ಉಳ್ಳಾಗಡ್ಡಿ-ಖಾನಾಪುರ: ಸಮುದಾಯದಲ್ಲಿ ಶ್ರೇಷ್ಠ, ಕನಿಷ್ಠ ಎನ್ನದೆ ಸಮಭಾವ ಬೆಳೆಸಿಕೊಳ್ಳಬೇಕು. ಬದುಕಿಗೆ ಜ್ಞಾನ ಸಂಪತ್ತು ಮುಖ್ಯವಾಗಿದೆ ಎಂದು ಹಂದಿಗನೂರಿನ ವೀರೇಶ ಶರಣರು ಹೇಳಿದರು.
ಸಮೀಪದ ಯಮಕನಮರಡಿಯ ಭೀಮನಗರದಲ್ಲಿ ಹಮ್ಮಿಕೊಂಡಿದ್ದ ಬಸವಾದಿ ಶಿವಶರಣರ ವಚನಜ್ಯೋತಿ ಯಾತ್ರೆ ಹಾಗೂ 5 ದಿನ ಜರುಗಿದ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ನೀಡುವ ಮೂಲಕ ಜ್ಞಾನವಂತರಾಗಿ ಮಾಡಬೇಕು ಎಂದರು.
ಶ್ರೀಹುಣಸಿಕೊಳ್ಳ ಮಠದ ಶ್ರೀಸಿದ್ದಬಸವ ಸ್ವಾಮೀಜಿ ಮಾತನಾಡಿ, ಹುಟ್ಟು ಸಹಜ, ಸಾವು ಆಕಸ್ಮಿಕ. ಹಾಗಾಗಿ ಇರುವಷ್ಟುದಿನ ನೆಮ್ಮದಿಯಿಂದ ಬದುಕಬೇಕು ಎಂದರು.
ಹತ್ತರಗಿ ಕಾರಿಮಠದ ಶ್ರೀಗುರುಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು. ದಲಿತ ಮುಖಂಡ ದಿಲೀಪ ಹೊಸಮನಿ, ವಕೀಲರಾದ ವಿಕ್ರಂ ಕರನಿಂಗ, ರಾಜೇಶ ಮೋಸಿ, ಬಾಳಾರಾಮ ರಜಪೂತ ಮಾತನಾಡಿದರು. ಜಯವಂತ ಸಬನೀಸ್, ಕಿರಣ ಹತ್ತರಕಿ, ಧರನಟ್ಟಿ ಗ್ರಾಪಂ ಅಧ್ಯಕ್ಷ ನಿಂಗಪ್ಪ ಕೊಚ್ಚರಗಿ, ಯಮನಪ್ಪ ಗಿರೆನ್ನವರ, ಮಲ್ಲಿಕಾರ್ಜುನ ರಾಸಿಂಗೆ, ಮಹಾದೇವ ತಳವಾರ, ಸೋಮೇಶ ಜೀವನ್ನವರ, ರಮೇಶ ಜೀವನ್ನವರ, ಕಾಶಿನಾಥ ಮೇತ್ರಿ, ಸಾಗರ ತಳಗೇರಿ, ಪ್ರಕಾಶ ಕಾಂಬಳೆ, ಸುರೇಶ ಗುಡಿಕಡೆ, ಕಲ್ಲಪ್ಪ ಪೂಜೇರಿ, ಮಾರುತಿ ಶಿರಗಾಂವಿ, ಅನಿಲ ಶಿರಗಾಂವಿ, ಬಸವರಾಜ ಕಟ್ಟಿಮನಿ ಇತರರಿದ್ದರು. ಸುಪ್ರಿಯಾ ಗಿರೆನ್ನವರ ನಿರೂಪಿಸಿದರು.