ಬಸವನಬಾಗೇವಾಡಿಯ ಬಸವಭವನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಉತ್ತಮ ಶಾಲೆಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಶಾಸಕ ರಾಜುಗೌಡ ಪಾಟೀಲ, ಶಿವಪ್ರಕಾಶ ಶಿವಚಾರ್ಯರು, ಸಿದ್ಧಲಿಂಗ ಶ್ರೀಗಳು, ಈರಣ್ಣ ಪಟ್ಟಣಶೆಟ್ಟಿ, ಸುರೇಶ ಹಾರಿವಾಳ, ಬಿ.ಕೆ. ಕಲ್ಲೂರ ಇತರರಿದ್ದರು. 
ಜಿಲ್ಲೆ

ಮಕ್ಕಳಿಗೆ ವಿದ್ಯೆಗಿಂತ ಸಂಸ್ಕಾರ ದೊಡ್ಡದು

ಬಸವನಬಾಗೇವಾಡಿ: ಶಿಕ್ಷಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡುವ ಕಾರ್ಯ ನಡೆದಾಗ ಮಾತ್ರ ಆ ಮಗು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯ ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಹೇಳಿದರು.

ಪಟ್ಟಣದ ವಿಜಯಪುರ ರಸ್ತೆಯ ಬಸವಭವನದಲ್ಲಿ ಜಿಪಂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಾಲೆಗಳಿಗೆ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಒಬ್ಬ ವ್ಯಕ್ತಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಹೊರ ಹೊಮ್ಮಬೇಕಾದರೆ ಆತನಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿದಾಗ ಮಾತ್ರ ಉತ್ತಮ ಪ್ರಜೆಯಾಗಲು ಸಾಧ್ಯ. ಇಂದು ಶಿಕ್ಷಕರ ನೈತಿಕಮಟ್ಟ ಕಮ್ಮಿಯಾಗುತ್ತಿದೆ. ಎಂದರೆ ತಪ್ಪಲ್ಲಾ ಯಾಕೆಂದರೆ ಒಂದು ಕಾಲದಲ್ಲಿ ಕಲಿಸಿದ ಗುರು ಸಾರ್ವಜನಿಕ ಸ್ಥಳದಲ್ಲಿ ಇದ್ದಾಗ ಆ ವಿದ್ಯಾರ್ಥಿ ಇರತಿರಲಿಲ್ಲ. ಆದರೆ ಇಂದು ಶಿಕ್ಷಕರೊಂದಿಗೆ ವಿದ್ಯಾರ್ಥಿ ಹೋಟೆಲ್‌ಗಳಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಹೀಗಾಗಿ ಶಿಕ್ಷಕನ ನೈತಿಕಮಟ್ಟ ಕಮ್ಮಿಯಾಗುತ್ತದೆ. ನೈತಿಕಮಟ್ಟ ಹೆಚ್ಚಿಸಿಕೊಳ್ಳಲು ಶಿಕ್ಷಕರು ಮುಂದಾಗಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಪಟ್ಟಣದ ಹಿರೇಮಠದ ಶಿವಪ್ರಕಾಶ ಶಿವಚಾರ್ಯರು ಮಾತನಾಡಿ, ಒಬ್ಬ ಮನುಷ್ಯ ಎಷ್ಟೇ ಆಸ್ತಿ, ಅಂತಸ್ತು, ಐಶ್ವರ್ಯ, ಸಂಪತ್ತನ್ನು ಗಳಿಸಿದರೂ ಒಂದು ದಿನ ಕಳೆದು ಹೋಗುತ್ತದೆ. ಆದರೆ ವಿದ್ಯೆ ಎಂಬ ಸಂಪತ್ತು ಯಾರಿದಂಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದರು.

ನಮ್ಮ ಜೀವನದಲ್ಲಿ ಅಂತಹ ಉನ್ನತ ಸ್ಥಾನಮಾನ ಗಳಿಸಿದರೂ ಕೂಡಾ ಅದಕ್ಕೆ ಮೂಲಪೀಠ ಶಿಕ್ಷಕ ನೀಡಿದ ಜ್ಞಾನದ ಜ್ಯೋತಿಯೇ ಕಾರಣ ಶಿಕ್ಷಕರ ವೃತ್ತಿ ಪವಿತ್ರವಾದ ವೃತ್ತಿ ಎಂದರು.

ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ಸರ್ಕಾರಿ ಶಾಲೆಗಳಲ್ಲಿ ಸಿಗುವ ಶಿಕ್ಷಣ ಬೇರೆ ಎಲ್ಲಿ ಸಿಗುವುದಿಲ್ಲ. ಆದರೆ ಸರ್ಕಾರ ಅಂತಹ ಶಾಲೆಗಳ ಅಭಿವೃದ್ಧಿಗೆ ಮುಂದಾಗಬೇಕು. ನಾವು ಕಲಿತ ಶಾಲೆಗಳ ಜಿರ್ಣೋದ್ಧಾರಕ್ಕೆ ಕೈ ಜೋಡಿಸುವ ಕಾರ್ಯಗಳಾಗಬೇಕು ಎಂದರು.

ಈರಣ್ಣ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಹಾರಿವಾಳ, ಬಿ.ಕೆ. ಕಲ್ಲೂರ, ಶಿವನಗೌಡ ಬಿರಾದಾರ, ಗುರುನಗೌಡ ಪಾಟೀಲ, ಕೆ.ಆರ್. ಲಮಾಣಿ, ಎಸ್.ಎಸ್. ಅವಟಿ, ಶಿವಾನಂದ ಮಂಗಾನವರ, ಐ.ಬಿ. ಹಿರೇಮಠ, ಎ.ಎಲ್. ಗಂಗೂರ, ಎಸ್.ಎಂ. ದಳವಾಯಿ ಇತರರಿದ್ದರು.

ಬಿಇಒ ವಸಂತ ರಾಠೋಡ ಪ್ರಾಸ್ತಾವಿಕ ಮಾತನಾಡಿದರು. ಪಿ.ಯು. ರಾಠೋಡ ಸ್ವಾಗತಿಸಿದರು. ಅಶೋಕ ಹಂಚಲಿ, ಶಂಕರ ಬಾಗೇವಾಡಿ ನಿರೂಪಿಸಿದರು. ಶರಣಪ್ಪ ಮಾದರ ವಂದಿಸಿದರು. ಇದೇ ಸಂದರ್ಭದಲ್ಲಿ ತಾಲೂಕಿನ ವಿವಿಧ ಉತ್ತಮ ಶಾಲೆಗಳಿಗೆ ಪ್ರಶಸ್ತಿ ಪ್ರಧಾನ ಜರುಗಿತು.

ಪೋಟೋ ಪೈಲ : 5- ಬಿಬಿಜಿಡಿ -01 (ಎ)
ಬಸವನಬಾಗೇವಾಡಿ ಪಟ್ಟಣದ ಬಸವಭವನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಗೆ ಶಾಸಕ ರಾಜುಗೌಡ ಪಾಟೀಲ ಚಾಲನೆ ನೀಡಿದರು. ಶಿವಪ್ರಕಾಶ ಶಿವಚಾರ್ಯರು, ಸಿದ್ಧಲಿಂಗ ಶ್ರೀಗಳು, ಈರಣ್ಣ ಪಟ್ಟಣಶೆಟ್ಟಿ, ಸುರೇಶ ಹಾರಿವಾಳ, ಬಿ.ಕೆ. ಕಲ್ಲೂರ ಇತರರಿದ್ದರು.