ಜಿಲ್ಲೆ

ಮಕ್ಕಳಲ್ಲಿ ಕೃಷಿಯ ಬಗ್ಗೆ  ಪರಿಜ್ಙಾನ ಮೂಡಿಸಿ

ಯಾದಗಿರಿ: ಇಂದಿನ ವಿದ್ಯಾರ್ಥಿಗಳಿಗೆ ನಾವು ಶಿಕ್ಷಣದ ಜತೆಗೆ ಕೃಷಿಯ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅಗತ್ಯವಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಷಯ ಪರಿವೀಕ್ಷಕ ಹೆಚ್.ಹಣಮಂತ ತಿಳಿಸಿದರು.

 ನಗರದ ಹೊರವಲಯದಲ್ಲಿನ ಕೃಷಿ ಭೂಮಿಯಲ್ಲಿ ನವನಂದಿ ಆಂಗ್ಲ ಮಾಧ್ಯಮ ಶಾಲೆಯಿಂದ ಆಯೋಜಿಸಿದ್ದ ಶಾಲಾ ಮಕ್ಕಳಿಂದ ವ್ಯವಸಾಯದ ಪ್ರಾಯೋಗಿಕ ಪ್ರಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ಮಕ್ಕಳು ಕೇವಲ ಪುಸ್ತಕದ ಹುಳುಗಳಾಗುತ್ತಿದ್ದಾರೆ. ನಾವು ತಿನ್ನುವ ಅನ್ನ ಎಲ್ಲಿಂದ ಬರುತ್ತದೆ ಎಂಬ ಪರಿಜ್ಙಾನ ಸಹ ಅವರಿಗೆ ಇಲ್ಲ. ಭತ್ತ, ಜೋಳ, ಸಜ್ಜೆ ಹೇಗೆ ಬೆಳೆಯುತ್ತಾರೆ ಎಂಬ ಬಗ್ಗೆ ತಿಳಿವಳಿಕೆ ಇಲ್ಲ ಎಂದು ಹೇಳಿದರು.

ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ನಮ್ಮ ಮಕ್ಕಳಿಗೆ ಇಲ್ಲಿನ ಸಾಂಸ್ಕೃತಿ ಪರಂಪರೆ, ಈ ನೆಲದ ಸೊಗಡಿನ ಬಗ್ಗೆ ಶಾಲಾ ಹಂತದಲ್ಲೇ ಅರಿವು ಮೂಡಿಸುವ ಅಗತ್ಯವಿದೆ. ವಿಶೇಷವಾಗಿ ಹಳ್ಳಿಗಳಲ್ಲಿ ನಮ್ಮ ರೈತರು ಕೃಷಿ ಚಟುವಟಿಕೆಗಳ ಹೇಗೆ ತೊಡಗಿಕೊಳ್ಳುತ್ತಾರೆ. ನೇಗಿಲು, ಕುಂಟೆ, ರಾಟೆ, ಎತ್ತುಗಳು ಹೀಗೆ ನಮ್ಮ ಶ್ರಮ ಸಂಪ್ರದಾಯದ ಬಗ್ಗೆ ವಿದ್ಯಾಥರ್ಿಗಳಿಗೆ ತಿಳಿಸುವ ನವನಂದಿ ಶಾಲೆಯ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯವಸ್ಥಾಪಕ ಮಲ್ಲಿಕಾಜರ್ುನ ಪೋಸ್ತಿ ಮಾತನಾಡಿ, ಮಕ್ಕಳಿಗೆ ಶಾಲೆಗಳಲ್ಲಿ ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಬಸವರಾಜ ಶಿವರಾಯ ಯಲ್ಹೇರಿ ಮಾತನಾಡಿ, ಸಂಸ್ಥೆ ಆರಂಭವಾದ ಮೊದಲಿನಿಂದಲೂ ನಮ್ಮ ವಿದ್ಯಾರ್ಥಿಗಳಿಗಳನ್ನು ರಚನಾತ್ಮ ಚಟುವಟಿಕೆಗಳನ್ನು ತೊಡಗಿಸಲು ಪ್ರೇರಣೆ ನೀಡಲಾಗುತ್ತಿದೆ. ಪ್ರತಿ ವರ್ಷ ಮುಂಗಾರಿನ ಹಂಗಾಮಿನ ಮೇಳೆ ಈ ರೀತಿ ವ್ಯವಸಾಯದ ಪ್ರಾಯೋಗಿಕ ಕಾರ್ಯಕ್ರಮ ಆಯೋಜಿಸಿ, ನಂತರ ಇದೇ ವಿಷಯದ ಮೇಲೆ ಪ್ರಬಂಧ ಸ್ಪಧರ್ೆ ಏರ್ಪಡಿಸಲಾಗುತ್ತಿದೆ ಎಂದು ವಿವರಿಸಿದರು.

ಮುಖ್ಯಗುರು ರೇವಣಸಿದ್ದಪ್ಪ ಮಲಕೂಡ, ವಿಜಯಲಕ್ಷ್ಮೀ ಪಾಟೀಲ್, ರೀನಾ ಸೈಮನ್ ಸಿಬ್ಬಂದಿ ಹಾಗೂ ರೈತರು ಇದ್ದರು.

------