ಎಂ.ಕೆ.ಹುಬ್ಬಳ್ಳಿ: ಪಟ್ಟಣದ ಕಲ್ಮೇಶ್ವರ ಸಂಯುಕ್ತ ಪಿಯು ಮಹಾವಿದ್ಯಾಲಯಕ್ಕೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಗುರುವಾರ ಭೇಟಿ ನೀಡಿ, ಪರಿಶೀಲಿಸಿದರು.
ಕೇಂದ್ರ ಸರ್ಕಾರದಿಂದ 12ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅಟಲ್ ಟಿಂಕ್‌ರಿಂಗ್ ಲ್ಯಾಬ್ ವೀಕ್ಷಣೆ ಮಾಡಿದ ಸಚಿವರು, ಮಕ್ಕಳಿಂದ ಮಾಹಿತಿ ಪಡೆದುಕೊಂಡರು. ಹಲವು ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ನಂತರ ಶಾಲಾ ಆಡಳಿತ ಮಂಡಳಿ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು. 1995ರ ನಂತರದಲ್ಲಿ ಪ್ರಾರಂಭಗೊಂಡ ಖಾಸಗಿ ಶಾಲೆಗಳನ್ನು ಅನುದಾನಿತಗೊಳಿಸಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸ್ಥಳೀಯ ಶಿಕ್ಷಣ ಸಂಸ್ಥೆ ಮತ್ತು ಅಲ್ ಅಮಿನ್ ಉರ್ದು ಪ್ರೌಢಶಾಲೆಯ ಶಿಕ್ಷಕರು ಮನವಿ ಸಲ್ಲಿಸಿದರು.
ತಹಸೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಶಿಕ್ಷಣ ಇಲಾಖೆ ಧಾರವಾಡ ವಿಭಾಗದ ಅಪರ ಆಯುಕ್ತೆ ಮಮತಾ ನಾಯಕ, ಬಿ.ಎಂ.ಕುಂದಗೋಳ, ಬಿಇಒ ಆರ್.ಟಿ.ಬಳಿಗಾರ, ಆರ್.ಟಿ.ಜುಟ್ಟನವರ, ಸಹಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಡಾ.ಸೋಮಶೇಖರ ಹಲಸಗಿ, ಬಸನಗೌಡ ಸಿದ್ರಾಮನಿ, ಬಿಜೆಪಿ ಕಿತ್ತೂರು ಬ್ಲಾಕ್ ಅಧ್ಯಕ್ಷ ಡಾ.ಬಸವರಾಜ ಪರವಣ್ಣವರ, ಸಂದೀಪ ದೇಶಪಾಂಡೆ, ಶಿವಾನಂದ ಹನುಮಸಾಗರ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೀರೇಶ ಸಂಬಣ್ಣವರ, ಉಪಾಧ್ಯಕ್ಷ ವೆಂಕಪ್ಪ ತೊರಗಲ್, ನಿರ್ದೇಶಕರಾದ ಬಸವರಾಜ ಡೂಗನವರ, ಗುರುಲಿಂಗಪ್ಪ ಹಲಸಗಿ, ರಾಜು ಮುತ್ನಾಳ, ಬಸಪ್ಪ ಕರವಿನಕೊಪ್ಪ, ಅರುಣ ರಾಹುತ, ಗುರಪ್ಪ ದಡ್ಡಿ, ಲಕ್ಷ್ಮಣ ಗೋಕಾರ, ಪ್ರಾಚಾರ್ಯ ಸಿ.ಕೆ.ಗುರುವಣ್ಣವರ, ಜಿ.ಆರ್.ವಾಲಿ ಇದ್ದರು.