ಚಿತ್ರದುರ್ಗ: ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಮನೋಭಾವ ಬೆಳೆಸಬೇಕು ಎಂದು ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್ ಶಿಕ್ಷಕರಿಗೆ ಸಲಹೆ ನೀಡಿದರು.
ನಗರದ ಡಯಟ್‌ನಲ್ಲಿ ಗುರುವಾರ ಎನ್‌ಪಿಇಪಿ(ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ)ಅಡಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.
ಜಗತ್ತಿನಲ್ಲಿ ಸಕಲ ಜೀವರಾಶಿಗಳ ಉಳಿವಿಗೆ ದೊಡ್ಡ ಶಕ್ತಿಯಾಗಿರುವ ಪ್ರಕೃತಿ ನಮ್ಮ ಬದುಕಿಗೆ ಮೂಲ ಅವಶ್ಯಕತೆಗಳನ್ನು ಒದಗಿಸಿಕೊಟ್ಟಿದೆ. ಉತ್ತಮ ಜೀವನಕ್ಕಾಗಿ ಮಾಲಿನ್ಯ ಮುಕ್ತ ಪರಿಸರ ನಿರ್ಮಿಸಿಕೊಳ್ಳಬೇಕಾಗಿದೆ. ನಾವು ಪರಿಸರ ರಕ್ಷಿಸಿದರೆ ಅದು ನಮ್ಮನ್ನು ಕಾಪಾಡುತ್ತದೆ ಎಂದರು.
ಎನ್‌ಪಿಇಪಿ ನೋಡಲ್ ಅಧಿಕಾರಿ ಎಸ್. ಬಸವರಾಜು,ಹಿರಿಯ ಉಪನ್ಯಾಸಕರಾದ ಎಸ್.ಸಿ. ಪ್ರಸಾದ್, ಎಸ್.ಆರ್.ಪೂರ್ಣಿಮಾ, ತಿಪ್ಪೇಸ್ವಾಮಿ, ಎಚ್. ಗಿರಿಜಾ, ಜ್ಞಾನೇಶ್ವರಿ, ಉಪನ್ಯಾಸಕರಾದ ಆರ್. ನಾಗರಾಜು, ಯು. ಸಿದ್ದೇಶಿ, ವಿ. ಕನಕಮ್ಮ, ಶಿವಲೀಲಾ, ರೇವಣ್ಣ, ಕೆ.ಎ. ಪದ್ಮಾ, ಅರ್ಜುಮಂದ್ ಭಾನು, ಅವಿನಾಶ್, ಮಂಜುನಾಥ್, ಟಿ. ಶಿವಕುಮಾರ್, ಜಿ.ಟಿ. ವಿನಯ್, ಬೋಸಯ್ಯ, ದಿಲೀಪ್ ಇದ್ದರು.
ಬಿ.ಸಿ.ಟ್ರಸ್ಟ್:
ಜನ್ಮ ದಿನಾಚರಣೆ, ವಿವಾಹ ಮಹೋತ್ಸವಗಳಲ್ಲಿ ಸಸಿ ನೆಡುವ ಮೂಲಕ ಪರಿಸರ ಕಾಳಜಿ ಜಾಗೃತಗೊಳಿಸುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಯೋಜನಾಧಿಕಾರಿ ಚಂದ್ರಹಾಸ್ ಹೇಳಿದರು.
ನಗರದ ಕವಾಡಿಗರ ಹಟ್ಟಿ ಪ್ರಿಯದರ್ಶಿನಿ ಬಾಲಕಿಯರ ಪೌಢಶಾಲೆ ಮತ್ತು ಬಿ.ಸಿ. ಟ್ರಸ್ಟ್ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಹಲವು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಪರಿಸರ ಕಾಳಜಿಯೂ ಪ್ರಮುಖವಾಗಿದೆ. ಮುಂದಿನ ಒಂದು ತಿಂಗಳ ಕಾಲ ಸಸಿ ನೆಡುವ ಕಾರ್ಯಕ್ರಮ ನಡೆಯಲಿದೆ ಎಂದರು.
ಶಿಕ್ಷಕ ವಸಂತಕಮಾರ್, ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಮಹಾಂತೇಶ್ ಮಾತನಾಡಿದರು. ನಗರಸಭೆ ಸದಸ್ಯ ಜಯಣ್ಣ, ಶಿಕ್ಷಕರಾದ ತಿಪ್ಪೇರುದ್ರಪ್ಪ, ಗೀತಾ, ಗ್ರಾಮಾಭಿವೃದ್ಧಿ ಯೋಜನೆ ಕವಾಡಿಗರ ಹಟ್ಟಿ ಒಕ್ಕೂಟದ ಉಪಾಧ್ಯಕ್ಷೆ ಶಕುಂತಲಾ ಇತರರು ಇದ್ದರು.
ರೇಣುಕಾ ಪ್ರಾರ್ಥಿಸಿದರು. ಜಯಪ್ಪ ಸ್ವಾಗತಿಸಿ, ಸುರೇಶ್ ನಿರೂಪಿಸಿದರು.
