ಮೋರಟಗಿ: ಶಿಕ್ಷಣ ಮತ್ತು ಸಂಸ್ಕಾರ ಜೀವನದ ಎರಡು ಕಣ್ಣುಗಳಿದ್ದಂತೆ, ಮಕ್ಕಳಿಗೆ ಕೇವಲ ಶಿಕ್ಷಣ ನೀಡಿದರೆ ಸಾಲದು ಶಿಕ್ಷಣದ ಜತೆಗೆ ಸಂಸ್ಕಾರ ನೀಡಿದರೆ ಮಾತ್ರ ಆ ವಿದ್ಯಾರ್ಥಿ ದೇಶದ ಉತ್ತಮ ನಾಗರಿಕನಾಗಲು ಸಾಧ್ಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಗ್ರಾಮದ ಸಿದ್ಧರಾಮೇಶ್ವರ ಶಿಕ್ಷಣ ಸೇವಾ ಸಮೀತಿಯ ಕಾಲೇಜಿನ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪದವಿ ಕಾಲೇಜಿನ ನೂತನ ಕಟ್ಟಡದ ಶಂಕುಸ್ಥಾಪನೆ, ನೂತನ ಶಾಸಕರಿಗೆ ಸನ್ಮಾನ ಹಾಗೂ 2023-24ನೇ ಸಾಲಿನ ಪ್ರೌಢ, ಪದವಿಪೂರ್ವ ಪದವಿಯ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಿಂದಗಿ ಕ್ಷೇತ್ರದ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಶಾಸಕನಾಗಿ ಆಯ್ಕೆ ಮಾಡಿದ್ದೀರಿ. ನಿಮ್ಮ ವಿಶ್ವಾಸಕ್ಕೆ ಧಕ್ಕೆ ತರದೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದ ಅವರು, ತಮ್ಮ ತಂದೆಯ ಸ್ಮರಣಾರ್ಥ ನೂತನ ಕಾಲೇಜಿಗೆ 1ಲಕ್ಷ ರೂ. ನಗದು ನೀಡಿದರು.
ಸಂಸ್ಥೆಯ ಅಧ್ಯಕ್ಷ ಬಿ.ಐ. ಮಸಳಿ, ಕಾರ್ಯದರ್ಶಿ ಎಂ.ಎಸ್. ಪಾಟೀಲ, ಉಪಾಧ್ಯಕ್ಷ ಎಂ.ಜಿ. ಮಂದೇವಾಲಿ, ನಿರ್ದೇಶಕರಾದ ವಿ.ಎಸ್. ಪಾಟೀಲ, ಸಿದ್ದನಗೌಡ ಪಾಟೀಲ, ಶಿವಪ್ಪ ಸಿಂಗಾಡಿ, ಡಿ.ಎಸ್. ಬಳಗುಂಪಿ, ಆಡಳಿತಾಧಿಕಾರಿ ಬಿ.ಎಸ್. ಪಾಟೀಲ, ಶ್ರೀಶೈಲಪ್ಪಗೌಡ ಪಾಟೀಲ, ಮಲ್ಲು ಗೋಲಾ, ಮೈಬೂಬಸಾಬ ಕಣ್ಣಿ, ಮುಖ್ಯಗುರು ಬಿ.ಆರ್. ಬಿರಾದಾರ, ರಜಾಕ ಬಾಗವಾನ, ಬಿ.ಐ. ಕಣ್ಣಿ, ಸೋಹೇಲ ಮುಲ್ಲಾ, ಟಿ.ಎನ್. ಲಮಾಣಿ, ವಿ.ಸಿ. ಗೋಲಾ ಇತರರಿದ್ದರು.