ಬಬಲೇಶ್ವರ ತಾಲೂಕಿನ ಮಮದಾಪುರ ಕರ್ನಾಟಕ ಪಬ್ಲಿಕ್ ಶಾಲೆಯ ಮಕ್ಕಳು ‘ಸಂಭ್ರಮ ಶನಿವಾರ-ಬ್ಯಾಗ್ ರಹಿತ ದಿನ’ ನಿಮಿತ್ತ ಆರೋಗ್ಯದ ಅರಿವು ಮೂಡಿಸುವ ನೃತ್ಯ ಪ್ರದರ್ಶಿಸಿದರು. 
ಜಿಲ್ಲೆ

ಮಕ್ಕಳಲ್ಲಿ ಪೌರಪ್ರಜ್ಞೆ ಅತ್ಯವಶ್ಯ

ಕ್ಷೇತ್ರ, ಶಿಕ್ಷಣಾಧಿಕಾರಿ, ಆಂಜನೇಯ, ಅಭಿಮತ, ಪಬ್ಲಿಕ್, ಶಾಲೆಯಲ್ಲಿ, ಬ್ಯಾಗ್, ರಹಿತ, ದಿನ, field, educationist, anjaneya, abhimat, public, at school, bag, rahit, day,
ವಿಜಯಪುರ: ಮಕ್ಕಳಲ್ಲಿ ಧನಾತ್ಮಕ ಬದಲಾವಣೆ ತರುವ ಮೂಲಕ ಅವರಲ್ಲಿ ಪೌರ ಪ್ರಜ್ಞೆ ಬೆಳೆಸಲು ‘ಸಂಭ್ರಮ ಶನಿವಾರ-ಬ್ಯಾಗ್ ರಹಿತ ದಿನ’ ದಂತಹ ಕಾರ್ಯಕ್ರಮಗಳು ಪೂರಕವಾಗಿದೆ ಎಂದು ವಿಜಯಪುರ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೆ. ಆಂಜನೇಯ ಹೇಳಿದರು.

ಶನಿವಾರ, ಬಬಲೇಶ್ವರ ತಾಲೂಕಿನ ಮಮದಾಪುರದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಸಂಭ್ರಮ ಶನಿವಾರ-ಬ್ಯಾಗ್ ರಹಿತ ದಿನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಆರೋಗ್ಯ ಮತ್ತು ಶುಚಿತ್ವದ ಬಗ್ಗೆ ವಿವರಿಸಿ, ನಂತರ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಉಪಪ್ರಾಚಾರ್ಯ ರಾಘವೇಂದ್ರ ಪುರೋಹಿತ ಮಾತನಾಡಿ, ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿದೆ. ಇದರಿಂದ ಮಕ್ಕಳಲ್ಲಿ ಸೃಜನಶೀಲತೆ ವೃದ್ಧಿಸುತ್ತದಲ್ಲದೆ, ಕಲಿಕೆಯಲ್ಲೂ ಉತ್ಸಾಹ ಬೆಳೆಯುತ್ತದೆ ಎಂದರು. ವಿಜ್ಞಾನ ಶಿಕ್ಷಕಿ ಸೀಮಾ ವೈದ್ಯ ಆರೋಗ್ಯ, ಆಹಾರ ಪದ್ಧತಿ, ವ್ಯಾಯಾಮ, ಯೋಗದ ಉಪಯುಕ್ತತೆಯ ಬಗ್ಗೆ ಮಕ್ಕಳಿಗೆ ಮನಮುಟ್ಟುವಂತೆ ವಿವರಿಸಿದರು.

ಶಿಕ್ಷಣ ಸಂಯೋಜಕರಾದ ರವೀಂದ್ರ ಚಿಕ್ಕಮಠ, ಪ್ರಭು ಬಿರಾದಾರ, ಸಿಆರ್‌ಪಿ ಎಸ್.ಎಸ್. ಕಾಂಬಳೆ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಥಮಿಕ ವಿಭಾಗದ ಪ್ರಭಾರಿ ವಿಜಯಲಕ್ಷ್ಮಿ ನಾಯಕ ಸ್ವಾಗತಿಸಿದರು. ಶಿಕ್ಷಕ ಎಂ.ಬಿ. ಪಾಟೀಲ ನಿರೂಪಿಸಿದರು.