ಚಿಕ್ಕೋಡಿ ಪಟ್ಟಣದಲ್ಲಿ ಆಯೋಜಿಸಿದ್ದ ಶರಣರ ಜೀವನ ದರ್ಶನ ಪ್ರವಚನ ಮಾಲಿಕೆಯಲ್ಲಿ ಪಿಎಸ್​ಐ ಬಸಗೌಡ ನೇರ್ಲಿ ಅವರನ್ನು ಚಿಕ್ಕೋಡಿ ಸಂಪಾದನಾ ಶ್ರೀಗಳು ಸನ್ಮಾನಿಸಿದರು. ಶೇಖರ ಚಿತವಾಟಗಿ, ಸುಮೇದ ಚೌಗಲಾ, ನ್ಯಾಯವಾದಿ ಯರನಾಳೆ, ಸಿ.ಎ.ಪಾಟೀಲ ಇತರರಿದ್ದರು. 
ಜಿಲ್ಲೆ

ಮಕ್ಕಳಿಗೆ ಸಂಸ್ಕಾರ ಅವಶ್ಯ

ಚಿಕ್ಕೋಡಿ: ಮಕ್ಕಳು ಜೀವನದಲ್ಲಿ ನಿಯಂತ್ರಣ ತಪ್ಪಿದರೆ ಪಾಲಕರು ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಅವರಿಗೆ ಉತ್ತಮ ಶಿಣ ಜತೆಗೆ ಸಂಸ್ಕಾರ ನೀಡಬೇಕು ಎಂದು ಚಿಕ್ಕೋಡಿ ಸಂಪಾದನಾ ಸ್ವಾಮೀಜಿ ಹೇಳಿದರು.

ಪಟ್ಟಣದ ಚಿಕ್ಕೋಡಿ ಸಂಪಾದನಾ ಮಠದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಶರಣರ ಜೀವನ ದರ್ಶನ ಪ್ರವಚನ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. ಪಿಎಸ್​ಐ ಬಸಗೌಡ ನೇರ್ಲಿ ಮಾತನಾಡಿ, ಪಾಲಕರು ಮಕ್ಕಳಿಗೆ ಶಿಣದ ಜತೆಗೆ ಸಂಸ್ಕಾರ ಕಲಿಸಿಕೊಡಬೇಕಾದ ಅಗತ್ಯವಿದೆ ಎಂದರು. ಶೇಖರ ಚಿತವಾಟಗಿ, ಸುಮೇದ ಚೌಗಲಾ, ನ್ಯಾಯವಾದಿ ಯರನಾಳೆ, ಸಿ.ಎ.ಪಾಟೀಲ ಇತರರಿದ್ದರು.