ಕಕಮರಿ ಗ್ರಾಮದಲ್ಲಿ ಶಾಲೆಯ ಮಕ್ಕಳಿಗೆ ಉಚಿತ ಬ್ಯಾಗ್ ವಿತರಿಸಲಾಯಿತು. ಆತ್ಮಾರಾಮ ಸ್ವಾಮೀಜಿ, ಎ.ಜಿ.ವಾಲಿ, ಅಪ್ಪಾಸಾಬ ವಾಲಿ, ಲಾಯಪ್ಪ ದಾಶ್ಯಾಳ, ರಾಯಪ್ಪ ಚಮಕೇರಿ, ಗುರುದೇವ ಪುಠಾಣಿ, ಮಹಾಂತೇಶ ಮಠಪತಿ ಇದ್ದರು. 
ಜಿಲ್ಲೆ

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು

ಗುರುದೇವಾಶ್ರಮದ ಆತ್ಮಾರಾಮ ಸ್ವಾಮೀಜಿ ಅಭಿಪ್ರಾಯ

ಕಕಮರಿ: ಶಿಕ್ಷಕರು ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಶಿಕ್ಷಣ ನೀಡಬೇಕು ಎಂದು ಗುರುದೇವಾಶ್ರಮದ ಆತ್ಮಾರಾಮ ಸ್ವಾಮೀಜಿ ಹೇಳಿದರು.
ಗ್ರಾಮದ ಗುರುದೇವ ಜ್ಞಾನಯೋಗಿ ಗುರುಕುಲ ಕನ್ನಡ ಮಾಧ್ಯಮ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ವಸತಿ ಶಾಲೆಯಲ್ಲಿ ಎಲ್‌ಕೆಜಿಯಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಈಚೆಗೆ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಅಂದವಾದ ಬರವಣಿಗೆ ರೂಢಿಸಿಕೊಳ್ಳಬೇಕು ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ಎ.ಜಿ.ವಾಲಿ ಮಾತನಾಡಿ, ಶಿಲ್ಪಿ ಕಲ್ಲನ್ನು ಕೆತ್ತಿ ಮೂರ್ತಿ ಮಾಡುವಂತೆ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಾರೆ. ಅವರಿಗೆ ಒಳ್ಳೆಯ ಸಂಸ್ಕಾರ ನೀಡುತ್ತಾರೆ ಎಂದರು.
ಅಪ್ಪಾಸಾಬ ವಾಲಿ, ಲಾಯಪ್ಪ ದಾಶ್ಯಾಳ, ರಾಯಪ್ಪ ಚಮಕೇರಿ, ಗುರುದೇವ ಪುಠಾಣಿ, ಬಸವರಾಜ ದಳವಾಯಿ, ಮಹಾಂತೇಶ ಮಠಪತಿ, ಶಿವನಿಂಗ ತಳಕಟ್ಟಿ, ಮುಖ್ಯೋಪಾಧ್ಯಾಯ ಸಂಗಮೇಶ ಬಿಳ್ಳೂರ,
ಶಿಕ್ಷಕರಾದ ಶ್ರೀಶೆಲ ಜನಗೌಡ, ರಮೇಶ ಪೂಜಾರಿ, ಸದಾಶಿವ ಮಡಿವಾಳ ಇತರರಿದ್ದರು.