ಕಳಸ: ವಿದ್ಯಾರ್ಥಿಗಳಿಗೆ ಶಿಕ್ಷಣ, ಸ್ವಚ್ಛತೆ ಮತ್ತು ತಂತ್ರಜ್ಞಾನದ ಅರಿವು ಮೂಡಿಸುವ ಮೂಲಕ ಸುಶಿಕ್ಷಿತರನ್ನಾಗಿಸಬೇಕು ಎಂದು ಕಾಫಿ ಬೆಳೆಗಾರ ಕೆ.ಸಿ.ಧರಣೇಂದ್ರ ಹೇಳಿದರು.
ಕಳಸ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲೆಯಲ್ಲಿ ನಡೆದ ಮೂರು ದಿನಗಳ ರಾಜ್ಯಮಟ್ಟದ ಅಟಲ್ ಟಿಂಕರಿಂಗ್ ಶಿಕ್ಷಕರ ಕಾರ್ಯಾಗಾರದಲ್ಲಿ ಮಾತನಾಡಿ, ಆಧುನಿಕ ಕಾಲದಲ್ಲಿ ತಂತ್ರಜ್ಞಾನ ಮಾಹಿತಿ ತಿಳಿದುಕೊಂಡಿರಬೇಕು ಎಂದರು.
ಸಮಗ್ರ ಶಿಕ್ಷಣ ಕರ್ನಾಟಕ ನಿರ್ದೇಶಕಿ ಮಂಜುಳಾ ಅವರು 2025-26ರ ಅಟಲ್ ಟಿಂಕರಿಂಗ್ ಕಾರ್ಯಚಟುವಟಿಕೆಗಳ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಜ್ಞಾನವನ್ನು ಪ್ರಯೋಗಿಸಲು ಸಹಾಯಕ ಎಂದರು.
35 ಶಿಕ್ಷಕ ಶಿಬಿರಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು. ರಾಜ್ಯ ಪ್ರೋಗ್ರಾಮಿಂಗ್ ಅಧಿಕಾರಿ ಶ್ರೀಲತಾ ಕೋಟೆಮಠ, ಜಿಲ್ಲಾ ನೋಡೆಲ್ ಅಧಿಕಾರಿ ಭಾಗಿಬಾಯಿ, ಹಾಸನ ನೋಡೆಲ್ ಅಧಿಕಾರಿ ಪ್ರೇಮಾ, ನಮಿತಾ ರಾವ್, ವೀಣಾ ಶಶಿಕುಮಾರ್, ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಡಾ. ಮಹಮ್ಮದ್ ರಫೀಕ್, ಸುರೇಶ, ಸಂದೇಶ್, ಚಿಂತನ್ ಇದ್ದರು.