ಜಮಖಂಡಿ;ಪೌರ ಕಾರ್ಮಿಕರಿಲ್ಲದ ನಗರವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲ ರೀತಿಯ ಕಸವನ್ನು ತೆಗೆದು ನಗರವನ್ನು ಸ್ವಚ್ಛವಾಗಿರಿಸಲು ಪ್ರತಿನಿತ್ಯ ಶ್ರಮಿಸುತ್ತಾರೆ. ಅವರ ಸೇವೆ ಅಸಾಮಾನ್ಯವಾದದ್ದು, ಪ್ರಧಾನಿ ಮೋದಿಯವರು ಪೌರ ಕಾರ್ಮಿಕರ ಪಾದ ತೊಳೆದು ಗೌರವ ಸಲ್ಲಿಸಿದ್ದಾರೆ ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ನಗರದ ಬಸವ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಹಗಲಿರುಳೆನ್ನದೇ ನಗರದ ಸ್ವಚ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರ ಮಕ್ಕಳು 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ 5 ಸಾವಿರ ಹಾಗೂ ದ್ವೀತಿಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರಥಮ 15 ಸಾವಿರ, ದ್ವೀತಿಯ 10 ಹಾಗೂ ತೃತೀಯ ಸ್ಥಾನ ಪಡೆದ ಮಕ್ಕಳಿಗೆ 5 ಸಾವಿರ ರೂ. ಪ್ರೋತ್ಸಾಹ ಧನ ಹಾಗೂ ಪೌರ ಕಾರ್ಮಿಕರ ಕುಟುಂಬದಲ್ಲಿ ಯಾರಾದರೂ ಮೃತಪಟ್ಟರೆ ಅಂತ್ಯ ಸಂಸ್ಕಾರಕ್ಕೆ 5 ಸಾವಿರ ರೂ. ಗಳ ಧನ ಸಹಾಯ ನೀಡುವುದಾಗಿ ೂಷಣೆ ಮಾಡಿದರು.
ಪೌರ ಕಾರ್ಮಿಕರಿಗೆ ಸರ್ಕಾರದಿಂದ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುವ ಪ್ರಯತ್ನ ಮಾಡುತ್ತೇನೆ. ಪೌರ ಕಾರ್ಮಿಕರು ದುಶ್ಚಟಗಳಿಂದ ದೂರವಿರಬೇಕು, ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಎಂದು ತಿಳಿಸಿದರು.
ನಗರಸಭೆ ಅಧ್ಯ ಈಶ್ವರ ವಾಳೆನ್ನವರ ಮಾತನಾಡಿ, ಪೌರ ಕಾರ್ಮಿಕರ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ತಿಳಿಸಿದರು. ಪೌರ ಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದೆ. ಅವರ ಸೇವೆ ಇಲ್ಲದೇ ನಗರವನ್ನು ಸ್ವಚ್ಛವಾಗಿಟ್ಟು ಕೊಳ್ಳುವುದು ಅಸಾಧ್ಯ ಎಂದು ಹೇಳಿದರು.
ಆಯುಕ್ತ ಜ್ಯೋತಿ ಗಿರೀಶ ಮಾತನಾಡಿ, ಕಳೆದ ಸುಮಾರು 10 ವರ್ಷಗಳಿಂದ ಪೌರ ಕಾರ್ಮಿಕರನ್ನು ಸರ್ಕಾರಗಳು ಗುರುತಿಸಿವೆ. ಅನೇಕ ಸೌಲಭ್ಯಗಳನ್ನು ಒದಗಿಸಿವೆ. ಗೃಹ ನಿರ್ಮಾಣಕ್ಕೆ 7.5 ಲ ರೂ. ಗಳ ಧನ ಸಹಾಯವನ್ನು ನೀಡಲಾಗುತ್ತಿದ್ದು, 15 ಜನರಿಗೆ ಅನುಕೂಲವಾಗಿದೆ ಹಾಗೂ ಇನ್ನೂ 4 ಜನ ಪೌರ ಕಾರ್ಮಿಕರಿಗೆ ಸರ್ಕಾರ ಗೃಹ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಂಜೂರಾಗಿದೆ ಎಂದು ತಿಳಿಸಿದರು. ನಿವೇಶನ ಖರೀದಿಗೆ 2.5 ಲ ರೂ. ಗಳ ಧನ ಸಹಾಯ, ಪೌರ ಕಾರ್ಮಿಕರಿಗೆ ಪ್ರತಿ ವರ್ಷ 21 ದಿನಗಳ ಬೋನಸ್ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ದಿಂದ ಅಧ್ಯಯನ ಪ್ರವಾಸ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು. ಪೌರ ಕಾರ್ಮಿಕರು ಅಸಡ್ಡೆ ವಹಿಸದೇ ನಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕೆಂದು ಮನವಿ ಮಾಡಿದರು.
ಓಲೇಮಠದ ಆನಂದ ದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಗರಸಭೆ ಸದಸ್ಯರಾದ ದಿಲಾವರ ಶಿರೋಳ, ದಾನೇಶ ಘಾಟಗೆ, ಕಿರಣ ಪಿಸಾಳ, ಸುನೀಲ ಸಿಂಧೆ, ಅನುಸುಯಾ ಅಸುಗಡೆ, ಪ್ರಶಾಂತ ಚರಕಿ, ಕುಶಾಲ ವಾಗಮೊರೆ, ಪೌರ ಕಾರ್ಮಿಕರ ಸಂದ ಅಧ್ಯ ರಾು ಕಡಕೋಳ ಇತರರಿದ್ದರು. ಶ್ರೀಕಾಂತ ಘಾಟಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಸರ ಅಭಿಯಂತರ ಕುಸುಮಾ ಸ್ವಾಗತಿಸಿದರು. ಸದಸ್ಯ ಪ್ರಕಾಶ ಹಂಗರಗಿ ನಿರೂಪಿಸಿದರು.
ಜಮಖಂಡಿ ನಗರದ ಬಸವ ಭವನದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಶಾಸಕ ನಾಡೋಜ ಜಗದೀಶ ಗುಡಗುಂಟಿ ಉದ್ಘಾಟಿಸಿದರು. ನಗರಸಭೆ ಅಧ್ಯ ಈಶ್ವರ ವಾಳೆನ್ನವರ, ಆಯುಕ್ತ ಜ್ಯೋತಿ ಗಿರೀಶ, ದಿಲಾವರ ಶಿರೋಳ ಇತರರು ಇದ್ದರು.