ವಿಜಯಪುರ: ಮಕ್ಕಳು ಹೆಣ್ಣಾಗಲಿ, ಗಂಡಾಗಲಿ ಅವರನ್ನು ಕೇವಲ ಮಾರ್ಕ್ಸ್ ತೆಗೆಯುವ ಯಂತ್ರ ಮಾಡದೆ ಅವರಲ್ಲಿ ಜ್ಞಾನ, ನಮ್ಮ ಸಂಸತಿ ಹಾಗೂ ಉತ್ತಮ ಗುಣಗಳನ್ನು ಬೆಳೆಸುವ ಜತೆಗೆ ತಾಳ್ಮೆ, ಆತ್ಮವಿಶ್ವಾಸವನ್ನು ಮೂಡಿಸಬೇಕು ಎಂದು ಖ್ಯಾತ ಹೃದಯ ತಜ್ಞೆ ಡಾ.ವಿಜಯಲಕ್ಷಿ$್ಮ ಬಾಳೇಕುಂದ್ರಿ ಹೇಳಿದರು.
ನಗರದ ಾನಯೋಗಾಶ್ರಮದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ "ಮಾತೃ ಭಕ್ತಿ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯೆಗೆ ಸಮನಾದ ಮಿತ್ರನಿಲ್ಲ, ರೋಗಕ್ಕೆ ಸಮನಾದ ಶತ್ರುವಿಲ್ಲ, ಧರ್ಮಕ್ಕೆ ಸಮನಾದ ಬಂಧುವಿಲ್ಲ. ಅಂತೆಯೇ ಮಾತೆಗೆ ಸಮನಾದ ದೇವರು ಇಲ್ಲ ಎನ್ನುವ ಸಾಲುಗಳಿಗೆ ಶ್ರೀ ಸಿದ್ಧೇಶ್ವರ ಅಪ್ಪಾಜಿ ಅವರು ಜೀವ ತುಂಬಿದ್ದಾರೆ ಎಂದರು.
ಸಿದ್ಧೇಶ್ವರ ಶ್ರೀಗಳು ಅಂತ@ಕರಣ, ಮೃದು ಸ್ವಭಾವ ಹೊಂದಿದ್ದ ಮಾತೃ ಹೃದಯದವರಾಗಿದ್ದರು. ಮಣ್ಣಿನ ಮುದ್ದೆಯಾಗಿರುವ ಮಗುವನ್ನು ರೂಪ ನೀಡಿ ಬೆಳೆಸುವವಳು ತಾಯಿ. ಸದ್ಯ ಆಂಗ್ಲ ಸಂಸತಿ ಒಲವಿನಿಂದ ಮಕ್ಕಳಿಗೆ ಮಮ್ಮಿ ಎಂದು ಕರೆಯುವುದನ್ನು ಕಲಿಸುತ್ತಿದ್ದೇವೆ. ಮಮ್ಮಿ ಎಂದರೆ, ಸತ್ತ ಹೆಣ, ನಾವು ಸತ್ತ ಹೆಣ ಎಂದು ಕರೆಯಿಸಿಕೊಳ್ಳುತ್ತಿದ್ದೇವೆ. ಅದರ ಬದಲು ಮಕ್ಕಳಿಗೆ ಭಾರತೀಯ ಸಂಸತಿಯಂತೆ ಅವ್ವ&ಅಪ್ಪಾ ಎಂದು ಕರೆಯುವುದನ್ನು ಕಲಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಮಾತೆಯರು ಕರ್ತವ್ಯ ಮರೆತ ಹಿನ್ನೆಲೆ ಸದ್ಯದ ಮಕ್ಕಳು ಸುಳ್ಳು ಹೇಳುತ್ತಿದ್ದಾರೆ. ನಾವು ಕಲಿಸುವ ಸಂಸತಿ, ಆಚಾರ&ವಿಚಾರಗಳಿಂದ ಮಕ್ಕಳ ಭವಿಷ್ಯ ನಿರ್ಧಾರವಾಗಲಿದ್ದು, ಜವಾಬ್ದಾರಿಯಿಂದ ಮಕ್ಕಳನ್ನು ಬೆಳೆಸಬೇಕು. ಸಿದ್ಧೇಶ್ವರ ಶ್ರೀಗಳು ಜ್ಞಾನ ಸಾಗರ. ಆಶ್ರಮದಲ್ಲಿ ಮಾತೆಯರಿಗೆ ಅತ್ಯಂತ ಗೌರವ ಸಿಗುವಂತೆ ಮಾಡಿದ್ದಾರೆ. ಸದ್ಯದ ಹೆಣ್ಣುಮಕ್ಕಳು ಸಹಿತ ಕುಡಿತದ ಚಟಕ್ಕೆ ತುತ್ತಾಗುತ್ತಿದ್ದು, ಜಗತ್ತು ಬೆಳಗಬೇಕಾದವರು ಇಂತಹ ದುಶ್ಚಟಗಳಿಗೆ ಬಲಿಯಾಗದೆ ಸಂಸ್ಕಾರದಿಂದ ಬದುಕಬೇಕು. ಸಿದ್ಧೇಶ್ವರ ಶ್ರೀಗಳು ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ತಿಳಿಸಿದ್ದಾರೆ.
