ಜಿಲ್ಲೆ

ಮಕ್ಕಳಿಗೆ ಮಾತೃಭಾವನೆಯಿಂದ ಬೋಧಿಸಿ

ಚಿತ್ರದುರ್ಗ:ಪೂರ್ವಪ್ರಾಥಮಿಕ ಹಂತದಲ್ಲಿ ಮಾತೃಭಾವನೆಯಿಂದ ಬೋಧಿಸಬೇಕೆಂದು ಡಯಟ್ ಪ್ರಾಚಾರ‌್ಯ ಎಂ.ನಾಸಿರುದ್ದೀನ್ ಹೇಳಿದರು. ಸಮಗ್ರ ಶಿಕ್ಷಣ ಕರ್ನಾಟಕದಿಂದ ನಗರದ ಡಯಟ್‌ನಲ್ಲಿ ಸೋಮವಾರ ಜಿಲ್ಲೆಯ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ,ಶಿಕ್ಷಕರಾಗಿ ಸೇವೆ ಸಲ್ಲಿಸುವುದು ತೃಪ್ತಿಕರ ವೃತ್ತಿಯಾಗಿದೆ.

ಪೂರ್ವ ಪ್ರಾಥಮಿಕ ಹಂತದಲ್ಲಿ ಮಕ್ಕಳ ಮನಸ್ಸು ಬಿಳಿ ಹಾಳೆಯಂತೆ ಶುಭ್ರವಾಗಿರುತ್ತದೆ.ಈ ಹಂತದ ತರಗತಿ ನಿರ್ವಹಣೆಯಲ್ಲಿ ಬೋ ಧಿಸುವ ಶಿಕ್ಷಕರು ತಾಯಿ ಸ್ಥಾನ ತುಂಬುವುದರ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಬೇಕೆಂದರು.

ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ವೆಂಕಟೇಶಪ್ಪ ಮಾತನಾಡಿ,ಪೂರ್ವ ಪ್ರಾಥಮಿಕ ಶಿಕ್ಷಣ ಔಪಚಾರಿಕ ಶಿಕ್ಷಣಕ್ಕೆ ಸಿದ್ಧಗೊಳಿ ಸುವ ಹಂತವಾಗಿದೆ. ಗುಣಮಟ್ಟದ ಶಿಕ್ಷಣ ನೀಡಲು,ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಎಲ್‌ಕೆಜಿ,ಯುಕೆಜಿ ತರಗತಿಗಳನ್ನು ಪ್ರಾರಂಭಿ ಸಲಾಗಿದೆ. ದೇಶದ ಅಭಿವೃದ್ಧಿಯಲ್ಲಿ ಮಾನವ ಸಂಪತ್ತು ಬಹಳ ಮುಖ್ಯ.ಮಕ್ಕಳ ಬಾಲ್ಯವನ್ನು ಸದೃಢಗೊಳಿಸಲು ಶಿಕ್ಷಕರ ಪಾತ್ರ ಪೂರಕ ವಾಗಿದೆ. ಮಗು ವಿಶ್ವದ ಸಂಪತ್ತಾಗಿ ಬೆಳೆಯುವಂತೆ ಮಾರ್ಗದರ್ಶನ ಮಾಡಬೇಕೆಂದರು.

ನೋಡಲ್ ಅಧಿಕಾರಿ ಯು.ಸಿದ್ದೇಶಿ,ಉಪನ್ಯಾಸಕ ಎಸ್.ಬಸವರಾಜು,ಸಂಪನ್ಮೂಲ ವ್ಯಕ್ತಿಗಳಾದ ಮಲ್ಲಿಕಾರ್ಜುನಗೌಡ ಎಸ್. ಪಾಟೀಲ, ಕುಸುಮಾ,ಉಷಾದೇವಿ, ತಾಂತ್ರಿಕ ಸಹಾಯಕರಾದ ಆರ್.ಲಿಂಗರಾಜು, ಅವಿನಾಶ್ ಮತ್ತಿತರರು ಇದ್ದರು.