ಜಿಲ್ಲೆ

ಮಕ್ಕಳಿಗೆ ಸಂಸ್ಕಾರ ಬೆಳೆಸೋಣ

 ಕಲಬುರಗಿ: ಮಕ್ಕಳಿಗೆ ಸಂಸ್ಕಾರದ ಬೀಜ ಬಿತ್ತಿ ಪ್ರತಿಭಾವಂತರನ್ನು ಬೆಳೆಸಿ ಆರ‍್ಶ ಸಮಾಜ ಕಟ್ಟೋಣ ಎಂದು ರಂಗಾಯಣದ ನರ‍್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಹೇಳಿದರು.

ಡಾ.ಪಿ.ಎಸ್​.ಶಂಕರ ಪ್ರತಿಷ್ಠಾನ, ದಕ್ಷಿಣ ಕನ್ನಡ ಸಂ ಮತ್ತು ರೋಟರಿ ಕ್ಲಬ್​ ಸಂಯುಕ್ತ ಆಶ್ರಯದಲ್ಲಿ ಮಾ.೩೦ರಂದು ರೋಟರಿ ಸಭಾಂಗಣದಲ್ಲಿ ಭಾನುವಾರ ರ‍್ಪಡಿಸಿದ್ದ ಚೈತ್ರೋತ್ಸವ -೨೦೨೫ರ ನಿಮಿತ್ತ ವಿಶೇಷ ಸಾಧಕ ಮಕ್ಕಳಿಗೆ "ಚಿಗುರು ಚಿನ್ಮಯ" ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಅವರ ಕನಸಿನಂತೆ ಬೆಳೆಸಲು ಬಿಡಬೇಕಾಗಿದೆ. ಅಂಕದ ಬೆನ್ನು ಹತ್ತಿ ವೈದ್ಯರು ಇಂಜಿನಿಯರ್​ಗಳನ್ನು ಸೃಷ್ಟಿಸಲು ಹೊರಟರೆ ಸಾಹಿತ್ಯ, ಸಂಗೀತ, ನಾಟಕ, ಕ್ರೀಡಾ ೇತ್ರದಲ್ಲಿ ಪ್ರತಿಭಾವಂತರನ್ನು ಕಾಣುವುದು ಸಾಧ್ಯವಿದೆ. ಎಳವೆಯಲ್ಲಿ ಪ್ರತಿಭೆಯನ್ನು ಗುರುತಿಸಿದರೆ ಭವಿಷ್ಯದಲ್ಲಿ ಸಾಧಕರಾಗಿ ಹೊರಹೊಮ್ಮುತ್ತಾರೆ. ಅದಕ್ಕೆ ಶಿಬಿರ, ತರಬೇತಿಗಳಿಗೆ ಮಕ್ಕಳನ್ನು ಕಳುಹಿಸಿ, ಬಹುಮುಖ ವ್ಯಕ್ತಿತ್ವ ಅರಳುವಂತೆ ಮಾಡಬೇಕು ಎಂದರು.

ಡಾ.ಪಿ.ಎಸ್​.ಶಂಕರ ಪ್ರಾಸ್ತಾವಿಕ ಮಾತನಾಡಿ, ೨೫ ರ‍್ಷದಿಂದ ಪ್ರತಿಷ್ಠಾನವೂ ಶಿಕ್ಷಣ, ಆರೋಗ್ಯ, ಸಾಂಸತಿಕ ಕ್ರೀಡೆ, ಸಾಹಿತ್ಯ, ಪ್ರಕಟಣೆ ೇತ್ರದಲ್ಲಿ ಅಪಾರ ಕೊಡುಗೆ ನೀಡಿ, ಈ ಭಾಗದ ಪ್ರಗತಿಗೆ ಕೈ ಜೋಡಿಸಲಾಗಿದೆ. ಚಿಗುರು ಚಿನ್ಮಯ ಪ್ರಶಸ್ತಿ ಪುರಸತರು ಶ್ರೇಷ್ಠ ಸಾಧಕರಾಗಿ ಹಲವು ರಂಗದಲ್ಲಿ ಮಿಂಚಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರತಿಷ್ಠಾನದ ಕರ‍್ಯಾಧ್ಯಕ್ಷ ಡಾ.ಎಚ್​.ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಸಂದ ಅಧ್ಯ ಚಂದ್ರಶೇಖರ ಶೆಟ್ಟಿ, ಪ್ರಮುಖರಾದ ಡಾ.ಸದಾನಂದ ಪರ‍್ಲ, ಡಾ.ವಿಕ್ರಂ ಸಿದ್ದಾರೆಡ್ಡಿ, ಸಕ್ರೆಪ್ಪ ಗೌಡ, ಸದಾನಂದ ಪಾಟೀಲ್​, ಪುರಂದರ ಭಟ್​, ಲತಾ, ಶ್ರೀನಿವಾಸ್​ ಆಚರ‍್ಯ, ಡಾ.ಇಂದಿರಾ ವೀರಭದ್ರಪ್ಪ, ಡಾ.ರಾಜಶ್ರೀ ರೆಡ್ಡಿ, ಡಾ.ವೀಣಾ ಸಿದ್ಧಾರಡ್ಡಿ, ರವಿ ಮುಕ್ಕಾ, ಶಾಂತಪ್ಪ ಸೂರನ್​, ರಾಮಕೃಷ್ಣ ರೆಡ್ಡಿ, ಸಿಎ ಮಣಿಲಾಲ್​ ಶಹಾ, ಡಾ.ದಡೇದ್​, ಡಾ.ಸಂಗ್ರಾಮ ಬಿರಾದಾರ್​ ಇತರರಿದ್ದರು. ರೋಟರಿ ಕ್ಲಬ್​ ಅಧ್ಯ ಚನ್ನಬಸಪ್ಪ ಸಮಾನಿ ಸ್ವಾಗತಿಸಿದರು. ಡಾ.ರಾಜೇಂದ್ರ ಕೊಂಡ ವಂದಿಸಿದರು. ಪ್ರೊ.ನರೇಂದ್ರ ಬಡಶೇಷಿ ನಿರೂಪಣೆ ಮಾಡಿದರು. ಸುಪ್ರಿಯಾ ಸುತಾರ ನೃತ್ಯ ಪ್ರರ‍್ಶಿಸಿದರು.