ಶ್ರಾವಣ ಮಾಸದ ನಿಮಿತ್ತ ಬಸವಕಲ್ಯಾಣದ ತ್ರಿಪುರಾಂತನ ಸಂಸ್ಥಾನ ಗವಿಮಠದಲ್ಲಿ ಸೋಮವಾರ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಶ್ರೀ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು. ಡಾ.ಬಾಲಕೃಷ್ಣ ರಾಠೋಡ್, ಸಂಜುಕುಮಾರ ಸುಗರೆ, ಸುಧಾಕರ ಮಹೇಂದ್ರಕರ್, ಸುರಶ ಚಕುರತೆ, ಶಾಂತವೀರ ಪೂಜಾರಿ ಇದ್ದರು. 
ಜಿಲ್ಲೆ

ಮಕ್ಕಳಿಗೆ ಉತ್ತಮ ಸಂಸ್ಕಾರ ಅವಶ್ಯಕ

ಬಸವಕಲ್ಯಾಣ: ಧರ್ಮದ ಮಾರ್ಗದಲ್ಲಿ ನಡೆದಾಗ ಜೀವನದಲ್ಲಿ ಶಾಂತಿ, ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ ಎಂದು ಸಂಸ್ಥಾನ ಗವಿಮಠದ ಶ್ರೀ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.

ಶ್ರಾವಣ ಮಾಸದ ನಿಮಿತ್ತ ನಗರದ ತ್ರಿಪುರಾಂತನ ಸಂಸ್ಥಾನ ಗವಿಮಠದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ೪ನೇ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಅವಶ್ಯಕವಾಗಿದೆ ಎಂದರು.

ಪ್ರಾಣ ಇದ್ದಾಗ ಈ ಶರೀರ ಜೀವಂತವಿದ್ದು ಮನುಷ್ಯ ಜೀವನ ನಡೆಸಲು ಸಾಧ್ಯ. ಸರ್ವಕ್ಕೂ ಆಧಾರವಾದ ಶಿವನು ಈ ಶರೀರದ ಎಲ್ಲ ವ್ಯವಹಾರವು ಸುಗಮವಾಗಿ ಸಾಗಲೆಂದು ಪ್ರಾಣವನ್ನು ಪ್ರತಿಷ್ಠಾಪಿಸಿದ್ದಾನೆ. ಅಲ್ಲದೇ ಆ ಪ್ರಾಣಕ್ಕೆ ಪ್ರೇರಕ ಶಕ್ತಿಯಾಗಿ ತಾನೂ ಸಹ ಪ್ರತಿಯೊಬ್ಬರ ಹೃದಯದಲ್ಲಿದ್ದಾನೆ ಎಂದು ಹೇಳಿದರು.

ಡಾ.ಬಾಲಕೃಷ್ಣ ರಾಠೋಡ್ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಬೇಕಾದರೆ ಉತ್ತಮ ಆರೋಗ್ಯ ಮುಖ್ಯ. ಯೋಗ, ಆಹಾರ, ನಿದ್ರೆ ನಿಯಮಿತವಾಗಿ ಮಾಡಿದರೆ ಆರೋಗ್ಯವಂತರಾಗಿ ಬದುಕಲು ಸಾಧ್ಯ ಎಂದರು.

ಸನ್ಮಾನ ಸ್ವೀಕರಿಸಿದ ಗೌರ ಪ್ರೌಢಶಾಲೆ ಮುಖ್ಯಗುರು ಸುಧಾಕರ ಮಹೇಂದ್ರಕರ ಮಾತನಾಡಿ, ೩೧ ವರ್ಷ ಶಿಕ್ಷಕನಾಗಿ ಸೇವೆ ಸಲ್ಲಿಸಿ ಈಗ ಗೌರ ಶಾಲೆಯಲ್ಲಿ ಮುಖ್ಯಗುರುವಾಗಿ ಸೇವೆ ಸಲ್ಲಿಸುತ್ತಿದ್ದು, ಮಾದರಿಯ ಶಾಲೆಯನ್ನಾಗಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ ಎಂದರು.

ಶಾಂತವೀರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸಂಜುಕುಮಾರ ಸುಗುರೆ, ಸುರೇಶ ಚಕುರತೆ, ಬಸವಂತಪ್ಪ ಲವಾರೆ, ಸದಾನಂದ ಶೀಲವಂತ, ಮಲ್ಲಿಕಾರ್ಜುನ ಅಲಗುಡೆ, ರಾಕೇಶ ಪುರವಂತ, ಸದಾನಂದ ಕಣಜೆ, ಸವಿತಾ ಸ್ವಾಮಿ, ರೇಖಾ ಚಿಟ್ಟೆ ಇತರರಿದ್ದರು. ರುದ್ರೇಶ್ವರ ಸ್ವಾಮಿ ಸ್ವಾಗತಿಸಿದರು. ಸರಸ್ವತಿ ಬೆಂಬಳಿ ನಿರೂಪಣೆ ಮಾಡಿದರು. ಶಕುಂತಲಾ ಮಠ ಮಂಗಳಾರತಿ ಹಾಡಿದರು. ಹಾಲಳ್ಳಿಯ ಭಜನಾ ಮಂಡಳಿಯಿಂದ ಚಕ್ರಿ ಭಜನೆ ನಡೆಯಿತು.