ಜಿಲ್ಲೆ

ಮಕ್ಕಳಿಗೆ ಶಿಕ್ಷಣ ಕೊಡಿಸಿ, ಸಂಘಟಿತರಾಗಿ

ಹುಮನಾಬಾದ್: ಶ್ರಮ ಜೀವಿಗಳಾದ ಶರಣ ಹಡಪದ ಅಪ್ಪಣ್ಣ ಸಮಾಜದವರು ಮಕ್ಕಳಿಗೆ ಗುಣಮಟ್ಟದ ಶಿP್ಷÀಣ ಕೊಡಿಸಿ, ಸಂಘಟಿತರಾಗಬೇಕು ಎಂದು ಶಹಾಬಾದ್‌ನ ಶ್ರೀ ರಾಜಶಿವಯೋಗಿ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಶ್ರೀ ಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದಿAದ ಹಡಪದ ಅಪ್ಪಣ್ಣನವರ ಮನೆ ಮನೆಯಲ್ಲಿ ಜ್ಯೋತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಎಲ್ಲ ಕ್ಷೇತ್ರದಲ್ಲೂ ಅತ್ಯಂತ ಹಿಂದುಳಿದಿರುವ ಹಡಪದ ಅಪ್ಪಣ್ಣ ಸಮಾಜದ ಜನರ ಅಭಿವೃದ್ಧಿಗೆ ಸರ್ಕಾರ ವಿಶೇಷ ಕಾಳಜಿ ವಹಿಸಬೇಕು. ಸರ್ಕಾರದ ಯೋಜನೆ ಪಡೆಯಬೇಕಾದರೆ ನಾವು ಸಂಘಟಿತರಾದಾಗ ಮಾತ್ರ ಸಾಧ್ಯ. ಶರಣರ ತತ್ವಾದರ್ಶ ಮೈಗೂಡಿಸಿಕೊಳ್ಳಬೇಕು ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ, ವರ್ಗಾವಣೆಯಾದ ಭಗವಂತ ತೆರಗಬಾಳ ಅವರನ್ನು ಸನ್ಮಾನಿಸಲಾಯಿತು. ರವೀಂದ್ರನಾಥ ಡಿಗ್ಗಿ ವಹಿಸಿದ್ದರು. ಗೌರವಾಧ್ಯಕ್ಷ ಗೋರಕನಾಥ ಹಡಪದ, ಪ್ರಮುಖರಾದ ಮಲ್ಲಿಕಾರ್ಜುನ ನೀಲಕಂಠೆ, ರೇವಣಸಿದ್ದಪ್ಪ ಹಡಪದ ಮರಗುತ್ತಿ, ಭೀಮರಾವ ತೆಂಗಳಿ, ಭಗವಂತ ಹಡಪದ, ಶಶಿಕಾಂತ ಹಡಪದ, ಮಹೇಶ ಹಡಪದ, ವೀರಭದ್ರಪ್ಪ ಹಡಪದ, ಉಪಾಧ್ಯP್ಷÀ ಕಾಳಪ್ಪ ಹಡಪದ, ಕಾರ್ಯದರ್ಶಿ ಆಕಾಶ ಹಡಪದ ಧುಮ್ಮನಸೂರ, ಖಜಾಂಚಿ ಸಂಗಮೇಶ ಹಡಪದ, ವೀರಣ್ಣ ಹಡಪದ, ಶಂಭು ಹಡಪದ, ಸೂರ್ಯಕಾಂತ ಹಡಪದ, ಅಶೋಕ ಸಿಂಧನಕೇರಾ, ವಿಜಯ ಕುಮಾರ, ಆನಂದ ಹಡಪದ, ಶಂಕರ ಹಡಪದ, ಮಲ್ಲಿಕಾರ್ಜುನ ಹಡಪದ, ಸಿದ್ದಪ್ಪ ಹಡಪದ, ಶಿವಕುಮಾರ ಹಡಪದ, ಆಕಾಶ ಹಡಪದ, ಲಕ್ಷಿö್ಮÃಕಾಂತ ಹಡಪದ, ಬಸವರಾಜ ಹಡಪದ, ಗುರುನಾಥ ಇತರರಿದ್ದರು.