ಮುದ್ದೇಬಿಹಾಳ ತಾಲೂಕಿನ ಯರಝರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಹಾಗೂ ಶತ ಸಂಭ್ರಮ, ಸನ್ಮಾನ ಸಮಾರಂಭದಲ್ಲಿ ಕೊಪ್ಪಳದ ಗವಿಮಠದ ಜಗದ್ಗುರು ಅಭಿನವ ಗವಿಸಿದ್ಧೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ತೋರಗಲ್‌ದ ಸಂಸ್ಥಾನ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯರು, ಮಲ್ಲಾಲಿಂಗಪ್ರಭುಗಳು, ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ, ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ, ಎಸ್.ಎಸ್. ಹುಲ್ಲೂರ ಇತರರಿದ್ದರು. 
ಜಿಲ್ಲೆ

ಮಕ್ಕಳಿಗೆ ಸದ್ಗುಣಗಳನ್ನು ಕಲಿಸುವ ಕಾರ್ಯ ಆಗಲಿ

ಮುದ್ದೇಬಿಹಾಳ: ಶಿಕ್ಷಣವೆಂದರೆ ಕೇವಲ ಫಿಸಿಕ್ಸ್, ಕೆಮಿಸ್ಟ್ರಿ, ಮ್ಯಾಥಮೆಟಿಕ್ಸ್, ಹಿಸ್ಟ್ರಿ, ಬಯೋಲಜಿ ಓದುವುದಷ್ಟೇ ಅಲ್ಲ. ದೇವರು ಜೀವನವೆಂಬ ಅವಕಾಶ ಕೊಟ್ಟಿದ್ದಾನೆ ಅದನ್ನು ಚೆನ್ನಾಗಿ ಬದುಕಲು ಕಲಿಯಬೇಕು. ಸೈನ್ಸ್ ಮುಗಿಯುತ್ತಲೇ ಹೇಗಾದರೂ ನೀಟ್ ಪಾಸಾಗಬೇಕು ಎಂಬ ತಂದೆ-ತಾಯಂದಿರ ಒತ್ತಡಕ್ಕೆ ದಷ್ಟಪುಷ್ಟ ಇರುವ ಮಕ್ಕಳು ಓದಿ ವಾಪಸ್ ಆಗುವಷ್ಟರಲ್ಲಿಯೇ ಕೃಶಕಾಯರಾಗಿರುತ್ತಾರೆ. ಬರೀ ನೀಟ್ ಪರೀಕ್ಷೆ ಪಾಸು ಮಾಡಿಸುವುದಲ್ಲ. ನಿಜ ಜೀವನದಲ್ಲೂ ಅವರು ನೀಟಾಗಿ ಜೀವನ ನಡೆಸುವುದನ್ನು ಕಲಿಸಬೇಕು ಎಂದು ಕೊಪ್ಪಳ ಗವಿಮಠದ ಜಗದ್ಗುರು ಅಭಿನವ ಗವಿಸಿದ್ಧೇಶ್ವರ ಶ್ರೀಗಳು ಹೇಳಿದರು.

ತಾಲೂಕಿನ ಯರಝರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಹಾಗೂ ಶತ ಸಂಭ್ರಮ ಸ್ಮರಣಗ್ರಂಥ ಬಿಡುಗಡೆ, ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ರಕ್ತಸುರಿಸಿ ಹೊಡೆದಾಡುವುದು ನಿಜವಾದ ಧರ್ಮವಲ್ಲ. ರಕ್ತ ಬೇಕಾದ ಒಬ್ಬ ರೋಗಿ ಆಸ್ಪತ್ರೆಗೆ ಹೋಗಿ ರಕ್ತ ಕೊಟ್ಟು ಬಂದರೆ ಅವನೇ ನಿಜವಾದ ಧರ್ಮವಂತ. ಧರ್ಮವಂತ ಎಂದರೆ ನಾನು ಸಂತೋಷ, ಸುಖವಾಗಿರಬೇಕು. ನನ್ನ ಸುತ್ತಲಿನವರು ಸಂತೋಷ, ಸುಖವಾಗಿರಬೇಕು ಎಂದು ಭಾವಿಸುವವ. ಇನ್ನೊಬ್ಬರ ಮನಸ್ಸಿಗೆ ನೋವು ಮಾಡದಂತೆ ಯಾರು ಬದುಕುತ್ತಾರೆಯೋ ಅವರೇ ನಿಜವಾದ ಧರ್ಮವಂತರು ಎಂದರು.

ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಮಾತನಾಡಿ, ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿಕೊಡಬೇಕು. ಅದರಲ್ಲಿಯೂ ಹೆಣ್ಣು ಮಕ್ಕಳನ್ನು ಶಾಲೆಗಳಿಗೆ ಕಳಿಸಬೇಕು. ಚಿಕ್ಕವರಿರುವಾಗಲೇ ಅವರಿಗೆ ಮದುವೆ ಮಾಡಿ ಅವರ ಕನಸುಗಳನ್ನು ಹಾಳುಮಾಡಬೇಡಿ. ಶತಮಾನ ಕಂಡ ಶಾಲೆಯಲ್ಲಿ ಅನೇಕ ಸಾಧಕರಾಗಿದ್ದು ಈಗಿನ ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕರು ತಾವು ಪಡೆದುಕೊಳ್ಳುವ ಸಂಬಳಕ್ಕೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುತ್ತಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯರಝರಿ ಶಾಲೆಗೆ ಇ ಕ್ಲಾಸ್ ಮಂಜೂರಿ ಮಾಡಿಕೊಡುವೆ ಎಂದು ಭರವಸೆ ನೀಡಿದರು.

ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ, ರಾಮದುರ್ಗ ತಾಲೂಕಿನ ಚನ್ನಮಲ್ಲ ಶಿವಾಚಾರ್ಯರು, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಾಗಲಕೋಟೆ ಜಿಲ್ಲಾ ಸರ್ಕಾರಿ ಆಸ್ಪತ್ರೆ ಸರ್ಜನ್ ಡಾ. ಆರ್.ಸಿ. ನಾಗಾವಿ, ನಿವೃತ್ತ ಡಿವೈಎಸ್ಪಿ ಎಸ್.ಎಸ್. ಹುಲ್ಲೂರ, ಬೆಳಗಾವಿ ಸಿಪಿಐ ಆರ್.ಎಸ್. ಬಿರಾದಾರ ಮಾತನಾಡಿದರು. ಯರಝರಿ ಮಲ್ಲಾಲಿಂಗಪ್ರಭು ಸ್ವಾಮೀಜಿ, ಬಂಟನೂರ ಕಾಳಿಕಾದೇವಿ ಗಚ್ಚಿನಮಠದ ಸರೋಜಮ್ಮನವರು ಸಾನ್ನಿಧ್ಯ ವಹಿಸಿದ್ದರು.

ಎಸ್‌ಡಿಎಂಸಿ ಅಧ್ಯಕ್ಷ ಎಲ್.ಎಸ್. ಹುಲ್ಲೂರ, ಉದ್ಯಮಿಗಳಾದ ಶರಣು ಸಜ್ಜನ, ಎ. ಗಣೇಶ, ಮುಖಂಡರಾದ ಮಲಕೇಂದ್ರಗೌಡ ಪಾಟೀಲ, ಮಲ್ಲಣ್ಣ ಅಪರಾಧಿ, ಬಾಲಾಜಿ ಶುಗರ್ಸ್‌ನ ರಾಹುಲಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಯರಝರಿ ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಗುರಿಕಾರ, ಬಿಇಒ ಎಸ್.ಜೆ. ನಾಯಕ, ಅಧಿಕಾರಿಗಳಾದ ಎಸ್.ಬಿ. ಹೊಲ್ದೂರ, ಬಿ.ವೈ. ಕವಡಿ, ಎಚ್.ಎ. ಮೇಟಿ, ಪಿಡಿಒ ವಿಜಯಾ ಮುದಗಲ್, ದೀಪಕ್ ಬಿ.ಡಿ., ಜಿ.ಎಸ್. ಇಬ್ರಾಹಿಂಪುರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್. ಮುದ್ನೂರ, ಶಿಕ್ಷಕರಾದ ಎಚ್.ಐ. ಮ್ಯಾಗೇರಿ, ಆಯ್.ಎಂ. ಅಗಸರ, ಜಿ. ಗೀತಾಂಜಲಿ, ಎಸ್.ಪಿ. ಮಾದರ, ಆರ್.ಎ. ಮೇರೆಖೋರ, ಕೆ.ಐ. ಅವಟಿ, ಡಿ.ಸಿ. ಚಲವಾದಿ, ಸುಕನ್ಯಾ ಪಾಟೀಲ ಇದ್ದರು.
ಸಂಗಮೇಶ ಶಿವಣಗಿ ಪ್ರಾರ್ಥಿಸಿದರು. ಸಿ.ಎಸ್. ಇಬ್ರಾಹಿಂಪುರ ಸ್ವಾಗತಿಸಿದರು. ಪ್ರಭಾರ ಮುಖ್ಯಗುರು ಶಿವಪುತ್ರ ಮೇಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಲ ಹೂಗಾರ, ಹೇಮಾ ಬಿರಾದಾರ, ಸಿದ್ದನಗೌಡ ಬಿಜ್ಜೂರ ನಿರ್ವಹಿಸಿದರು. ಎ.ಬಿ. ಹಡಪದ ವಂದಿಸಿದರು.

ಸನ್ಮಾನ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಿವೃತ್ತ ಡಿವೈಎಸ್ಪಿ ಎಸ್.ಎಸ್. ಹುಲ್ಲೂರ, ಬೆಳಗಾವಿ ಸಿಪಿಐ ಆರ್.ಎಸ್. ಬಿರಾದಾರ, ಸರ್ಜನ್ ಡಾ. ಆರ್.ಸಿ. ನಾಗಾವಿ, ನೇತ್ರತಜ್ಞೆ ಡಾ. ಜಯಶ್ರೀ ನಾಗಾವಿ, ವೈದ್ಯಾಧಿಕಾರಿ ಡಾ. ರಂಗನಾಥ ವೈದ್ಯ, ಕೊಪ್ಪಳದ ಡಾ. ವೀರಯ್ಯ ಹಿರೇಮಠ,ನಿವೃತ್ತ ಶಿಕ್ಷಕರಾದ ಎಸ್.ಸಿ. ಹುಲ್ಲೂರ, ತಿಪ್ಪಣ್ಣ ಮ್ಯಾಗೇರಿ, ಸಂಗಮೇಶ ಹವಾಲ್ದಾರ, ಎಚ್.ಬಿ. ಮೇಟಿ, ಬಿ.ಜಿ. ಹೂಗಾರ, ಆರ್.ಎಸ್. ದೊಡಮನಿ, ಎಂ.ಬಿ. ಸಂಗಮದ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಗ್ರಾಮದಲ್ಲಿ ಸರಸ್ವತಿ ದೇವಿ ಭಾವಚಿತ್ರ ಹಾಗೂ ನಿವೃತ್ತ ಶಿಕ್ಷಕರನ್ನು ಅಲಂಕೃತ ಟ್ರಾೃಕ್ಟರ್‌ನಲ್ಲಿ ಮೆರವಣಿಗೆ ನಡೆಸಲಾಯಿತು.