ಮಾತೃಶ್ರೀ ವಿದ್ಯಾಸಂಸ್ಥೆ:
ಚಿತ್ರದುರ್ಗದ ಶ್ರೀ ಮಾತೃಶ್ರೀ ವಿದ್ಯಾಸಂಸ್ಥೆಯಲ್ಲಿ ಗುರುವಾರ ಸಂಸ್ಥಾಪಕರ ದಿನ ಮತ್ತು ವಿಶ್ವ ಪರಿಸರ ದಿನ ಅಚರಿಸಲಾಯಿತು. ಸಂಸ್ಥೆ ಕಾರ್ಯದರ್ಶಿ ಡಾ.ವಿ.ಎಲ್. ಪ್ರಶಾಂತ್ ಮಾತನಾಡಿ, ಪರಿಸರದಿಂದ ಅಗುವ ವಿವಿಧ ಪ್ರಯೋಜನಗಳನ್ನು ವಿವರಿಸಿದರು.
ಸಂಸ್ಥೆ ಅಧ್ಯಕ್ಷೆ ಎನ್.ಶಾಂತಾ ವೆಂಕಟೇಶ್, ಆಡಳಿತಾಧಿಕಾರಿ ವಿ.ಎಲ್. ಪ್ರವೀಣ್, ಸಮಿತಿ ಸದಸ್ಯರಾದ ಗೌರಿ ಪ್ರಶಾಂತ್, ಕಾವ್ಯಾ ಪ್ರವೀಣ್ ಇತರರು ಇದ್ದರು.
ಶ್ರೀ ಪಾರ್ಶ್ವನಾಥ ವಿದ್ಯಾಸಂಸ್ಥೆ:
ಚಿತ್ರದುರ್ಗದ ಶ್ರೀ ಪಾರ್ಶ್ವನಾಥ ವಿದ್ಯಾಸಂಸ್ಥೆ ಶಾಲಾ ಆವರಣದಲ್ಲಿ ಗುರುವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು. ಸಂಸ್ಥೆ ಉಪಾಧ್ಯಕ್ಷ ಉತ್ತಮಚಂದ್ ಸುರಾನಾ, ನಿರ್ದೇಶಕ ಸುರೇಶ್‌ಪಟಿಯಾತ್ ಕಾರ್ಯಕ್ರಮ ಉದ್ಘಾಟಿಸಿದರು. ಉತ್ತಮ ಚಂದ್ ಸುರಾನಾ ಮಾತನಾಡಿ, ಹೆಚ್ಚುತ್ತಿರುವ ಭೂಮಿ ತಾಪಮಾನ ನಿಯಂತ್ರಿಸಲು ಪರಿಸರದ ರಕ್ಷಣೆ ಅಗತ್ಯ ಎಂದರು. ನಗರದ ಪ್ರಮುಖ ಬೀದಿಗಳಲ್ಲಿ ಪರಿಸರ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು. ಮುಖ್ಯ ಶಿಕ್ಷಕರಾದ ನಾಜಿಮಾ ಸ್ವಾಲೆಹಾ, ಜನಕ್‌ರೆಡ್ಡಿ, ಚಿತ್ರಕಲಾವಿದ ನಾಗರಾಜ್ ಬೇದ್ರೆ ಇತರರು ಇದ್ದರು.
ಭಾರತೀಯ ಯೋಗ ಶಿಕ್ಷಣ ಸಂಸ್ಥೆ:
ಹೆಚ್ಚುತ್ತಿರುವ ಜಾಗತಿಕ ತಾಪಮಾನ, ಹವಾಮಾನ ಬದಲಾವಣೆ, ಅರಣ್ಯನಾಶ, ಮತ್ತು ಪ್ರಾಣಿ-ಪಕ್ಷಿಗಳು ಅಳಿವಿನಂಚಿನಲ್ಲಿರುವಿಕೆ ಇವೆಲ್ಲವೂ ಪರಿಸರ ವಿನಾಶದ ಸೂಚನೆಗಳಾಗಿವೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ. ಕೃಷ್ಣಮೂರ್ತಿ ಆತಂಕ ವ್ಯಕ್ತಪಡಿಸಿದರು.
ವಿಶ್ವ ಪರಿಸರ ದಿನದ ಅಂಗವಾಗಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಗುರುವಾರ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಿಸದಿದ್ದರೆ ಜೀವನ ಸಂಕಷ್ಟಕ್ಕೆ ಸಿಲುಕುತ್ತದೆ ಎಂದರು. ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಲತಾ, ಸಂಸ್ಥೆ ಅಧ್ಯಕ್ಷ ರವಿ ಕೆ. ಅಂಬೇಕರ್ ಮಾತನಾಡಿದರು. ಯೋಗ ಸಾಧಕರಾದ ವನಜಾಕ್ಷಮ್ಮ, ಸುಜಾತ, ಶಿಕ್ಷಕಿಯರಾದ ರೇಣುಕಾ, ಸರಸ್ವತಿ, ಅನಿತಾ, ಭಾಗ್ಯಲಕ್ಷ್ಮೀ ಸುನೀತಾ, ಸುಕನ್ಯಾ, ಸುಧಮ್ಮ ಇತರರು ಇದ್ದರು.
----