ಔರಾದ್: ಮಕ್ಕಳ ಹಕ್ಕುಗಳ ಉಲ್ಲಂಘನೆ ತಡೆಗೆ ಸಾರ್ವಜನಿಕರು ಜಾಗೃತರಾಗಿ ನ್ಯಾಯಾಲಯದ ಕೈಜೋಡಿಸಬೇಕೆಂದು ನ್ಯಾಯವಾದಿ ಸುಧೀರ ಮಡಿವಾಳ ಹೇಳಿದರು.
ಎಕಲಾರ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘದ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಹಾಗೂ ಕಾನೂನು ಅತಿವು ನೆರವು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಮಕ್ಕಳು ತಮಗಿರುವ ಹಕ್ಕುಗಳನ್ನು ಅರಿಯಬೇಕು. ಒಂದು ದೇಶದ ಅಭಿವೃದ್ಧಿ ಅಲ್ಲಿಯ ಮಕ್ಕಳಿಗೆ ದೊರೆಯುವ ಸೌಲಭ್ಯಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಸಂದೀಪ ಮೇತ್ರೆ, ಕಾರ್ಯದರ್ಶಿ ಬಾಲಾಜಿ ಕಂಬಾರ, ಶಿಕ್ಷಣ ಸಂಯೋಜಕ ರಾಜಕುಮಾರ ಹಲಮಂಡಗೆ ಮಾತನಾಡಿದರು.
ಸಹಾಯಕ ಸರ್ಕಾರಿ ಅಭಿಯೋಜಕ ಶಿವಾನಂದ ಹುಲೆನ್ನವಾರ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಶಿಕ್ಷಕ ಪ್ರಭು ಬಾಳೂರೆ, ಸಿಆರ್‌ಪಿ ಮಹಾದೇವ ಘುಳೆ, ಶಿಕ್ಷಕರಾದ ಬಾಲಾಜಿ ಅಮರವಾಡಿ, ವೀರಶೆಟ್ಟಿ ಗಾದಗೆ, ರೂಪಾ, ಗಂಗಾಧರ, ಸಬೀತಾ ಇತರರಿದ್ದರು.