ನೇಸರಗಿ: ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಸಮೀಪದ ಹೊಸಕೋಟಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಬುಧವಾರ ಹಣಬರಹಟ್ಟಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭೆ ಗುರುತಿಸಲು ಉತ್ತಮ ವೇದಿಕೆಯಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪಾಲಕರು ಮಕ್ಕಳಿಗೆ ಮೌಲ್ಯಯುತವಾದ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದರು.
ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಬಿಇಒ ಎ.ಎನ್. ಪ್ಯಾಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಸ್.ಡಿ.ಗಂಗಣ್ಣವರ, ಬಸಪ್ಪ ಮುಂಡಗಿ, ನಿಂಗಪ್ಪ ಅರಕೇರಿ, ಲಕ್ಷ್ಮೀ ತಳವಾರ, ಸದಾನಂದ ಖೋದಾನಪುರ, ಮಹೇಶ ಯರಗಟ್ಟಿ, ಎಸ್.ಬಿ.ಸಂಗನಗೌಡ್ರ, ಪ್ರಕಾಶ ಉಳವಿ, ಸುಭಾಷ ಮಲ್ಲಾಪುರ, ಎಸ್.ಎಂ.ಬಾಳೇಕುಂದರಗಿ, ಶಿವಾನಂದ ಕಲ್ಲೂರ, ವೈ.ಎಲ್.ಶೀಗಿಹಳ್ಳಿ, ಆನಂದ ಖೋದಾನಪುರ, ಬಿ.ಬಿ.ಸಾರಾಯದ, ಎಸ್.ಐ.ಮಿರ್ಜನ್ನವರ, ದೇಮಪ್ಪ ಮುಂಡಗಿ, ಸುರೇಶ ರಾಮಣ್ಣವರ ಇತರರು ಇದ್ದರು.