ಹುಬ್ಬಳ್ಳಿ: ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಸಾಲದು. ಉತ್ತಮ ಸಂಸ್ಕಾರ ಕೊಡಬೇಕು. ಆ ನೆಲೆಯಲ್ಲಿ ಸದೃಢ ದೇಶ ಕಟ್ಟಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ತಾಲೂಕಿನ ನೂಲ್ವಿಯಲ್ಲಿ ಶನಿವಾರ ಗ್ರಾಮ ದೇವಿಯರ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಧರ್ಮ ಎಂದರೆ ಪೂಜೆ ಪುನಸ್ಕಾರ ಅಲ್ಲ. ನಮ್ಮ ಜೀವನ ವಿಧಾನ. ಜಗತ್ತಿನ ಬಹಳ ದೇಶಗಳ ಜನರಲ್ಲಿ ಶಾಂತಿ, ನೆಮ್ಮದಿ ಇಲ್ಲ. ನಾವು ಧರ್ಮದ ಮಾರ್ಗದಲ್ಲಿ ನಡೆಯುತ್ತಿರುವುದರಿಂದ ನಮ್ಮಲ್ಲಿ ಶಾಂತಿ, ನೆಮ್ಮದಿ ಇದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಕುಂದಗೋಳದ ಶ್ರೀ ಅಭಿನವ ಬಸವಣ್ಣನವರು ಆಶೀರ್ವಚನ ನೀಡಿದರು. ಛಬ್ಬಿಯ ಅಜಿತ ಬಸಾಪುರ್ ನೇತೃತ್ವದಲ್ಲಿ ಅಲ್ಲಿಕೇರಿ ಬಸವೇಶ್ವರ ಜಾನಪದ ಕಲಾತಂಡದವರು ಜಾನಪದ ಉತ್ಸವ ಕಾರ್ಯಕ್ರಮ ನಡೆಸಿಕೊಟ್ಟರು. ಮುತ್ತನ ಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪಿ.ಸಿ. ಸಿದ್ದನಗೌಡ್ರ, ಶಾಸಕ ಎಂ. ಆರ್. ಪಾಟೀಲ, ಶಿವಕುಮಾರ ಗೌಡ ಪಾಟೀಲ, ಶಂಕರಗೌಡ ಸಿದ್ದನಗೌಡ್ರ, ನಿಂಗನಗೌಡ ಮರಿಗೌಡ್ರ, ಚಿದಾನಂದಗೌಡ ವೀರನಗೌಡ್ರ, ಮಯೂರ ಕಾಂಬ್ಳೆ, ಮಲ್ಲಿಕಾರ್ಜುನ ಹೊರಕೇರಿ, ಉಮೇಶ ಬಸೂರ, ಜಗನ್ನಾಥಗೌಡ ಸಿದ್ದನಗೌಡ್ರ, ಕಲ್ಲನಗೌಡ ಮೊಗಣ್ಣವರ, ದೇವೇನಗೌಡ ಹುತ್ತನಗೌಡ್ರ, ಮಂಜುನಾಥ ಕೊಪ್ಪದ, ಅಶೋಕ ಅಗಡಿ, ಇತರರು ಇದ್ದರು. ಮಹದೇವ ಗೌಡ ಹುತ್ತನಗೌಡ್ರಸ್ವಾಗತಿಸಿದರು. ಜಿ.ಎಚ್. ಕಟ್ಟಿ ನಿರೂಪಿಸಿದರು. ನಾಗನಗೌಡ ದೊಡ್ಡಗೌಡ್ರು ವಂದಿಸಿದರು.