ದುರದುಂಡೀಶ್ವರ ವಿದ್ಯಾ ಸಂವರ್ಧಕ ಸಂಘದ ಎಸ್.ಎಸ್.ಕೆ.ಪಾಟೀಲ ಆಂಗ್ಲ ಮಾದ್ಯಮ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ಮಾಜಿ ಸಚಿವ ಎ.ಬಿ.ಪಾಟೀಲ, ಗಂಗಾಧರ ಮುಡಸಿ ಇತರರಿದ್ದರು. 
ಜಿಲ್ಲೆ

ಮಕ್ಕಳಲ್ಲಿ ಮೌಲ್ಯ, ಸಂಸ್ಕಾರ ಬೆಳೆಸಿ

Belagavi

ಸಂಕೇಶ್ವರ: ದಿ.ಬಸಗೌಡ ಪಾಟೀಲ ತಮ್ಮ ಮಗ ಎ.ಬಿ.ಪಾಟೀಲರಲ್ಲಿ ಮಾನವೀಯ ಮೌಲ್ಯ ಹಾಗೂ ಉತ್ತಮ ಸಂಸ್ಕಾರ ತುಂಬಿದ ಪರಿಣಾಮ ಇಂದು ಅವರು ರಾಜಕಾರಣದ ಜತೆಗೆ ಸಮಾಜಕಾರಣ ಮಾಡುತ್ತಿದ್ದಾರೆ ಎಂದು ಕೊಲ್ಲಾಪುರ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಪಟ್ಟಣದ ದುರದುಂಡೀಶ್ವರ ವಿದ್ಯಾ ಸಂವರ್ಧಕ ಸಂಘದ ಎಸ್.ಎಸ್.ಕೆ.ಪಾಟೀಲ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಸೋಮವಾರ ಭಾಗವಹಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಸಜ್ಜನ ರಾಜಕಾರಣ ನಡೆಯುತ್ತಿಲ್ಲ. ಇದಕ್ಕೆಲ್ಲ ಪ್ರಮುಖ ಕಾರಣ ಶಿಕ್ಷಣ. ಹೀಗಾಗಿ ಶಿಕ್ಷಣ ಕೇವಲ ಅಕ್ಷರಕ್ಕೆ ಸೀಮಿತವಾಗಬಾರದು. ಪರಿಶ್ರಮ, ಜ್ಞಾನ, ಶ್ರದ್ಧೆಗಳು ಶಿಕ್ಷಣದ ಮೂಲರೂಪವಾಗಿವೆ. ಶಿಕ್ಷಕರು ಹಾಗೂ ಪಾಲಕರು ಮಕ್ಕಳಲ್ಲಿ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಬಿತ್ತಬೇಕು. ಅಂದಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಹಿರಿಯರು ಕಟ್ಟಿಬೆಳೆಸಿದ ಶಿಕ್ಷಣ ಸಂಸ್ಥೆಯಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ ಅವರ ಪರಿಶ್ರಮದಿಂದ ಇಂದು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಿದೆ ಎಂದರು.

ಯುಪಿಎಸ್‌ಸಿ ಸಾಧಕಿ ಸಾಹಿತ್ಯ ಆಲದಕಟ್ಟಿ ಮಾತನಾಡಿ, ನಾನು ಐದು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದು ಫೇಲ್ ಆಗಿದ್ದೆ. ಕುಟುಂಬ ಹಾಗೂ ಶಿಕ್ಷಕರ ಸಹಕಾರ, ಪ್ರೋತ್ಸಾಹದಿಂದಾಗಿ ಯುಪಿಎಸ್‌ಸಿ ಪರೀಕ್ಷೆ ಪಾಸಾಗಿರುವೆ. ಸೋಲು-ನಿರಾಸೆಗಳನ್ನು ಅವಕಾಶಗಳಾಗಿ ಸ್ವೀಕರಿಸಿದ್ದೇ ನನ್ನ ಸಾಧನೆಗೆ ಕಾರಣ ಎಂದರು.

ಸಂಘದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿ, ಇಂದಿನ ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರಗಳು ಮಾಯವಾಗುತ್ತಿವೆ. ಮಕ್ಕಳಲ್ಲಿ ಶಿಕ್ಷಣದ ಜತೆಗೆ ಸಂಸ್ಕಾರ ಬೆಳೆಸಬೇಕಾಗಿದ್ದು, ಎಸ್‌ಡಿವಿಎಸ್ ಶಿಕ್ಷಣ ಸಂಸ್ಥೆ ದಿ.ಅಪ್ಪಣಗೌಡ ಪಾಟೀಲ, ದಿ.ಬಸಗೌಡ ಪಾಟೀಲ, ಎಲ್.ಕೆ.ಖೋತ ಸಂಸ್ಥೆ ಸ್ಥಾಪಿಸಿ ಈ ಭಾಗದ ಶಿಕ್ಷಣ ಕ್ಷೇತ್ರಕ್ಕೆ ಬಹುಮೂಲ್ಯ ಕೊಡುಗೆ ನೀಡಲಾಗಿದೆ ಎಂದರು.

ಶಂಕರಾಚಾರ್ಯ ಸಂಸ್ಥಾನ ಮಠದ ಸಚ್ಚಿದಾನಂದ ಅಭಿನವ ವಿದ್ಯಾ ನರಸಿಂಹ ಭಾರತಿ ಸ್ವಾಮೀಜಿ, ಸಂಘದ ಸ್ಥಾನಿಕ ನಿಯಂತ್ರಣ ಸಮಿತಿ ಅಧ್ಯಕ್ಷ ವಿನಯ ಪಾಟೀಲ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ, ಡಿಡಿಪಿಐ ಎಂ.ಎಲ್.ಹಂಚಾಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ, ಲಕ್ಷ್ಮಣ ಚಿಂಗಳೆ, ನಿರ್ದೇಶಕರಾದ ಬಸನಗೌಡ ಪಾಟೀಲ, ಕೆ.ಸಿ.ಶಿರಕೋಳಿ, ಗಂಗಾಧರ ಮುಡಸಿ, ವಿಜಯ ರವದಿ, ಕೆ.ಎಂ.ನಿಂಗನೂರಿ ಡಿ.ಎಸ್.ಕೇಸ್ತಿ, ವಿಶ್ವನಾಥ ತೋಡಕರ, ಸಂಚಾಲಕ ಆರ್.ಬಿ.ಪಾಟೀಲ, ಕಾರ್ಯದರ್ಶಿ ಜಿ.ಸಿ.ಕೋಟಗಿ, ಆಡಳಿತಾಧಿಕಾರಿ ಬಿ.ಎ.ಪೂಜಾರ ಮತ್ತಿತರರು ಇದ್ದರು.

ಜನ್ಮದಿನ, ವಿವಿಧ ಕಾರ್ಯಕ್ರಮ

ಮಾಜಿ ಸಚಿವ ಎ.ಬಿ.ಪಾಟೀಲ ಅವರ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಗ್ರೀನ್ ಆರ್ಮಿ ವತಿಯಿಂದ ಸ್ವಚ್ಛತೆ ಹಾಗೂ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಹಾವಿದ್ಯಾಲಯದ ಆವರಣದಲ್ಲಿ ಕೆಎಲ್‌ಇ ಆಸ್ಪತ್ರೆ ಸಹಯೋಗದಲ್ಲಿ ಉಚಿತ ದಂತ ಹಾಗೂ ಕನ್ಹೇರಿ ಮಠದ ಆಸ್ಪತ್ರೆಯ ವತಿಯಿಂದ ಕಣ್ಣಿನ ಚಿಕಿತ್ಸೆ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ, ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಬಡ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ಹಾಗೂ ಕಿಟ್ ವಿತರಿಸಲಾಯಿತು.