ಗೋಣಿಕೊಪ್ಪ: ಮಕ್ಕಳಲ್ಲಿ ಓದುವ ಅಭಿರುಚಿಯನ್ನು ಬೆಳೆಸುವಲ್ಲಿ ಪಾಲಕರು ಕರ್ತವ್ಯ ಮರೆಯುತ್ತಿರುವುದು ಆತಂಕ ಕಾರಿ ವಿಷಯ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಜಿಲ್ಲಾ ಉಪಾಧ್ಯಕ್ಷ ಡಾ.ಕಾಳಿಮಾಡ ಕೆ.ಶಿವಪ್ಪ ಅಭಿಪ್ರಾಯಪಟ್ಟರು.
ಗೋಣಿಕೊಪ್ಪ ಅನುದಾನಿತ ಪ್ರೌಢಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಭಾರತೀಯ ಸಾಹಿತ್ಯ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿ, ಬರಹಗಾರರು ಹೆಚ್ಚಾಗುತ್ತಿದರೂ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ. ಮಕ್ಕಳಲ್ಲಿ ಓದಿನ ಅಭಿರುಚಿ ಇಲ್ಲದಿರು ವುದು ಇದಕ್ಕೆ ಕಾರಣವಾಗಿದೆ. ಮಕ್ಕಳಲ್ಲಿ ಇರುವ ಮೊಬೈಲ್ ಗೀಳನ್ನು ಕಡಿಮೆ ಮಾಡಲು ಪುಸ್ತಕಗಳ ಬಗ್ಗೆ ಆಸಕ್ತಿ ಬೆಳೆಸಬೇಕು. ಪಾಲಕರು ಕೂಡ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ರಾಮಾಯಣ, ಮಹಾಭಾರತದಂತಹ ಕಾವ್ಯಗಳು ಜ್ಞಾನದ ಅನುಭವ ವನ್ನು ನೀಡುತ್ತಿದೆ. ವಿವಿಧ ಸಾಹಿತ್ಯ ಪ್ರಕಾರಗಳು ಕನ್ನಡಕ್ಕೆ ಅನುವಾದಗೊಳ್ಳುವ ಕಾರ್ಯ ಹೆಚ್ಚಾಗ ಬೇಕು ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾರ್ಯ ದರ್ಶಿ ಡಾ.ಆನಂದ್ ಕರ್ಲಾ, ಸಾಹಿತಿ ಕೆ.ಆರ್.ವಿನೋದ್ ಸಾಹಿತ್ಯ ಪರಂಪರೆ ಕುರಿತು ಮಾತನಾಡಿದರು. ಕವಿ ಜಗದೀಶ್ ಜೋಡು ಬೀಟಿ ‘ನನಗೂ ಒಬ್ಬಳು ಮಗಳಿರಬೇಕಿತ್ತು’ ಕಾವ್ಯ ವಾಚನ ಮಾಡಿದರು. ಡಾ.ಆನಂದ್ ಕರ್ಲಾ ಅವರ ಚುಟುಕು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸರ್ವದೈವತಾ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕಿ ಮನೆಯ ಪಂಡ ಶೀಲಾ ಬೋಪಣ್ಣ, ಪ್ರಮುಖರಾದ ನಾರಾಯಣ ಸ್ವಾಮಿ ನಾಯ್ಡು ಇದ್ದರು. ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಮತ್ತು ನೃತ್ಯ ಸ್ಪರ್ಧೆ ನಡೆಯಿತು.