ಜಿಲ್ಲೆ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ

ಯಾದಗಿರಿ: ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟಾಗ ಮಾತ್ರ ಅವರ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಹೇಳಿದರು.
ತಾಲೂಕಿನ ಬಂದಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡ ಶಾಲಾ ಆರಂಭೋತ್ಸವ ಹಾಗೂ ನೂತನ ಪೂರ್ವ ಪ್ರಾಥಮಿಕ, ಎಲ್‌ಕೆಜಿ-ಯುಕೆಜಿ ತರಗತಿ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದು ಸೂಚನೆ ನೀಡಿದರು.ಬೇಸಿಗೆ ರಜೆಗಳು ಕಳೆದು ಶಾಲೆಗಳು ಪುನರಾರಂಭವಾಗಿದ್ದು, ಶಾಲೆಗೆ ದಾಖಲಾಗುವ ಮಕ್ಕಳು ಕಲಿಕೆಯಿಂದ ಹೊರಗುಳಿಯದಂತೆ ಎಲ್ಲ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪಾಲಕರಿಗೆ ತಿಳಿ ಹೇಳಬೇಕು. ಮಗುವಿನ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಯ ಹಿತ ದೃಷ್ಟಿಯಿಂದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ರೂಪಿಸಿಕೊಂಡು ಪರಿಣಾಮಕಾರಿ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಡಿಡಿಪಿಐ ಮಂಜುನಾಥ, ಬಿಆರ್‌ಸಿ ಮಲ್ಲಿಕಾರ್ಜುನ ಪೂಜಾರಿ, ಹೊನಗೇರಾ ಕ್ಲಸ್ಟರ್ ಸಿಆರ್‌ಸಿ ಕೃಷ್ಣಾರೆಡ್ಡಿ, ಸಹ ಶಿಕ್ಷಕಿ ಹುಸ್ನಾರ, ಸುರೇಖ ಇತರರಿದ್ದರು.

  • ಮೆರವಣಿಗೆ ಮೂಲಕ ಎತ್ತಿನ ಬಂಡಿಯಲ್ಲಿ ಶಾಲೆಗೆ ಬಂದ ಚಿನ್ಣರು
  • ಶಾಲಾ ಸಿಬ್ಬಂದಿಯಿAದ ಅದ್ದೂರಿ ಸ್ವಾಗತ
  • ಮಕ್ಕಳ ಮುಖದಲ್ಲಿ ಮನೆ ಮಾಡಿದ ಸಂಭ್ರಮ
    ಯಾದಗಿರಿ: ನಗರ ಸೇರಿದಂತೆ ಜಿಲ್ಲಾದ್ಯಂತ ಶುಕ್ರವಾರ ಶಾಲೆಗಳಲ್ಲಿ ಸಂಭ್ರಮ ಮತ್ತು ಜಾತ್ರೆಯ ಸಡಗರ ಕಂಡು ಬಂತು. ಪ್ರಸಕ್ತ ಶೈಕ್ಷಣಿಕ ಸಾಲಿಗಾಗಿ ಶಾಲೆ ಆರಂಭಗೊAಡಿದ್ದು, ಬೆಳಗ್ಗೆ ಮನೆಯಿಂದ ಹರ್ಷೋಲ್ಲಾಸದಿಂದ ಸಾವಿರಾರು ಸಂಖ್ಯೆಯ ಮಕ್ಕಳು ಶಾಲೆಗಳತ್ತ ಹೆಜ್ಜೆ ಹಾಕಿದರು. ಹೀಗೆ ಬಂದ ಮಕ್ಕಳನ್ನು ಶಿಕ್ಷಕರು, ಸಿಬ್ಬಂದಿ ಹೂಗುಚ್ಚ ನೀಡಿ ಸ್ವಾಗತಿಸಿದರು. ಶಾಲೆಯೊಳಗೆ ಆಗಮಿಸಿದ ಮಕ್ಕಳಿಗೆ ಸಿಹಿ ತಿನ್ನಿಸಿ ತರಗತಿ ಕೋಣೆಯೊಳಗೆ ಪಾಠ ಕೇಳಲು ಅನುವು ಮಾಡಿಕೊಟ್ಟರು. ಆರಂಭದ ದಿನ ಇಲಾಖೆ ಒದಗಿಸಿರುವ ಪಠ್ಯಪುಸ್ತಕ ಮತ್ತು ಸಮವಸ್ತç ವಿತರಿಸಿದರು.ನಗರದ ಸುತ್ತಲಿನ ಕೆಲ ಮಕ್ಕಳು ಎತ್ತಿನ ಬಂಡಿಯಲ್ಲಿ ಕುಳಿತು ಶಾಲೆಗೆ ಆಗಮಿಸಿದರೆ, ಇನ್ನೂ ಕೆಲ ಮಕ್ಕಳು ಬಸ್ ಮತ್ತು ಸೈಕಲ್‌ಗಳ ಮೇಲೆ ಸಾಲು ಸಾಲಾಗಿ ಆಗಮಿಸಿದರು. ರಜೆ ಮುಗಿಸಿ ಆಗಮಿಸಿದ್ದ ಮಕ್ಕಳು ಶಿಕ್ಷಕರನ್ನು ನೋಡಿದ ತಕ್ಣಷ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ಯಾದಗಿರಿ ತಾಲೂಕಿನ ಬಂದಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾಲಾ ಆರಂಭೋತ್ಸವಕ್ಕೆ ಜಿಲ್ಲಾಧಿಕಾರಿ ಡಾ.ಸುಶೀಲಾ ಚಾಲನೆ ನೀಡಿ, ಮಕ್ಕಳೊಂದಿಗೆ ಸ್ವಲ್ಪಹೊತ್ತು ಕಾಲ ಕಳೆದರು.