ಜಿಲ್ಲೆ

ಮಕ್ಕಳಿಗೆ ಸಮ್ಮಂದ ಅಡ್ಕೊವೊ ಪುಸ್ತಕ ವಿತರಣೆ

Kodagu

ಗೋಣಿಕೊಪ್ಪ: ಕೊಡವ ಕೂಟಾಳಿಯಡ ಕೂಟದ ವತಿಯಿಂದ ಹುದಿಕೇರಿ ಮಡ್‌ಕೋಡ್ ಮಂದ್‌ನಲ್ಲಿ ಪದ್ಧತಿ ಪಡಿಕನಾ ಸಮ್ಮಂದ ಅಡ್ಕನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಮ್ಮಂದ ಅಡ್ಕುವೊ ತರಬೇತಿಯನ್ನು ಚಂಗುಲಂಡ ಬೋಪಯ್ಯ ನಡೆಸಿಕೊಟ್ಟರು. 20ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ತರಬೇತಿ ಪಡೆದರು. ಸಮ್ಮಂದ ಅಡ್ಕೊವೊ ಪುಸ್ತಕವನ್ನು ಉಚಿತವಾಗಿ ನೀಡಲಾಯಿತು. ಇದರೊಂದಿಗೆ ಪಾನಿ ಮಂಡೆತುಣಿ ಕೆಟ್ಟೋ, ಚ್ಯಾಲೆ ಕೆಟ್ಟೋ, ಚೆಕ್ ವಸ್ತ್ರ ಕಟ್ಟುವ ವಿಧಾನವನ್ನು ಕೊಲ್ಲಿರ ಸಂಜು ಮಾಚಯ್ಯ ತಿಳಿಸಿಕೊಟ್ಟರು.

ಇಲ್ಲಿಯವರೆಗೂ 20ಕ್ಕೂ ಹೆಚ್ಚು ಮದುವೆ ಕಾರ್ಯದಲ್ಲಿ ಸಮ್ಮಂದ ಅಡ್ಕೊವೊ ಕಾರ್ಯ ನಡೆಸಿಕೊಟ್ಟಿರುವ ಚಂಗುಲಂಡ ಬೋಪಯ್ಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.

ಪ್ರಮುಖರಾದ ಚೆಕ್ಕೆರ ರಾಜೇಶ್, ಚಂಗುಲಂಡ ಸೂರಜ್, ಅಜ್ಜಿಕುಟ್ಟಿರ ಗಿರೀಶ್, ಕಿರಿಯಮಾಡ ಮಿಲನ್, ಚೆಕ್ಕೆರ ಚಂದ್ರಪ್ರಕಾಶ್, ಕೂಟದ ಅಧ್ಯಕ್ಷೆ ಚಿಮ್ಮಚಿರ ಪವಿತ ರಜನ್, ಸಾಂಸ್ಕೃತಿಕ ನಿರ್ದೇಶಕಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಕಾರ್ಯದರ್ಶಿ ಚಟ್ಟೋಳಿರ ಶರತ್ ಸೋಮಣ್ಣ ಇದ್ದರು.