ಬಾಗಲಕೋಟೆ: ಇಂದಿನ ಮಕ್ಕಳನ್ನ ನಾವು ಅವಲಂಬಿತರನ್ನಾಗಿ ಬೆಳೆಸುತ್ತಿದ್ದೇವೆ. ಸ್ವತಂತ್ರವಾಗಿ ಅವರನ್ನು ಬಿಡುತ್ತಿಲ್ಲ. ಇದರಿಂದ ಮಕ್ಕಳಲ್ಲಿ ಆತ್ಮ ಧೈರ್ಯ ಬರುತ್ತಿಲ್ಲ ಎಂದು ಕೆಎಲ್‌ಇ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿಯ ಉಪಕುಲಪತಿ ಅಶೋಕ ಶೆಟ್ಟರ ಹೇಳಿದರು.
ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ ಸಂಜೆ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಬಾಗಲಕೋಟೆ ತಾಲೂಕ ಘಟಕದಿಂದ ಹಮ್ಮಿಕೊಂಡಿದ್ದ ಡಾ.ಪ್ರಭುಸ್ವಾಮಿಗಳಿಗೆ ಗೌರವ ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಜಗತ್ತು ತುಂಬಾ ವೇಗವಾಗಿ ಪರಿವರ್ತನೆಗೊಳ್ಳುತ್ತಿದೆ. ಹಿಂದೆ ಎಲ್ಲಾ ಜ್ಞಾನವಾಗಲು ನೂರು ವರ್ಷ ಬೇಕಾಗುತ್ತಿತ್ತು. ಆದರೆ ಈಗ ಕೇವಲ ೧೨ ಗಂಟೆಯಲ್ಲಿ ಜ್ಞಾನ ದ್ವಿಗುಣಗೊಳ್ಳುತ್ತಿದೆ. ಮಕ್ಕಳಿಗೆ ಅನುಭವಕ್ಕೆ ಅವಕಾಶ ನೀಡಬೇಕು. ಅಂದಾಗ ಮನುಷ್ಯನ ವ್ಯಕ್ತಿತ್ವ ರೂಪಿಸುತ್ತವೆ ಎಂದು ತಿಳಿಸಿದ ಅವರು, ಬಣಜಿಗ ಸಮಾಜ ವ್ಯಾಪಾರ ಮಾಡಿಕೊಂಡು ಬರುತ್ತಿರುವಂಥದ್ದು ಆದರೆ ಈಗ ಪಾರಂಪರಿಕ ವ್ಯಾಪಾರ ನಶಿಸುತ್ತಿದ್ದು, ಅಧುನಿಕತೆಗೆ ಒಡ್ಡಿಕೊಂಡು ನವೀನ ತಂತ್ರಜ್ಞಾನ ಅಳವಡಿಸಿಕೊಂಡು ಯುವಕರು ಉದ್ಯಮಿಗಳಾಗಬೇಕು ಎಂದು ಹೇಳಿದರು.
ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಸೂಕ್ಷ÷್ಮ ವಾದಿಗಳಾದ ಬಣಜಿಗರು ಸಮಾಜದ ಎಲ್ಲ ವರ್ಗದವರೊಂದಿಗೆ ಉತ್ತಮ ಸಂಬAಧವಾಗಿದ್ದಾರೆ. ಆದರೆ ದಿನ ಕಳೆದಂತೆ ನಮ್ಮ ಮಕ್ಕಳಲ್ಲಿ ಸಂಸ್ಕೃತಿ ಮರೆಯಾಗುತ್ತಿದೆ. ಇದನ್ನು ತಂದೆ ತಾಯಿಗಳು ಮನಗೊಂಡು ಮಕ್ಕಳನ್ನು ಸಂಸ್ಕೃತರನ್ನಾಗಿ ಮಾಡಬೇಕು. ಧಾರ್ಮಿಕ ಸಂಸ್ಕಾರ ನೀಡಬೇಕು. ಇದೆಲ್ಲವು ಪಾಲಕರ ಕೈಯಲ್ಲಿ ಇದೆ ಎಂದರು.
ವೀರಶೈವ ಲಿಂಗಾಯತ ಒಂದೇ ನಮ್ಮ ಜಾತಿ ಧರ್ಮ, ಬಣಜಿಗ ಪಂಚಮಸಾಲಿ ಕಂಬಾರ ಕುಂಬಾರ ಸುನುಗಾರ ಬಣಗಾರ ಇವೆಲ್ಲವೂ ಕಾಯಕದಿಂದ ಬಂದAತಹ ನಾಮಗಳು. ಅದನ್ನೇ ರಾಜಕಾರಣಿಗಳು ಈಗ ತಮಗೆ ಬೇಕಾದಂತೆ ಬಳಸಿಕೊಂಡು ವಿಂಗಡಿಸುತ್ತಿದ್ದಾರೆ. ಇದರಿಂದ ನಮ್ಮ ಮೂಲ ವೀರಶೈವ ಲಿಂಗಾಯತ ಧರ್ಮದ ಮೇಲೆ ಪರಿಣಾಮ ಬೀರುತ್ತಿದ್ದು, ಎಲ್ಲರೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ತಿಳಿಸಿದರು.
ಹುಬ್ಬಳ್ಳಿ ಶಾಸಕ ಮಹೇಶ್ ತೆಂಗಿನಕಾಯಿ ಮಾತನಾಡಿ, ಮುಂದಿನ ನಮ್ಮ ಪೀಳಿಗೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಬಲಾರಾಗುವಂತೆ ಮಾಡುವತ್ತ ಲಕ್ಷ ವಹಿಸಬೇಕು. ಪರಿಣಿತರಿಂದ ತರಬೇತಿ ನೀಡಿ ಯುವ ಉದ್ದಿಮೆದಾರರನ್ನು ಹುಟ್ಟು ಹಾಕಬೇಕು ಎಂದರು.
ಚರಂತಿಮಠದ ಡಾ.ಪ್ರಭು ಸ್ವಾಮೀಜಿ ಅವರಿಗೆ ಬೆಳ್ಳಿ ಬೆತ್ತ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ. ೯೦ ಕ್ಕೂ ಹೆಚ್ಚು ಅಂಕಗಳಿಸಿದ ೨೫ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಜ್ಯ ಬಣಜಿಗ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ರೂಡಗಿ, ಬಸವರಾಜ ತಿಪಶೆಟ್ಟಿ, ಶಿವಬಸವ ಕರಬಾಶೆಟ್ಟರ, ಅಶೋಕ ಚೆನ್ನಿಗಾವಿ, ಆನಂದ ಜಿಗಿಜಿನ್ನಿ, ರವಿ ಕುಮಟಗಿ, ರಾಜೇಂದ್ರ ತಪಶೆಟ್ಟಿ, ಮಲ್ಲಪ್ಪಣ್ಣ ಆರಬ್ಬಿ, ಮುತ್ತು ಜೋಳದ, ಮೆಘಾ ಜಿಗಜಿನ್ನಿ, ವಿಶ್ವನಾಥ ವೈಜಾಪುರ, ವಿನಯ ನಾವಲಗಿ, ಮುರುಗೇಶ ಶಿವನಗುತ್ತಿ, ಬಸವರಾಜ ಸಬರದ ಉಪಸ್ಥಿತರಿದ್ದರು. ಸಿದ್ದಲಿಂಗಪ್ಪ ಹೊಸಕೇರಿ ಮತ್ತು ಸುನಿತಾ ಹತ್ತಿ ನಿರೂಪಿಸಿದರು.