ಜಿಲ್ಲೆ

ಮಕ್ಕಳಲ್ಲಿ ಅಭಿವ್ಯಕ್ತಿ ಸಾಮರ್ಥ್ಯಾಭಿವೃದ್ಧಿಗೆ ಕಥೆ ಸಹಕಾರಿ

ಚಿತ್ರದುರ್ಗ: ಮಕ್ಕಳಲ್ಲಿ ಅಭಿವ್ಯಕ್ತಿ ಸಾಮರ್ಥ್ಯ ಬೆಳೆಸಲು ಕಥೆ ಹೇಳುವ ಕೌಶಲ ಸಹಕಾರಿಯಾಗಲಿದೆ ಎಂದು ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲ ಯದ(ಸಿಟಿಇ)ಸಹನಿರ್ದೇಶಕಿ ಟಿ.ಜಿ.ಲೀಲಾವತಿ ಹೇಳಿದರು. ನಗರದ ಡಯಟ್‌ನಿಂದ, ಶ್ರೀ ಆಲೂರು ವೆಂಕಟರಾವ್ ಭಾಷಾ ಕೌಶಲ ತ ರಬೇತಿ ಕೇಂದ್ರದಿಂದ ಸೃಜಿಸಿರುವ ಕಥೆಗಳನ್ನು ಶಾಲೆಗಳಲ್ಲಿ ಬಳಸುವ ಕುರಿತಂತೆ ಸಿಟಿಇನಲ್ಲಿ ಬುಧವಾರ ಆಯೋಜಿಸಿದ್ದ ತರಬೇತಿ ಕಾರ‌್ಯಾ ಗಾರದಲ್ಲಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಭಾಷಾ ಕೌಶಲ ಸಾಮರ್ಥ್ಯ ಹೆಚ್ಚಿಸಬೇಕು. ಆಲಿಸುವ ಗುಣ ಬೆಳೆಸಿ ಭಾಷೆಯ ಸುಲಭ ಕಲಿಕೆಗೆ ನೆರವಾಗಲಿ ದೆ. ಶಿಕ್ಷಕರು ಜವಾಬ್ದಾರಿಯಿಂದ ಬೋಧಿಸುವ ಮೂಲಕ ಮಕ್ಕಳ ಕೌಶಲಾಭಿವೃದ್ಧಿಗೆ ಮುಂದಾಗಬೇಕೆಂದರು. ಆಲೂರು ವೆಂಕಟರಾವ್ ಭಾಷಾ ಕೌಶಲ ತರಬೇತಿ ಕೇಂದ್ರದ ಮುಖ್ಯಸ್ಥ ಗುರುಪ್ರಸಾದ್ ಅವರು ಮಾತನಾಡಿ,ಕಥೆ ಹೇಳುವುದು ಒಂದ ಕಲೆ,ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸುವ ಮೂಲಕ ಅವರ ಅಭಿವ್ಯಕ್ತಿ ಸಾಮರ್ಥ್ಯವನ್ನು ಪರೀಕ್ಷಿಸಲು ಕಥೆಗಳು ಪೂರಕವಾಗಿವೆ ಎಂದರು.
ಕಾರ‌್ಯಕ್ರಮಾಧಿಕಾರಿ ಡಿ.ನರಸಿಂಹಪ್ಪ ಮಾತನಾಡಿ,ಆಲೂರು ವೆಂಕಟರಾವ್ ಭಾಷಾ ಕೌಶಲ ತರಬೇತಿ ಕೇಂದ್ರದಿಂದ ಕನ್ನಡದಲ್ಲಿ 50 ಆ ಡಿಯೋ ಕಥೆಗಳನ್ನು ಸೃಜಿಸಲಾಗಿದೆ ಎಂದರು. ಸಿಟಿಇ ಪ್ರವಾಚಕ ತಿಪ್ಪೇಶಪ್ಪ, ನೋಡಲ್ ಅಧಿಕಾರಿಗಳಾದ ವಿ.ಕನಕಮ್ಮ, ಎಸ್.ಬಸವರಾ ಜು, ಸಂಪನ್ಮೂಲ ವ್ಯಕ್ತಿಗಳಾದ ಅನುಷಾ,ರಾಕೇಶ್,ಗಿರಿಜಾ, ಪುನೀತ್, ಬಿಆರ್‌ಪಿ ಚಿದಾನಂದ, ಸಿಆರ್‌ಪಿ ಸೌಭಾಗ್ಯ, ಜಾವಿದ್‌ಭಾಷಾ,ಕೌ ಸರ್‌ಬಾನು ಮತ್ತಿತರರು ಇದ್ದರು.