ಬಾಗಲಕೋಟೆ: ಮಕ್ಕಳಲ್ಲಿ ಇರುವಂತಹ ಹಲವು ಬಗೆಯ ಪ್ರತಿಭೆಗಳ ಸಾಮರ್ಥ್ಯವನ್ನು ಪ್ರಸ್ತುತಪಡಿಸಲು ಅವಕಾಶ ನೀಡುವುದರ ಜೊತೆಗೆ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಉತ್ತಮ ಪ್ರಜೆಯನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಗುಡೂರ ಎಸ್ ಸಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪರಿವರ್ತನ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ೭ ನೇ ವರ್ಷದ ವಾರ್ಷಿಕೋತ್ಸವ-ಚಿನ್ನರ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಧ್ಯಾರ್ಥಿಗಳಲ್ಲಿ ಹಲವಾರು ಪ್ರತಿಭೆಗಳಿದ್ದು, ಉನ್ನತ ಮಟ್ಟದಲ್ಲಿ ಭಾಗವಹಿಸುವಂತೆ ಶಿಕ್ಷಕರು ಮಕ್ಕಳಲ್ಲಿ ಪ್ರೇರಣೆ ನೀಡಬೇಕು. ಅಲ್ಲದೇ ಪರಿವರ್ತನಾ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲಾ ಗುಣಮಟ್ಟ ಉತ್ತಮವಾಗಿಸಲು ರಾಘವೇಂದ್ರ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನಿಯವಾದುದು ಎಂದರು.
ಚಿನ್ನರ ಹಬ್ಬ ಕಾರ್ಯಕ್ರಮದಲ್ಲಿ ಕಾಂತಾರ ಸಿನಿಮಾದ ದೈವದ ಹಾಡಿಗೆ ವಿದ್ಯಾರ್ಥಿಗಳು ಮಾಡಿದ ನೃತ್ಯ ನಿಬ್ಬೆರಗಾಗಿಸಿತು. ಸಂಸ್ಥೆಯ ಉಪಾಧ್ಯಕ್ಷ ಇಸ್ಮಾಯಿಲï ಇಟಗಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಽಕಾರಿ ಜಾಸ್ಮೀನ್ ಕಿಲ್ಲೇದಾರ, ಬಿ.ಕೆ.ನಂದನೂರ, ಸಿ.ಆರ್.ಪಿ ಮಹಾಂತೇಶ ತಿಪ್ಪನ್ನವರ, ಸಂಸ್ಥೆಯ ಅಧ್ಯಕ್ಷ ಅಮೀನ ಸಾಲಿ, ಮುಖ್ಯೋಪಾಧ್ಯಾಯಿನಿ ಸಲ್ಮಾ ಇಟಗಿ, ಸುಲೇಮಾನ ಬಂಗಾರಚುಕ್ಕಿ, ನೀಲಪ್ಪ ಕೆಲೂರ, ಪ್ರಭು ವಸöದ, ರಫೀಲ ಇಟಗಿ, ಅಬ್ದುಲ ವಾಲಿಕಾರ, ಬಸವರಾಜ ನಾಡಗೌಡ ಸೇರಿದಂತೆ ಇತರರು ಇದ್ದರು.