ವಿಜಯಪುರ: ಕರೋನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಾರದು ಎಂದು ಮುದ್ದೇಬಿಹಾಳ ತಾಲೂಕಿನ ನಾಲತವಾಡ ಮಹಿಳೆಯರು ದೇವಿಗೆ ನೈವೇದ್ಯವನ್ನು ಮಾಡುತ್ತಿದ್ದಾರೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಪಟ್ಟಣದ ಮಹಿಳೆಯರು ಐದು ದಿನಗಳ ಕಾಲ ರಾತ್ರಿ ವೇಳೆಯಲ್ಲಿ ಶ್ರೀವೀರೇಶ್ವರ ಸರ್ಕಲ್ ಹತ್ತಿರವಿರುವ ಶ್ರೀ ಪಿಲೇಕಮ್ಮ ದೇವಿಗೆ ನೈವೇದ್ಯ ಹಾಗೂ ಹಾಡಿನ ಮೂಲಕ ದೇವಿಯ ಮೊರೆ ಹೋಗಿದ್ದಾರೆ. ಇನ್ನು ನಾಲತವಾಡ ಪಟ್ಟಣದ ವಿನಾಯಕ ನಗರದ ಮಹಿಳೆಯರಿಂದ ಸೋಮವಾರ ದಿಂದ ಪ್ರತಿ ನಿತ್ಯ ದೇವತೆಗೆ ನೈವೇದ್ಯ, ನಂತರ ರಾತ್ರಿಯಲ್ಲಿ ಮಹಿಳೆಯರಿಂದ ನಾಲ್ಕು ಗಂಟೆಗಳ ಕಾಲ ಹಾಡು ಭಜನೆ ಮಾಡುತ್ತ ದೇವಿಯನ್ನು ಆರಾಧ್ಯ ಮಾಡುತ್ತಿದ್ದಾರೆ. ಶಿವಲಿಂಗಮ್ಮ ಬಿರದಾರ, ಅಕ್ಕಮ ಗಂಗನಗೌಡರ, ರೇಣುಕಾ ಹಳಮನಿ ಸೇರಿದಂತೆ ಗಲ್ಲಿಯ ಅನೇಕ ಮಹಿಳೆಯರು ಹಾಡು, ಭಜನೆ ಮಾಡುತ್ತಿದ್ದಾರೆ.