ಬಾಗಲಕೋಟೆ: ಮಗುವಿಗೆ ಬಹಳ ಚಿಕ್ಕ ವಯಸ್ಸಿನಲ್ಲಿ ಮೌಲ್ಯ, ಸಂಸ್ಕಾರ ದೊರೆಯಬೇಕು. ಮೊದಲು ಆಟ, ಊಟ ನಂತರ ಪಾಠವಾಗಬೇಕು. ಇಲ್ಲವಾದಲ್ಲಿ ಮೌಲ್ಯಗಳ ಅದಃಪತನವಾಗಲಿದೆ ಎಂದು ವಿಜಯವಾಣಿ ಅಂಕಣಕಾರ, ಖ್ಯಾತ ಮನೋ ವೈದ್ಯ ಡಾ.ಆನಂದ ಪಾಂಡುರAಗಿ ಹೇಳಿದರು.
ನಗರದ ಬಿವಿವಿ ಸಂಘದ ಮೈದಾನದಲ್ಲಿ ಸೇವಾ ಭಾರತಿ ಟ್ರಸ್ಟ್ ಅಡಿಯ ಸೇವಾ ಭಾರತಿ ರಜತ ಮಹೋತ್ಸವ ಹಿನ್ನಲೆಯಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಕಿಶೋರಿ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಮಕ್ಕಳಿಗೆ ಗ್ರಹಿಸುವ ಶಕ್ತಿ ಬಹಳ ಮುಖ್ಯವಾಗಿದೆ. ಅವರ ಮನಸ್ಸಿನ ಸ್ಥಿತಿಗತಿಗಳಲ್ಲಿ ಪಾಲಕರು ಮೊದಲು ಅರಿತುಕೊಳ್ಳಬೇಕು. ವ್ಯಕ್ತಿತ್ವ ವಿಕಸನ ಅಂತ ಹೇಳುತ್ತೇವೆ. ಆದರೆ ನಿತ್ಯ ಮೊಬೈನಲ್ಲಿಯೇ ಮಕ್ಕಳು ಬ್ಯುಜಿ ಆಗಿರುತ್ತಾರೆ. ಅವರಲ್ಲಿ ಚೈತನ್ಯ ತುಂಬುವ ಕೆಲಸವಾಗಬೇಕು. ಆಗ ಬದುಕು ಸುಂದರಗೊಳ್ಳುತ್ತದೆ. ಅನವಶ್ಯಕ ವಿಷಯಗಳನ್ನು ಮಕ್ಕಳ ಮುಂದೆ ತರಬಾರದು ಎಂದರು.
ಒAದು ವಯಸ್ಸಿನಲ್ಲಿ ಆಕರ್ಷಣೆ ಆರಂಭವಾಗುತ್ತದೆ. ಆ ಆಕರ್ಷಣೆ ತಪ್ಪು ಮೂಡಿಸುವಂತಾಗಬಾರದು. ಸರಿಯಾದ ಮಾರ್ಗದರ್ಶನದಲ್ಲಿ ತೆಗೆದುಕೊಂಡು ಹೋಗುವಂತಿರಬೇಕು. ತಪ್ಪು ಮರುಕಳುಹಿಸದಂತೆ ಜಾಗೃತಿ ವಹಿಸಬೇಕು. ನಗುವಿನಲ್ಲಿ ಕುಟುಂಬ, ಸಮಾಜದ ಸಂತಸ ಅಡಗಿದೆ ಎಂದರು.
ಶ್ರೇಷ್ಠ ಜೀವನ ಎಂದರೇ ಗುರಿಯತ್ತ ಪಯಣ. ಅದು ದಾರಿ ತಪ್ಪುವಂತಾಗಬೇಕು. ದಾರಿ ಬೇಕಿದ್ದರೇ ತಪ್ಪ ಬಹುದು. ದಿಕ್ಕು ತಪ್ಪಿದರೇ ಬದಾಯಿಸಲು ಬಹಳ ಕಷ್ಟವಾಗಲಿದೆ. ಶಿಕ್ಷಣವೇ ಬೇರೆ ಮೌಲ್ಯಗಳೇ ಬೇರೆ. ಶಿಕ್ಷಣದಿಂದ ಮೌಲ್ಯಗಳು ಬರುವದಿಲ್ಲ. ಸಂಸ್ಕಾರ, ಮೌಲ್ಯಗಳಿಗೆ ಆದ್ಯತೆ ನೀಡಿದಾಗ ಸದೃಢ ಸಮಾಜ, ದೇಶ ಕಟ್ಟಲು ಸಾಧ್ಯವಿದೆ ಎಂದು ಹೇಳಿದರು.
ಡಾ.ರಘು ಅರಮಂಚಿ ಮಾತನಾಡಿ, ಸಂಘ ಪರಿವಾರ ಟೀಕೆ ಮಾಡುವವರು ಒಮ್ಮೆ ಬಂದು ನೋಡಬೇಕು. ಪರಿವಾರವು ವಿವಿಧ ಸೇವಾ ಕಾರ್ಯಗಳಲ್ಲಿ ನಿರತವಾಗಿದೆ. ಗದುಗಿನಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ೬೪ ಮಕ್ಕಳನ್ನು ರಕ್ಷಣೆ ಮಾಡಿ ಸೇವಾ ಭಾರತಿ ಮೂಲಕ ಸೇವೆ ನೀಡಲಾಯಿತು. ಅದರಲ್ಲಿ ೮ ಮಕ್ಕಳು ವಿದೇಶದಲ್ಲಿ ಇದ್ದಾರೆ. ಬುದ್ದಿ ಮಾಂಧ್ಯ ಮಕ್ಕಳು, ಅಂಗವಿಕಲ ಮಕ್ಕಳು, ಸಂಚಾರಿ ಚಿಕಿತ್ಸಾಲಯ, ಅನಾಥ ಮಕ್ಕಳಿಗೆ ಆಶ್ರಧಾಮ, ಕುಷ್ಠ ರೋಗಿಗಳ ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡುವ ಕೆಲಸ ಸೇವಾ ಭಾರತಿ ಮಾಡುತ್ತಿದೆ. ೧.೫ ಲಕ್ಷ ಚಟುವಟಕೆಗಳನ್ನು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ೫೦೦ ಸೇವಾ ಬಸೀದಿಗಳಲ್ಲಿ ಸೇವೆ ನಡೆಯಲಿದೆ ಎಂದು ತಿಳಿಸಿದರು.
ಸೇವಾ ಭಾರತಿ ಅಧ್ಯಕ್ಷ ಬಾಬುರಾವ ಘಂಟಸಾಲ, ಉದ್ಯಮಿಗಳಾದ ಸತೀಶ ಹಜಾರೆ, ರಾಜು ಬಿಜ್ಜರಗಿ, ಡಾ.ಮಹಾಂತೇಶ ಕಡಪಟ್ಟಿ, ವಿದ್ಯಾ ಪ್ರಸಾರಕ ಮಂಡಳದ ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ, ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ ಇದ್ದರು. ಶ್ರೇಯಾ ಜೋರಾಪುರ ಪ್ರಾರ್ಥಿಸಿದರು. ಗಂಗಾಧರ ಅಂಗಡಿ ವಂದಿಸಿದರು. ಡಾ.ಎಚ್.ಡಿ.ಪಾಟೀಲ ಪರಿಚಯಿಸಿದರು.