ಚಿಕ್ಕೋಡಿ ತಾಲೂಕಿನ ಜೈನಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ದೈಹಿಕ ಶಿಕ್ಷಣ ಸಂಯೋಜಕ ಎ.ಡಿ.ಗಡೇಕಾಯಿ ಚಾಲನೆ ನೀಡಿದರು. ತಮ್ಮಣ್ಣ ಘರಬುಡೆ, ಬಾಬುರಾವ ಘರಬುಡೆ, ಸುರೇಶ ಘರಬುಡೆ, ಅಣ್ಣಪ್ಪ ಮಂಗಾಜ ಇತರರಿದ್ದರು. 
ಜಿಲ್ಲೆ

ಮಕ್ಕಳಲ್ಲಿನ ಪ್ರತಿಭೆ ಹೊರತರಲು ಪ್ರಯತ್ನಿಸಿ

ಚಿಕ್ಕೋಡಿ, ಬೆಳಗಾವಿ: ಮಕ್ಕಳಲ್ಲಿರುವ ವಿಶೇಷ ಕಲೆಗಳ ಅಭಿವ್ಯಕ್ತಿಗೆ ಪ್ರತಿಭೆ ಕಾರಂಜಿ ಸೂಕ್ತ ವೇದಿಕೆಯಾಗಬೇಕು ಎಂದು ದೈಹಿಕ ಶಿಕ್ಷಣ ಸಂಯೋಜಕ ಎ.ಡಿ.ಗಡೇಕಾಯಿ ಹೇಳಿದರು.

ತಾಲೂಕಿನ ಜೈನಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸದೃಢವಾದ ದೇಹದಲ್ಲಿ ಸದೃಢ ಮನಸ್ಸಿರುತ್ತದೆ ಎಂದರು.

ಸಾಂಸ್ಕೃತಿಕ ಕಲಾ ಚಟುವಟಿಕೆಗಳಾದ ಸಂಗೀತ, ನೃತ್ಯ, ನಾಟಕ, ಕತೆ, ಕವನ ಹೇಳುವುದು, ಛದ್ಮವೇಷ ಮತ್ತು ಚಿತ್ರಕಲೆಗಳು ಮಕ್ಕಳ ಮನೋಭೂಮಿಕೆಯನ್ನು ಸ್ವಸ್ಥವಾಗಿಡುತ್ತವೆ. ಮಕ್ಕಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವಂತಹ ವಾತಾವರಣವನ್ನು ಶಿಕ್ಷಕರು ನಿರ್ಮಿಸಿದಾಗ ಪ್ರತಿಭಾ ಕಾರಂಜಿಯ ಮೌಲ್ಯ ಹೆಚ್ಚುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಕ್ಷಕರ ಪತ್ತಿನ ಸಂಘದ ನಿರ್ದೇಶಕ ಚಂದ್ರಶೇಖರ ಅರಬಾವಿ ಮಾತನಾಡಿ, ಪ್ರತಿ ವಿದ್ಯಾರ್ಥಿಯೂ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಭವ್ಯ ಭಾರತದ ಉತ್ತಮ ಪ್ರಜೆಗಳಾಗಿ ಗುರುತಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ತಮ್ಮಣ್ಣ ಘರಬುಡೆ, ಬಾಬುರಾವ ಘರಬುಡೆ, ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ ಘರಬುಡೆ, ಅಣ್ಣಪ್ಪ ಮಂಗಾಜ, ಅಶೋಕ ಮಜಲಟ್ಟಿ, ಎಸ್.ಎನ್.ಬೆಳಗಾವಿ, ಎನ್.ಜಿ.ಪಾಟೀಲ, ಎಸ್.ಎಸ್.ಸಾರಾಪುರೆ, ಎಸ್.ಬಿ.ಹಳಿಜೋಳೆ, ಎಸ್.ಎನ್.ಖೋತ, ಎಸ್.ಎನ್.ತೆಗ್ಗಿಹಳ್ಳಿ, ಬಿ.ಎಂ.ಹುನಶ್ಯಾಳೆ, ಎಸ್.ಎ.ಖಡ್ಡ, ಶಿಲ್ಪಾ ಹೊಳೆಪ್ಪನವರ, ಗಿರೀಶ ನೀಲಶೆಟ್ಟಿ ಇತರರಿದ್ದರು.