ಪಟ್ಟಣದ ಶ್ರೀ ವಾಸವಿ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ ಅಂಗವಾಗಿ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 2022 ಸಿಂಚನ ಸಾಂಸ್ಕೃತಿಕ ಕಾರ್ಯಕ್ರಮ ಉದ್ದೇಶಿಸಿ ಸಂಸ್ಥೆಯ ಅಧ್ಯಕ್ಷ ಕುಮಾರಕೃಷ್ಣ ಮಾತನಾಡುತ್ತಿರುವುದು. ಕೈಲಾಸ್‌ಮೂರ್ತಿ, ಪಿ.ಎನ್. ಸತ್ಯನಾರಾಯಣ , ಚಂದ್ರಪಾಟೀಲ್, ಪಿ.ಜಿ ಶಶಿಧರ್, ಡಾ. ಪಿ.ಜಿ ಶ್ರೀಧರ್, ವಿ. ಸುಮಂತ್ ಅಚ್ಚಮ್ ಜೆ.ಎಸ್. ಚೇತನ್ ಮತ್ತಿರಿದ್ದರು. 
ಜಿಲ್ಲೆ

ಮಕ್ಕಳಿಗೆ ಕುಶಲತೆ ಕಲಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ

ಕೊಳ್ಳೇಗಾಲ: ವಾಸವಿ ವಿದ್ಯಾಸಂಸ್ಥೆ ನೂತನ ಶಿಕ್ಷಣ ನೀತಿ ಒಳಗೊಂಡಂತೆ ಮಕ್ಕಳಿಗೆ ಕುಶಲತೆ ಕಲಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಆರ್ಯ ವೈಶ್ಯ ಸಂಘದ ಅಧ್ಯಕ್ಷ ಎ.ಡಿ ಕುಮಾರಕೃಷ್ಣ ತಿಳಿಸಿದರು.

ಪಟ್ಟಣದ ಶ್ರೀ ವಾಸವಿ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ ಅಂಗವಾಗಿ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 2022 ಸಿಂಚನ ಸಾಂಸ್ಕೃತಿಕ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

41 ವರ್ಷಗಳ ಹಿಂದೆ 14 ಮಕ್ಕಳಿಂದ ಪ್ರಾರಂಭವಾದ ವಾಸವಿ ವಿದ್ಯಾಸಂಸ್ಥೆ ಎಲ್ಲ ಜಾತಿ, ಧರ್ಮಗಳ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದು, ಮಿನಿ ಇಂಡಿಯಾವಾಗಿ ನಮ್ಮ ಕಣ್ಣಿಗೆ ಕಾಣುತ್ತಿದೆ. ಇನ್ನೂ ಸಿಬಿಎಸ್‌ಸಿ ಯಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿದ್ದು, ಸಂಸ್ಥೆ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುತ್ತಿದೆ ಎಂದರು.

ಈ ವಿದ್ಯಾಸಂಸ್ಥೆಯು ಪಾಲಕರ ಸಹಕಾರದಿಂದ ಇಷ್ಟರ ಮಟ್ಟಿಗೆ ಬೆಳೆಯಲು ಸಾಧ್ಯವಾಗಿದೆ. ಮುಂದೆಯೂ ಸಹ ಪಾಲಕರಿಗೆ ತೃಪ್ತಿ ನೀಡುವ ಶಿಕ್ಷಣ ವ್ಯವಸ್ಥೆಯನ್ನು ಮಕ್ಕಳಿಗೆ ನೀಡಿ ಎಲ್ಲ ಕ್ಷೇತ್ರದಲ್ಲೂ ಸಾಧನೆಗೈಯಬಲ್ಲ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.

ಮಕ್ಕಳ ಇಷ್ಟಾರ್ಥಗಳನ್ನು ಪೂರೈಸುವ ಪಾಲಕರು ಅವರ ಆಸಕ್ತಿಯ ವಿಷಯವನ್ನು ಮೊದಲು ಅರಿಯಬೇಕಿದೆ. ಪಠ್ಯದ ಜತೆಗೆ ಅವರ ಇನ್ನಿತರ ಕಲೆಯಲ್ಲೂ ಸಾಧನೆ ಮಾಡಲು ಅಡ್ಡಿಯಾಗಬಾರದು. ತಿನ್ನುವ ಆಹಾರದ ಪ್ರಾಮುಖ್ಯತೆ ಬಗ್ಗೆ ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ತಿಳಿಸಬೇಕು. ಆಗ ಮಾತ್ರ ಆಹಾರದ ಬಳಕೆಯ ಮೇಲೆ ಅವರಿಗೆ ಅರಿವಾಗುತ್ತದೆ.

