ಮೈಸೂರು: ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ 2022-2023ನೇ ಸಾಲಿನಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಯಾದವಗಿರಿ ನಿವಾಸಿಗಳ ಸಂಘದ ಸದಸ್ಯರ ಮಕ್ಕಳಿಗೆ ಶನಿವಾರ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ಚಾಮರಾಜ ಕ್ಷೇತ್ರದಲ್ಲಿ ಒಳಚರಂಡಿ, ನೀರು, ವಿದ್ಯುತ್ ಸೇರಿದಂತೆ ವಿವಿಧ ಸಮಸ್ಯೆಗಳಿದ್ದರೂ ಯಾದವಗಿರಿಯಲ್ಲಿ ಅಂತಹ ಯಾವುದೇ ಸಮಸ್ಯೆಗಳಿಲ್ಲ. ವಿಜಯನಗರ ಮೊದಲ ಹಂತವೂ ಯಾದವಗಿರಿಯಂತೆಯೇ ಇದೆ ಎಂದರು.
ಪಾಲಿಕೆ ಮಾಜಿ ಸದಸ್ಯ ಡಿ.ನಾಗಭೂಷಣ್, ಸಂಘದ ಅಧ್ಯಕ್ಷ ಕಿರಣ್ ಬೋಳಾರ್, ಉಪಾಧ್ಯಕ್ಷ ಎನ್.ವಿ.ಸುದರ್ಶನ್, ಕಾರ್ಯದರ್ಶಿ ಸುರೇಶ್ ಕುಮಾರ್, ಖಜಾಂಚಿ ಕೆ.ಪಿ.ಯದುನಂದನ್ ಉಪಸ್ಥಿತರಿದ್ದರು.