ವಿಜ್ಞಾನ ಶಿಕ್ಷಕರ ಕಾರ್ಯಾಗಾರದಲ್ಲಿ ದಾಸಪ್ಪಣ್ಣವರ ಅಭಿಮತ
ಬೆಳಗಾವಿ .ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ವಿಜ್ಞಾನದ ಪಾತ್ರ ಅತಿ ಮುಖ್ಯವಾಗಿದೆ. ವಿಜ್ಞಾನವು ನಮ್ಮ ಜೀವನದ ಒಂದು ಭಾಗವೇ ಆಗಿದೆ ಎಂದು ಬೆಳಗಾವಿ ಗ್ರಾಮೀಣ ಬಿಇಒ ಎಸ್.ಪಿ.ದಾಸಪ್ಪಣ್ಣನವರ್ ಅವರು ಹೇಳಿದರು.
ಇತ್ತಿಚಿಗೆ ಬೆಳಗಾವಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಯೋಗದಲ್ಲಿ ಗೋಪಾಲ ಜಿನಗೌಡ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ದೇವೇಂದ್ರ ಜಿನಗೌಡ ಇಂಗ್ಲಿಷ್ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಂದೊಳ್ಳಿಯಲ್ಲಿ ಬೆಳಗಾವಿ ತಾಲೂಕಿನ ಎಲ್ಲಾ ಪ್ರೌಢ ಶಾಲೆಗಳ ವಿಜ್ಞಾನ ಶಿಕ್ಷಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ವಿಜ್ಞಾನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಚಂದ್ರಯಾನ 3 ನಮ್ಮ ಭಾರತದಿಂದ ವಿಕ್ರಂ ರೋವರ್ ಚಂದ್ರನ ದಕ್ಷಿಣ ಪಥಕ್ಕೆ ಪಾದಾರ್ಪಣೆ ಮಾಡಿದ್ದು ನಮ್ಮೆಲ್ಲರ ಹೆಮ್ಮೆಯ ವಿಷಯ.ಇಂತಹ ಸಾಹಸಗೈದ ವಿಜ್ಞಾಣಿಗಳ ಕಾರ್ಯ ಶ್ಲಾಘನೀಯವಾಗಿದ್ದು, ವಿದ್ಯಾರ್ಥಿಗಳು ವಿಜ್ಞಾನ ಶಿಕ್ಷಣದತ್ತ ಹೆಚ್ಚು ಗಮನ ಹರಿಸಬೇಕೆಂದು ಅವರು ಹೇಳಿದರು.
ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಎಸ್.ಮೇದಾರ ಅವರು ಮಾತನಾಡಿ ಪ್ರಸ್ತುತ ಯುಗವು ವಿಜ್ಞಾನ ಯುಗವಾಗಿದ್ದು ಇಂದಿನ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವುದು ಅತಿ ಮುಖ್ಯವಾಗಿದೆ ಎಂದರು.
ಈ ಕಾರ್ಯಾಗಾರಕ್ಕೆ ತಜ್ಞ ಪಿ.ಯು. ಕಾಲೇಜಿನ ಪ್ರಾಧ್ಯಾಪಕರು ವಿಜ್ಞಾನದ ಪ್ರಯೋಜನ ಸಮಾಜಕ್ಕೆ ಹೆಚ್ಚು ಹೆಚ್ಚಾಗಿ ತಲುಪಬೇಕು. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಹಂತದಲ್ಲಿ ವಿಜ್ಞಾನ ಶಿಕ್ಷಕರು ವಿಜ್ಞಾನವನ್ನು ಕಲಿಸುವಾಗ ವಿಜ್ಞಾನದ ಅನ್ವಯಿಕತೆಯನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಟ್ಟು ಅವರೂ ಸಹ ವಿಜ್ಞಾನ ಕಲಿಕೆಯಲ್ಲಿ ಹೆಚ್ಚಿನದನ್ನು ಸಾಧಿಸಿ ಸಂಶೋಧಕರಾಗುವಂತೆ ಸನ್ನದ್ಧಗೊಳಿಸಬೇಕು. ವಿವಿಧ ವಿಷಯಗಳಲ್ಲಿ ವಿಜ್ಞಾನ ವಿಷಯವನ್ನು ಹೇಗೆ ಬೋಧಿಸಬೇಕು. ನಿತ್ಯ ಜೀವನದಲ್ಲಿ ವಿಜ್ಞಾನವನ್ನು ಹೇಗೆ ಅಳವಡಿಸಿಕೊಳ್ಳಬೇಕು ಪ್ರೌಢಶಾಲಾ ವಿಜ್ಞಾನ ಶಿಕ್ಷಕರು ವಿದ್ಯಾರ್ಥಿಗಳು ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕಲ್ಲದೆ ವಿಜ್ಞಾನ ವಿಷಯಗಳು ಕಠಿಣ ಎನ್ನಿಸದಂತೆ ಕುತೂಹಲ ಹಾಗೂ ವಿಷಯದಲ್ಲಿ ಆಸಕ್ತಿ ