ಹಿರೇಬಾಗೇವಾಡಿ: ಮಕ್ಕಳಿಗೆ ಮೌಲ್ಯಾಧಾರಿತ ಶಿಣ ಕೊಡಿಸಿ ಸಂಸ್ಕಾರವಂತರನ್ನಾಗಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಗ್ರೂಪ್ ವಿದ್ಯಾವರ್ಧಕ ಸಂದ ಅಧ್ಯ ಬಿ.ಜಿ. ವಾಲಿಇಟಗಿ ಹೇಳಿದರು.
ಇಲ್ಲಿನ ಶಿವಾಲಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಬಿ.ಸಿ.ಟ್ರಸ್ಟ್ ಹಿರೇಬಾಗೇವಾಡಿ ಮತ್ತು ಬ್ಯಾಂಕ್ ಆ್ ಮಹಾರಾಷ್ಟ್ರ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುಜ್ಞಾನನಿಧಿ ಶಿಷ್ಯವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಜನಜಾಗತಿ ಸಮಿತಿ ಸದಸ್ಯ ಸುರೇಶ ಇಟಗಿ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಕಾರ್ಯಕ್ರಮಗಳು ಸಮಾಜದಲ್ಲಿ ಜಾಗೃತಿ ಮೂಡಿಸಿ ಜನರಿಗೆ ಅನುಕೂಲಕರವಾಗಿವೆ ಎಂದರು. ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ ಸುಜ್ಞಾನನಿಧಿ ಮಾತನಾಡಿದರು. 62 ಲಾನುಭವಿಗಳಿಗೆ ಶಿಷ್ಯವೇತನ ವಿತರಿಸಲಾಯಿತು. ಗ್ರಾಪಂ ಅಧ್ಯೆ ಸ್ಮಿತಾ ಪಾಟೀಲ ಉದ್ಘಾಟಿಸಿದರು. ಸುರೇಶ ಇಟಗಿ ಅಧ್ಯತೆ ವಹಿಸಿದ್ದರು. ಎಎಸ್ಐ ಉದಯ ಪಾಟೀಲ, ಡಾ.ಎ್.ಎಸ್.ಪಾಟೀಲ, ಚಂದ್ರಪ್ಪ ಶಿಂತ್ರಿ, ಯೋಜನಾಧಿಕಾರಿ ಯೋಗೀಶ, ಗಂಗಾ ಪಾಟೀಲ, ಮಹಾದೇವಿ ಇಂಚಲ ಇತರರು ಇದ್ದರು.