ಇನ್ನು ಮುಖ್ಯವಾಗಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಕ್ಕಳು ಶಾಲೆ-ಕಾಲೇಜಿಗೆ ಬೈಕ್‌ನಲ್ಲಿ ಬರಲು ಅವಕಾಶ ನೀಡಬಾರದು. ಏಕೆಂದರೆ ಅವರಿಗ್ಯಾರಿಗೂ ವಾಹನ ಚಾಲನೆಗೆ ಬೇಕಾದ ಲೆಸೆನ್ಸ್ ಇರುವುದಿಲ್ಲ. ಪರಿಣಾಮ ಏನಾದರೂ ಅನಾಹುತವಾದರೆ ಮುಂದಾಗವು ಸಮಸ್ಯೆಗಳಿಗೆ ಪಾಲಕರೆ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.

ಉದಯ ರತ್ನ ಪ್ರಶಸ್ತಿ ಪುರಸ್ಕೃತ ಎಂ.ಕೆ.ಕೈಲಾಸಮೂರ್ತಿ ಮಾತನಾಡಿ, ಬಾಲ್ಯದಲ್ಲೇ ವ್ಯಾಯಮ, ಕ್ರೀಡೆ ಹವ್ಯಾಸ ಬೆಳೆಸಿಕೊಂಡರೆ ದೈಹಿಕ ಹಾಗೂ ಮಾನಸಿಕವಾಗಿ ಸ್ಥಿರತೆಯನ್ನು ಮಕ್ಕಳು ಕಾಪಾಡಿಕೊಳ್ಳುತ್ತಾರೆ. ಇದ್ದರಿಂದ ಒತ್ತಡ ರಹಿತ ಓದಿಗೂ ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.

ಬಿಇಒ ಚಂದ್ರ ಪಾಟೀಲ್ ಮಾತನಾಡಿ, ಪಾಲಕರು ಮಕ್ಕಳಲ್ಲಿ ಶೈಕ್ಷಣಿಕ ಪ್ರಗತಿ ಕಾಣಬೇಕಾದರೆ ಅವರ ಜತೆ ಹೆಚ್ಚು ಸಮಯ ಕಳೆಯಬೇಕಿದೆ. ಪ್ರತಿಯೊಬ್ಬ ಮಗು ಶಾಲೆಗೆ ಸೇರಿದ ತಕ್ಷಣವೇ ಎಲ್ಲವನ್ನು ತಿಳಿಯುವುದಿಲ್ಲ. ಕೆಲ ಮಕ್ಕಳು ಹೆಚ್ಚು ಸಮಯ ತೆಗೆದುಕೊಳ್ಳುವುಂಟು ಆದ್ದರಿಂದ ತಮ್ಮ ಮಕ್ಕಳ ಎದುರು ಬೇರೆ ಮಕ್ಕಳ ತೋರಿಸಿ ಹೋಲಿಕೆ ಮಾಡಿ ಒತ್ತಡ ಏರಬಾರದು. ಸ್ವಲ್ಪ ಸಮಯಕೊಟ್ಟರೆ ನಿಮ್ಮ ಮಕ್ಕಳು ಮುಂದಿನ ದಿನಗಳಲ್ಲಿ ಎತ್ತರಕ್ಕೆ ಬೆಳೆಯುತ್ತಾರೆ ಎಂದು ಕಿವಿ ಮಾತು ಹೇಳಿದರು.

ವೇದಿಕೆ ಕಾರ್ಯಕ್ರಮದ ಬಳಿಕ ಶಾಲೆ ಹಾಗೂ ಕಾಲೇಜಿನ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಪಾಲಕರು ಮಕ್ಕಳ ನೃತ್ಯ ಹಾಗು ಸಾಂಸ್ಕೃತಿಕ ಚಟುವಟಿಕೆ ನೋಡಿ ಸಂತಸಪಟ್ಟರು.

ಶ್ರೀ ವಾಸವಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪಿ.ಎನ್.ಸತ್ಯನಾರಾಯಣ, ಕಾರ್ಯದರ್ಶಿ ಪಿ.ಜಿ.ಶಶಿಧರ್, ಡಾ.ಪಿ.ಜಿ.ಶ್ರೀಧರ್, ಖಜಾಂಚಿ ವಿ.ಸುಮಂತ್ ಅಚ್ಚಮ್ ಹಾಗೂ ಜೆ.ಎಸ್.ಚೇತನ್, ಡಾ.ಸಿ.ಆರ್.ಶರತ್, ನಾಗೇಂದ್ರಬಾಬು, ನಿರ್ದೇಶಕ ಒ.ವಿ.ದಿವಾಕರ್, ಎಂ.ಎಸ್ ಸಚಿನ್ ಕುಮಾರ್, ವೆಂಕಟೇಶ್ ಬಾಬು ಮತ್ತಿತರಿದ್ದರು.