ಎನ್.ಆರ್.ಪುರ ತಾಲೂಕಿನ ಹಳ್ಳಿಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೇ ವಿದ್ಯಾರ್ಥಿ ಸಂಘದಿಂದ ವಿವಿಧ ಪರಿಕರಗಳನ್ನು ವಿತರಿಸಲಾಯಿತು. ರೇಖಾ, ಎನ್.ಪಿ.ರಮೇಶ್, ಎಚ್.ಇ.ದಿವಾಕರ, ರೂಪಾ, ದಾಮಿನಿ, ರವೀಂದ್ರ ಗೌಡ, ಸಂಜೀವ ಪೂಜಾರಿ ಇತರರಿದ್ದರು.  
ಜಿಲ್ಲೆ

ಮಕ್ಕಳನ್ನು ಮಾಹಿತಿ ತಂತ್ರಜ್ಞಾನಕ್ಕೆ ಅಣಿಗೊಳಿಸಿ

ಎನ್.ಆರ್.ಪುರ: ಮಕ್ಕಳನ್ನು ಮಾಹಿತಿ ತಂತ್ರಜ್ಞಾನ, ಡಿಜಿಟಲ್ ವ್ಯವಸ್ಥೆಗೆ ಅಣಿಗೊಳಿಸಬೇಕಾಗಿದೆ ಎಂದು ಸೀತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಹೇಳಿದರು.

ಇತ್ತೀಚೆಗೆ ಹಳ್ಳಿಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೇ ವಿದ್ಯಾರ್ಥಿ ಸಂಘದವರು ಶಾಲೆಗೆ ನೀಡಿದ 96 ಸಾವಿರ ರೂಪಾಯಿ ದೇಣಿಗೆಯ ಹಣದಲ್ಲಿ ಸ್ಮಾರ್ಟ್ ಕ್ಲಾಸ್, ಪ್ರಿಂಟರ್, ಕಂಪ್ಯೂಟರ್, ಶಾಲೆಯ ನೆಟವರ್ಕ್‌ಗೆ ಬೂಸ್ಟರ್, 1ನೇ ತರಗತಿಯ ಇಂಗಿಷ್ ಮೀಡಿಯಂ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಹಳ್ಳಿಬೈಲು ಸರ್ಕಾರಿ ಶಾಲೆ ಪ್ರಾರಂಭವಾಗಿ 61 ವರ್ಷವಾಗಿದೆ. ಶಾಲೆಗೆ ಯಾವುದೇ ಮೊಬೈಲ್ ನೆಟ್‌ವರ್ಕ್ ಸಿಗುತ್ತಿರಲಿಲ್ಲ. ಈ ಸಮಸ್ಯೆಗೆ ಈಗ ಶಾಶ್ವತ ಪರಿಹಾರ ಸಿಕ್ಕಿದೆ ಎಂದರು.

ಗ್ರಾಪಂ ಸದಸ್ಯ ಎನ್.ಪಿ.ರಮೇಶ್ ಮಾತನಾಡಿ, ಸರ್ಕಾರ ಎಲ್ಲ ಕೆಲಸ ಮಾಡಲು ಸಾಧ್ಯವಿಲ್ಲ. ಈ ರೀತಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಮುಂದೆ ಉನ್ನತ ಸ್ಥಾನಕ್ಕೆ ಹೋದ ನಂತರ ಕಲಿತ ಶಾಲೆ ಮರೆಯದೆ ಸಹಾಯ ಮಾಡಬೇಕು ಎಂದರು.

ಗ್ರಾಪಂ ಸದಸ್ಯ ಎಚ್.ಇ.ದಿವಾಕರ ಮಾತನಾಡಿ, ಶಾಲೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಉತ್ತಮ ಶಿಕ್ಷಕರಿದ್ದಾರೆ. ಹಳೇ ವಿದ್ಯಾರ್ಥಿ ಸಂಘದಿಂದ ಶಾಲೆಗೆ ನೆಟ್‌ವರ್ಕ್ ಸಿಕ್ಕಿದೆ ಎಂದರು.

ಎಸ್‌ಡಿಎಂಸಿ ಉಪಾಧ್ಯಕ್ಷೆ ರೂಪಾ, ಗ್ರಾಮದ ಸಂಜೀವ ಪೂಜಾರಿ, ರವೀಂದ್ರ ಗೌಡ, ಗ್ರಾಪಂ ಸದಸ್ಯೆ ದಾಮಿನಿ, ಇಸಿಒ ರಂಗಪ್ಪ, ಸಿಆರ್‌ಪಿ ಓಂಕಾರಪ್ಪ, ಮುಖ್ಯಶಿಕ್ಷಕ ಬಸವರಾಜ್, ಶಿಕ್ಷಕ ರಂಗನಾಥ, ಮನುಶ್ರೀ ಇದ್ದರು.