ಆಳಂದ: ಮಕ್ಕಳ ಭವಿಷ್ಯ ಉಜ್ವಲಗೊಳ್ಳುವ ವಿದ್ಯಾಗಮ ಮಾದರಿಯಲ್ಲಿ ಕಲಿಕಾ ಕೇಂದ್ರದ ಮೂಲಕ ಮಕ್ಕಳಿಗೆ ಪಾಠ ಮಾಡಲು ಸರ್ಕಾರದ ಆದೇಶ ಮೇರೆಗೆ ತಾಲೂಕಿನಲ್ಲಿ ಕಲಿಕಾ ಕೇಂದ್ರಗಳು ಪ್ರಾರಂಭಗೊಂಡಿವೆ.
ತಾಲೂಕಿನ ಧಂಗಾಪುರ ಗ್ರಾಮದ ಇಂದಿರಾ ಹಿರಿಯ ಪ್ರಾಥಮಿಕ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ ಮಂಗಳವಾರ ಭೇಟಿ ನೀಡಿ ಕಲಿಕಾ ಕೇಂದ್ರ ಪರಿಶೀಲಿಸಿ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಗಮ ಕಲಿಕಾ ಕೇಂದ್ರಗಳು ನಡೆಯುತ್ತಿರುವುದು ಹೆಮ್ಮೆಯ ವಿಷಯ. ಶಾಲಾ ವ್ಯಾಪ್ತಿಯಲ್ಲಿ ಧಂಗಾಪುರ, ಬಟ್ಟರಗಾ, ಜವಳಿ ಡಿ ಗ್ರಾಮಗಳಲ್ಲಿ ಪ್ರತ್ಯೇಕ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸಿ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಸಲಹೆ ನೀಡಿದರು.
ಮುಖ್ಯಗುರು ಅಂಬಿಕಾ ಅಷ್ಠಗಿ ಮಾತನಾಡಿ, ಧಂಗಾಪೂರ, ಬಟ್ಟರಗಾ , ಜವಳಿ-ಡಿ ಗ್ರಾಮದ ಪ್ರತಿ ಕಲಿಕಾ ಕೇಂದ್ರಕ್ಕೆ ತಲಾ ಇಬ್ಬರು ಶಿಕ್ಷಕರನ್ನು ನೇಮಕ ಮಾಡಿ, ಪ್ರತಿ ಮಗುವಿಗೆ ಮಾಸ್ಕ್ ಧರಿಸುವ ಮೂಲಕ ಪಾಠ ಮಾಡಲಾಗುತ್ತಿದ್ದು, ಪಾಲಕರು ಸಹಕಾರ ನೀಡುತ್ತಿದ್ದಾರೆ ಎಂದರು.
ಸಂಸ್ಥೆ ಅಧ್ಯಕ್ಷ ಶಿವಲಿಂಗ ತೇಲ್ಕರ್, ಶಿಕ್ಷಕರಾದ ಬಾಬುರಾವ ಆಳಂದ, ವೃಂದಾ ನಿಂಬಗರ್ಾ ಇದ್ದರು.