುರ ದೊಡ್ಡತಾಂಡಾ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರು ರಂಗೋಲಿ ಬಿಡಿಸಿ ಮಕ್ಕಳಿಗೆ ಗುಲಾಬಿ ಹೂ ನೀಡಿ ಆರತಿ ಮಾಡುವ ಮೂಲಕ ಸ್ವಾಗತಿಸಿಕೊಳ್ಳಲಾಯಿತು. ಮುಖ್ಯಗುರು ಸುಖದೇವ ಪಾಟೀಲ್, ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ, ಭರಮಪ್ಪ, ಮಲ್ಲಿಕಾರ್ಜುನ, ಮಂಜುನಾಥ, ಮಲ್ಲಿಕಾರ್ಜುನ ಇಟಗಿ, ಮಲ್ಲಿಕಾರ್ಜುನ ಹೊಳಿ, ಪ್ರಭಾವತಿ ಇತರರಿದ್ದರು.
ರಾಜನಕೋಳೂರ: ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಗಮಿಸಿದ ಮಕ್ಕಳಿಗೆ ಹೂ ನೀಡಿ ಬರಮಾಡಿಕೊಳ್ಳಲಾಯಿತು. ನಂತರ ಸರಸ್ವತಿ ಪೂಜೆ ಸಲ್ಲಿಸಿ ಸಿಹಿ ವಿತರಿಸಲಾಯಿತು. ಈ ವೇಳೆ ಶಿಕ್ಷಕರು ಮಕ್ಕಳಿಗೆ ನೋಟಬುಕ್ ಮತ್ತು ಪೆನ್ನು ವಿತರಿಸಿದರು. ಮುಖ್ಯಗುರು ಶಿವರಾಜ ಬಿರಾದಾರ, ವೀರುಪಾಕ್ಷಪ್ಪ ಹಂಡಗಿ, ನಿಂಗಪ್ಪ ಕುಳಗೇರಿ, ಹುಲಗಪ್ಪ ನಾಗರಬೆಟ್ಟ, ಸಂಗನಬಸಯ್ಯ ಹಿರೇಮಠ, ಎಸ್.ಎಸ್.ಮಾರನಾಳ, ಬಸವರಾಜ ಮಂಟೆ, ಶರಣಬಸವ ಇತರರಿದ್ದರು.
ತೀರ್ಥ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಆರಂಭೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು. ಶಾಲೆ ಆವರಣಕ್ಕೆ ಆಗಮಿಸಿದ ಮಕ್ಕಳಿಗೆ ಹೂ ಮಳೆಗೈಯುವ ಮೂಲಕ ಸ್ವಾಗತಿಸಲಾಯಿತು. ಗ್ರಾಮದಲ್ಲಿ ಪ್ರಭಾತಪೇರಿ ನಡೆಸುವ ಮೂಲಕ ಶಾಲಾ ಆರಂಭದ ಜಾಗೃತಿ ಮೂಡಿಸಲಾಯಿತು. ಮುಖ್ಯಗುರು ವೀರನಗೌಡ ಪಾಟೀಲ್, ಹಣಮಂತ್ರಾಯ ಪಾತ್ರೋಟ್, ಎಂ.ಕೆ.ಪಟೇಲ್, ಈರಣ್ಣ, ಪೂರ್ಣಿಮಾ, ಯಮನೂರಪ್ಪ ಇದ್ದರು.
ಪ್ರಸಕ್ತ ೨೦೨೪-೨೫ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಆರಂಭೋತ್ಸವಕ್ಕೆ ಎಲ್ಲ ಸರ್ಕಾರಿ ಶಾಲೆ ಹಾಗೂ ಅನುದಾನಿತ ಶಾಲೆಗಳು ತಳಿರು ತೋರಣದಿಂದ ಸಿಂಗಾರಗೊಳಿಸುವ ಮೂಲಕ ಶುಕ್ರವಾರ ಮಕ್ಕಳನ್ನು ಹೂಮಳೆಗೈಯುವ ಮೂಲಕ ಶಿಕ್ಷಕ ಸಿಬ್ಬಂದಿ ಅದ್ದೂರಿಯಾಗಿ ಸ್ವಾಗತಿಸಿದರು.