ಜಿಲ್ಲೆ

ಮಕ್ಕಳನ್ನು ತಾರತಮ್ಯದಿಂದ ಕಾಣಬೇಡಿ

Yadgiri - Laxmikanth Kulkarni

ಯಾದಗಿರಿ: ನಿತ್ಯ ದುಡಿದು ಜೀವನ ನಿರ್ವಹಣೆ ಮಾಡುವ ಗ್ರಾಮೀಣ ಭಾಗದ ಕೂಲಿ ಕಾಮರ್ಿಕ ಮಹಿಳೆಯರ ಮಕ್ಕಳ ಪಾಲನೆ ಮಾಡಲು ಸರಕಾರ ಜಾರಿಗೆ ತಂದ ಕೂಸಿನ ಮನೆ ಯೋಜನೆಯ ಯಶಸ್ವಿಗೆ ಆರೈಕೆದಾರರ ಜವಾಬ್ದಾರಿ ಪ್ರಮುಖವಾಗಿದೆ ಎಂದು ಜಿಪಂ ಸಿಇಒ ಗರೀಮ ಪನ್ವಾರ ಕಿವಿಮಾತು ಹೇಳಿದರು.

ಸೋಮವಾರ ಶಹಾಪುರ ತಾಲೂಕಿನ ದಿಗ್ಗಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನೋಂದಾಯಿತ ಕೂಲಿ ಕಾಮರ್ಿಕರ ಮಕ್ಕಳ ಆರೈಕೆ ಮಾಡಲು ಜಾರಿಗೆ ತಂದಿರುವ ಕೂಸಿನ ಮನೆಗೆ ದಿಢೀರ್ ಭೇಟಿ ನೀಡಿ, ಸೆಂಟರ್ ಸೆಟಪ್ ತರಬೇತಿ ಪ್ರಕ್ರಿಯೆ ಪರಿಶೀಲಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಕೂಲಿ ಕಾಮರ್ಿಕ ಮಹಿಳೆಯರ ಮೂರು ವರ್ಷದೊಳಗಿನ ಮಕ್ಕಳನ್ನು ಆರೈಕೆ ಮಾಡುವ ಮೂಲಕ ಮಹಿಳೆಯರನ್ನು ಆಥರ್ಿಕವಾಗಿ ಸಬಲೀಕರಣಗೊಳಿಸಲು ಸಕರ್ಾರ ಕೂಸಿನ ಮನೆ ಎಂಬ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದಿದೆ ಎಂದರು.

ಇಲ್ಲಿ ದಾಖಲಾಗುವ ಮಕ್ಕಳಲ್ಲಿ ಯಾವುದೇ ತಾರತಮ್ಯ ಮಾಡದೆ ಎಲ್ಲರೂ ಒಂದೇ ಎಂಬ ಸಮಾನ ಮನೋಭಾವನೆಯಿಂದ ಆರೈಕೆ ಮಾಡುವ ಜವಾಬ್ದಾರಿ ಆರೈಕೆದಾರರ ಮೇಲಿದೆ. ಈ ಮನೆಗಳು ಗ್ರಾಮೀಣ ಭಾಗದ ಕೂಲಿ ಕಾಮರ್ಿಕ ತಾಯಂದಿರಿಗೆ ವರದಾನವಾಗಬೇಕು. ಮಕ್ಕಳನ್ನು ಆರೈಕೆ ಮಾಡುವದನ್ನು ನೋಡಿದ ತಾಯಂದಿರು ಖುಷಿ ಪಡುವಂತಿರಬೇಕು. ತಾಯಂದಿರು ತಮ್ಮ ಮಕ್ಕಳನ್ನು ನಿಭರ್ೀತಿಯಿಂದ ಮನೆಯಲ್ಲಿ ತಂದು ಬಿಡುವ ವಾತಾವರಣ ಸೃಷ್ಟಿಯಾಗಬೇಕು ಎಂದು ನಿದರ್ೇಶನ ನೀಡಿದರು.