ಚಿತ್ತಾಪುರದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ತಾಲೂಕು ನಿಕಟಪೂರ್ವ ದೈಹಿಕ ಶಿಕ್ಷಣಾಧಿಕಾರಿ ದೇವಿಂದ್ರರೆಡ್ಡಿ ದುಗನೂರ ಉದ್ಘಾಟಿಸಿದರು. ಮರೆಪ್ಪ ಬೊಮ್ಮನಳ್ಳಿ, ವೆಂಕಟೇಶ ಅಲ್ಲೂರ್, ಶ್ರೀಮಂತ ಸಂಗಾವಿ ಇತರರಿದ್ದರು. 
ಜಿಲ್ಲೆ

ಮಕ್ಕಳಲ್ಲಿನ ಕ್ರೀಡಾಸಕ್ತಿ ಗುರುತಿಸಿ

ಚಿತ್ತಾಪುರ: ಯುವಕರಲ್ಲಿ ಅಡಗಿರುವ ಕ್ರೀಡಾಸಕ್ತಿ ಗುರುತಿಸಿ, ಹೊರತರುವ ಕೆಲಸ ದೈಹಿಕ ಶಿಕ್ಷಕರು ಮಾಡಬೇಕು ಎಂದು ತಾಲೂಕು ನಿಕಟಪೂರ್ವ ದೈಹಿಕ ಶಿಕ್ಷಣಾಧಿಕಾರಿ ದೇವಿಂದ್ರರೆಡ್ಡಿ ದುಗನೂರ ಹೇಳಿದರು.

ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯದ ಜತೆಗೆ, ರಾಜ್ಯ- ರಾಷ್ಟç ಮಟ್ಟದಲ್ಲಿ ಹೆಸರು ಗಳಿಸಬಹುದು ಎಂದರು.

ಕ್ರೀಡಾAಗಣ ವ್ಯವಸ್ಥಾಪಕ ಮರೆಪ್ಪ ಬೊಮ್ಮನಳ್ಳಿ ಮಾತನಾಡಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಉಪಾಧ್ಯಕ್ಷ ವೆಂಕಟೇಶ ಅಲ್ಲೂರ್, ತಾಪಂ ಅಧಿಕಾರಿ ಶ್ರೀಮಂತ ಸಂಗಾವಿ, ಪ್ರಮುಖರಾದ ನಾಗೇಂದ್ರಪ್ಪ ಕಾಶಿ, ವೀರಭದ್ರಪ್ಪ ಹುಮನಾಬಾದ್, ಮಸ್ತಾನ್ ಪಟೇಲ್, ವೀರಭದ್ರ ಗುರುಮಠಕಲ್, ಭೀಮಾಶಂಕರ ಬೊಮ್ಮನಳ್ಳಿ, ವೆಂಕಟರೆಡ್ಡಿ, ಸುರೇಶ ರಾಂಪುರೆ ಇತರರಿದ್ದರು.

ಅಥ್ಲೆಟಿಕ್ಸ್, ಖೋ-ಖೋ, ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಫುಟ್ಬಾಲ್, ಯೋಗ ಸೇರಿ ವಿವಿಧ ಸ್ಪರ್ಧೆಗಳು ನಡೆದವು. ಶ್ರೀನಿವಾಸ ನಿರೂಪಣೆ ಮಾಡಿದರು.