ಜಿಲ್ಲೆ

ಮಕ್ಕಳಿಗೆ ಪಾಠೋಪಕರಣ ವಿತರಣೆ

ಬೀದರ್: ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರ ಜನ್ಮ ದಿನ ನಿಮಿತ್ತ ನಗರದ ಕೆಪಿ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ಗೋ ಮಾತೆ ಪೂಜೆ ನೆರವೇರಿಸಿ ವಿದ್ಯಾಥಿಂಗಳಿಗೆ ಪಾಠೋಪಕರಣ ವಿತರಿಸಲಾಯಿತು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಮಕ್ಕಳಿಗೆ ಪೆನ್ನು, ನೋಟ್ಬುಕ್ ಇತರೆ ಪಾಠೋಪಕರಣ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಜೀವನವನ್ನು ಸದುಪಯೋಗ ಪಡೆದುಕೊಳ್ಳಬೇಕು. ಯಾವುದೇ ದುಶ್ಚಟಕ್ಕೆ ಬಲಿಯಾಗದೆ ಉತ್ತಮ ವ್ಯಾಸಂಗ ಮಾಡಿ ಉನ್ನತ ಸ್ಥಾನಕ್ಕೆ ಹೋಗಬೇಕು ಎಂದರು.

ಸಂಸ್ಥೆ ಅಧ್ಯಕ್ಷರಾದ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ರಾಜ್ಯದಲ್ಲಿ ಸರಳ, ಸಜ್ಜನಿಕೆ ರಾಜಕಾರಣಕ್ಕೆ ಜಗದೀಶ ಶೆಟ್ಟರ್ ಮಾದರಿಯಾಗಿದ್ದಾರೆ ಎಂದರು.

ಜಿಪಂ ಸದಸ್ಯೆ ಶಕುಂತಲಾ ಬೆಲ್ದಾಳೆ, ಸಂಸ್ಥೆ ಉಪಾಧ್ಯಕ್ಷ ಮಲ್ಲಯ್ಯಾ ಸ್ವಾಮಿ, ಖಜಾಂಚಿ ಸಂಗಶೆಟ್ಟಿ ಹಲಬರ್ಗೆ, ಗೌರವ ಸದಸ್ಯರಾದ ಚಂದ್ರಶೇಖರ ಪಾಟೀಲ್, ಪ್ರೌಢ ಶಾಲೆ ಮುಖ್ಯಗುರು ವಿಜಯಕುಮಾರ ಪಾಟೀಲ್ ಯರನಳ್ಳಿ, ಪ್ರಾಥಮಿಕ ಶಾಲೆ ಮುಖ್ಯಗುರು ಸುಲೋಚನಾ ಪಾಟೀಲ್, ಕಾರ್ಯನಿರ್ವಾಹಕ ಅಧಿಕಾರಿ ಗುರುರಾಜ ಪಾಟೀಲ್, ಬಿಜೆಪಿ ನಗರಾಧ್ಯಕ್ಷ ಹಣಮಂತ ಬುಳ್ಳಾ, ಪ್ರಮುಖರಾದ ನಾಗಶೆಟ್ಟಿ ವಗದಾಳೆ, ಸುನೀಲ ಗೌಳಿ, ಅನೀಲ ರಾಜಗೀರಾ, ಕಲ್ಯಾಣರಾವ ಬಿರಾದಾರ, ನಾಗರಾಜ ಹುಲಿ, ನರೇಶ ಗೌಳಿ, ಗುಣವಂತ ಭಾವಿಕಟ್ಟಿ, ಪ್ರಫುಲ್ ಸ್ವಾಮಿ, ಗೋಪಾಲಕೃಷ್ಣ, ಗೋರಕ ಗೌಳಿ, ಸುನೀಲ ದಳವೆ, ಉಪಾರ ಕೃಷ್ಣ, ಮಹಾನಂದಾ ಪಾಟೀಲ್, ಶೋಭಾ ಅಣೆಪ್ಪನೋರ್, ಸಲಿಮೊದ್ದೀನ್, ಹೀರಾಲಾಲ್ ಇತರರಿದ್ದರು.