ಜಿಲ್ಲೆ

ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ಕಲಿಯಬೇಕು: ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಸಲಹೆ

ಹಾಸನ: ಇಂದಿನ ಯುವಕರು-ಯವತಿಯರು ಉತ್ತಮ ಸಂಸ್ಕೃತಿ, ಉಳಿಸುವ ನಿಟ್ಟಿನಲ್ಲಿ ಸುಸಂಸ್ಕೃತರಾಗಬೇಕು. ಧರ್ಮ, ಸಂಸ್ಕಾರ, ನಾಡು ನುಡಿಯನ್ನು ನಾವು ಗೌರವಿಸಬೇಕು. ತಂದೆ-ತಾಯಿಗೆ ಗೌರವ ಕೊಡುವುದರ ಜತೆಗೆ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ ಎಂದು ಸಿದ್ದಗಂಗೆಯ ಕಿರಿಯ ಸ್ವಾಮೀಜಿ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಹಾಸನ ತಣ್ಣೀರುಹಳ್ಳ ಮಠದಲ್ಲಿ ಹಾಸನ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಮಾಜದ ಮುಖಂಡರಿಂದ ಶುಕ್ರವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಗಳು ಹಣ ಮಾಡಿದರೆ ಸಾಲದು, ಚಿಕ್ಕ ಮಕ್ಕಳಿದ್ದಾಗಲೇ ಒಳ್ಳೆಯ ಬುದ್ಧಿ, ವಿನಯತೆ ಕಲಿಸಬೇಕು. ಉತ್ತಮ ವಿದ್ಯೆ ನಿಡುವ ಮೂಲಕ ಅವರಿಗೆ ಸಾಮಾಜಿಕ ಚಿಂತನೆ ಬೆಳೆಯುವ ಬುದ್ಧಿವಂತರಾನ್ನಾಗಿ ಮಾಡಬೇಕು ಎಂದು ತಿಳಿಸಿದರು.

ಈ ವೇಳೆ ತಣ್ಣೀರು ಹಳ್ಳ ಮಠದ ಮಠಾಧೀಶರಾದ ವಿಜಯಕುಮಾರ್ ಸ್ವಾಮೀಜಿ, ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ರಾಜ್ಯ ಮಹಿಳಾ ಘಟಕದ ನಿರ್ದೇಶಕರಾದ ನಾಗರತ್ನಾ, ಜಿಲ್ಲಾ ನಿರ್ದೇಶಕ ಶೋಭನ್ ಬಾಬು, ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್.ವಿ.ಹೇಮಂತ್ ಕುಮಾರ್, ಸಹಕಾರ್ಯದರ್ಶಿ ಶೆಟ್ಟಿಹಳ್ಳಿ ಧರ್ಮ, ನಿರ್ದೇಶಕರಾದ ಮಯೂರಿ ಲೋಕೇಶ್, ಮದನ್, ದರ್ಶನ್, ವೇದಾವತಿ, ಎಂ.ವಿ. ರಾಜಶೇಖರ್ ಮೂರ್ತಿ, ಜಿಲ್ಲಾ ವೀರಶೈವ ಲಿಂಗಾಯತ ಸಂಘದ ನಿರ್ದೇಶಕರಾದ ಬಾಳ್ಳು ನಾಗೇಶ್, ಯುವ ಘಟಕದ ಮಾಜಿ ಅಧ್ಯಕ್ಷರಾದ ಅವಿನಾಶ್, ಸಮಾಜದ ಮುಖಂಡರಾದ ಎಚ್.ಎನ್. ನಾಗೇಶ್, ಯು.ಎಸ್.ಮಲ್ಲಿಕಾರ್ಜುನ, ರೋಹಿತ್ ಮೊದಲಾದವರು ಉಪಸ್ಥಿತರಿದ್ದರು.