ಬಸವಕಲ್ಯಾಣದ ಅನುಭವ ಮಂಟಪ ಆವರಣದಲ್ಲಿ ಬುಧವಾರ ಎರಡು ದಿನಗಳ ಪೌರತ್ವ ಶಿಬಿರಕ್ಕೆ ಚಾಲನೆ ನೀಡಲಾಯಿತು. ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಶಿವಯೋಗೇಶ್ವರ ಸ್ವಾಮೀಜಿ, ಪೂಜ್ಯ ಸುಗಣಾತಾಯಿ, ಆಶಾ ಮುದಾಳೆ ಇತರರಿದ್ದರು. 
ಜಿಲ್ಲೆ

ಮಕ್ಕಳನ್ನು ಒಳ್ಳೆ ಪ್ರಜೆಗಳನ್ನಾಗಿ ಮಾಡುವ ಶಕ್ತಿ ಶಿಕ್ಷಕರಲ್ಲಿದೆ

ಬಸವಕಲ್ಯಾಣ: ಸಮಾಜದಲ್ಲಿ ಮಕ್ಕಳಿಗೆ ಮಾನವೀಯ ಸಂಪನ್ಮೂಲ ವ್ಯಕ್ತಿಗಳನ್ನಾಗಿ, ಸಂಸ್ಕಾರಯುತರನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.

ಭಾಲ್ಕಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ತಳವಾಡ(ಕೆ)ನ ಅಲ್ಲಮ ಪ್ರಭು ಬಿ.ಇಡಿ. (ಶಿಕ್ಷಣ) ಮಹಾವಿದ್ಯಾಲಯದಿಂದ ಅನುಭವ ಮಂಟಪ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ೨೦೨೩-೨೪ನೇ ಸಾಲಿನ ಎರಡು ದಿನಗಳ ಪೌರತ್ವ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ಮಕ್ಕಳಿಗೆ ಒಳ್ಳೆಯ ಪ್ರಜೆಗಳನ್ನಾಗಿ ಮಾಡುವ ಶಕ್ತಿ ಶಿಕ್ಷಕರ ಕೈಯಲ್ಲಿದೆ ಎಂದರು.

ತಾವು ಈಗ ಒಬ್ಬ ಒಳ್ಳೆಯ ಆದರ್ಶ ಭಾವಿ ಶಿಕ್ಷಕರಾಗಿ ತಯಾರಾಗಿದ್ದೀರಿ. ತಮ್ಮಿಂದ ಅನೇಕ ಮಕ್ಕಳ ಭವಿಷ್ಯ ಉಜ್ವಲಗೊಳ್ಳಬೇಕು. ಜಗತ್ತಿಗೆ ಪ್ರಜಾಪ್ರಭುತ್ವ ಕೊಟ್ಟ ನೆಲ ಬಸವಕಲ್ಯಾಣ. ಇಂತಹ ನೆಲದಲ್ಲಿ ಪೌರತ್ವ ಶಿಬಿರ ಆಯೋಜಿನೆ ಮಾಡಿರುವುದು ಸಂತೋಷದ ಸಂಗತಿ. ಅನುಭವ ಮಂಟಪದ ಉತ್ಸವ ನಿಮಿತ್ತ ಪ್ರವಚನ, ಯೋಗ ಶಿಬಿರಗಳನ್ನು ಪೂಜ್ಯರು ಏರ್ಪಡಿಸಿರುತ್ತಾರೆ. ಅದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾಖಂಡಕಿಯ ಶ್ರೀ ಶಿವಯೋಗೇಶ್ವರ ಸ್ವಾಮೀಜಿ ಅನುಭಾವ ನೀಡಿ, ಅಧ್ಯಯನ ಮಾಡುವುದು, ಬರೆಯುವುದು, ತಿಳಿಸಿ ಹೇಳುವುದು. ಈ ಮೂರು ಸೂತ್ರಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ಪಾಠಬೋಧನೆ ಮಾಡಬೇಕು ಎಂದರು.

ಪ್ರಾಚಾರ್ಯೆ ಆಶಾ ಮುದಾಳೆ, ಉಪನ್ಯಾಸಕರಾದ ವೀರಶೆಟ್ಟಿ ಭೂಯಾ, ಸುಭಾಷ ದರ್ಗಾ, ಮಾಣಿಕರಾವ ಪಾಂಚಾಳ, ರಾಜೇಂದ್ರ ವರವಟ್ಟಿ, ನೀಲಾಂಬಿಕಾ ಕೌಠಾ, ಇಂದ್ರಾನೀಲಾ ಇತರರಿದ್ದರು. ಶ್ರೀ ಬಸವದೇವರು ಪ್ರಾಸ್ತಾವಿಕ ಮಾತನಾಡಿದರು. ಪೂಜ್ಯ ಸುಗಣಾತಾಯಿ ಪ್ರಾರ್ಥನಾ ಗೀತೆ ಹಾಡಿದರು.