ಯಾದಗಿರಿ: ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಬೇಕು. ಅವರ ಹಕ್ಕಿನಿಂದ ದೂರ ಮಾಡಕೂಡದರು. ಸಕರ್ಾರದ ಸೌಲಭ್ಯಗಳನ್ನು ಪಡೆದು ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ತಹಸೀಲ್ದಾರ್ ವಿಜಯಕುಮಾರ ಸಲಹೆ ನೀಡಿದರು.
ಮಂಗಳವಾರ ಸುರಪುರ ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ತಾಲೂಕಾಡಳಿತ ತಾಪಂ ಹಾಗೂ ಜಿಲ್ಲಾ ಬಾಲಕಾಮರ್ಿಕ ನಿಮರ್ೂಲನಾ ಯೋಜನಾ ಸೊಸೈಟಿಗಳ ಸಹಯೋಗದಲ್ಲಿ ಬಾಲ ಹಾಗೂ ಕಿಶೋರ ಕಾಮರ್ಿಕ ಪದ್ಧತಿ ವಿರುದ್ಧ ಜನಜಾಗೃತಿ ಮೂಡಿಸುವ ಆಟೋ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಸಮಾಜದಲ್ಲಿ ಬೇರೂರಿರುವ ಬಾಲಕಾಮರ್ಿಕ ಪದ್ಧತಿ ವಿರುದ್ಧ ಪ್ರತಿಯೊಬ್ಬರು ಹೋರಾಡುವ ಅಗತ್ಯವಿದೆ. ಕೂಲಿ ಹಣದ ಆಸೆಗಾಗಿ ಮಕ್ಕಳನ್ನು ಶಿಕ್ಷಣದಿಂದ ವಂಚಿತನ್ನಾಗಿ ಮಾಡಬೇಡಿ ಎಂದರು.
14 ವರ್ಷದೊಳಗಿನ ಬಾಲಕಾಮರ್ಿಕ ಮತ್ತು 18 ವರ್ಷದೊಳಗಿನ ಕಿಶೋರ ಕಾಮರ್ಿಕ ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಅಂಥ ಮಕ್ಕಳನ್ನು ದುಡಿಸಿಕೊಂಡಲ್ಲಿ ಮಾಲೀಕರುಗಳ ಮೇಲೆ 20 ರಿಂದ 50 ಸಾವಿರ ರೂ.ದಂಡ ಮತ್ತು 6 ತಿಂಗಳಿಂದ 2 ವರ್ಷಗಳ ವರೆಗೆ ಕಾರಾಗೃಹ ಶಿಕ್ಷೆ ವಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಎಚ್ಚರಿಕೆ ನೀಡಿದರು.
ಕಾಮರ್ಿಕ ನಿರೀಕ್ಷಕ ವಿಜಯೇಂದ್ರ, ಬಾಲ ಕಾಮರ್ಿಕ ಯೋಜನಾ ಸೊಸೈಟಿ ನಿದರ್ೇಶಕ ರಿಯಾಜ್ ಪಟೇಲ್ ವರ್ಕನಳ್ಳಿ, ಇಲಾಖೆಯ ಬಾಲು ಕುಪಗಲ್, ರಾಜು ಕಲಾಲ್ ಮುಬೀನ್ ದಖನಿ, ತಿಮ್ಮಯ್ಯ, ರಾಘವೇಂದ್ರ ಭಕ್ರಿ ಇದ್ದರು.