ವಿನಾ ಇದನ್ನೇ ಮಾಡಿ ಎಂದು ಒತ್ತಾಯಿಸಿಲ್ಲ ಎಂದರು.
ಒಳ್ಳೆಯದನ್ನು ಹೇಳುವುದು ನಮ್ಮ ಧರ್ಮ, ಮಾಡುವುದು ನಿಮ್ಮ ಕರ್ಮ. ಾನ ಯೋಗಾಶ್ರಮಕ್ಕೆ ಬಂದಿರುವ ಮಾತೆಯರು ಇಡೀ ಕರ್ನಾಟಕಕ್ಕೆ ಮಾದರಿಯಾಗಿದ್ದಾರೆ.
ದೇಶದ ಪ್ರಧಾನ ಮಂತ್ರಿಯೊಬ್ಬರು ಸಫಾಯಿ ಕರ್ಮಚಾರಿಗಳ ಪಾದ ತೊಳೆದಿದ್ದಾರೆ ಎಂದರೆ ಅದು ನರೇಂದ್ರ ಮೋದಿ ಅವರು. ಅದು ಅವರಿಗೆ ಅವರ ತಾಯಿ ಕಲಿಸಿಕೊಟ್ಟ ಸಂಸ್ಕಾರ. ಹೀಗಾಗಿ ನಾವು ಮಾತೆಯಾಗಿ ಕೇವಲ ಎದೆಹಾಲು ಉಣಿಸಿದರೆ ಸಾಲದು ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಒಳ್ಳೆಯ ನಡತೆ, ಗುಣಗಳನ್ನು ನೀಡಬೇಕು. ಆ ಮಗು ಜಗತ್ತು ಬೆಳಗುವ ನಾಗರಿಕನಾಗಬೇಕು ಎಂದು ಸಲಹೆ ನೀಡಿದರು.
ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಮಕ್ಕಳು ನಮ್ಮನ್ನೇ ಅನುಕರಣೆ ಮಾಡುತ್ತವೆ. ಹೀಗಾಗಿ ನಾವು ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಶ್ರೀ ಸಿದ್ಧೇಶ್ವರ ಅಪ್ಪನವರು ದೀಪ ಆರಿಸಿ ಹುಟ್ಟುಹಬ್ಬ ಮಾಡಬಾರದು. ಅದು ನಮ್ಮ ಸಂಸತಿ ಅಲ್ಲ, ದೀಪ ಬೆಳಗಿಸುವ ಸಂಸತಿ ಎಂದು ಹೇಳಿದ್ದನ್ನು ನಾವೆಲ್ಲರೂ ನೆನಪಿನಲ್ಲಿರಿಸಿಕೊಳ್ಳಬೇಕು ಎಂದರು.
ಬೀದರ್ನ ಮತೋಶ್ರೀ ಗಂಗಾಂಬಿಕಾ ಮಾತಾ ಅಮ್ಮನವರು ಮಾತನಾಡಿ, ಸಕಲರಿಗೂ ಲೇಸನ್ನು ಬಯಸುವ ಸಂಸತಿ ಯಾವುದಾದರೂ ಇದ್ದರೆ ಅದು ಶರಣ ಸಂಸತಿ. ಸಮಾಜದಲ್ಲಿ ಮಾತೆಗೆ ಸರ್ವ ಶ್ರೇಷ್ಠ ಸ್ಥಾನ ನೀಡಲಾಗಿದೆ. ಸಿದ್ಧೇಶ್ವರ ಶ್ರೀಗಳು ತಿಳಿಸಿದಂತೆ ಪರಿಸರ ಸಂರಕ್ಷಣೆಗೆ ನಾವೆಲ್ಲ ಮುಂದಾಗಬೇಕು ಎಂದು ಸಲಹೆ ನೀಡಿದರು.
ಬುರಣಾಪುರದ ಯೋಗೇಶ್ವರಿ ಮಾತಾಜಿ ಹಾಗೂ ಜ್ಞಾನಯೋಗಾಶ್ರಮದ ಅಧ್ಯ ಗುರುಗಳಾದ ಬಸವಲಿಂಗ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕವಾಡ, ಶೈಲಜಾ ಬಸನಗೌಡ ಪಾಟೀಲ ಹಾಗೂ ಭಾಗ್ಯಶ್ರೀ ಶಿವಾನಂದ ಪಾಟೀಲ ಮಾತನಾಡಿದರು. ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ, ಶರಣು ಸಬರದ ಮತ್ತಿತರರಿದ್ದರು.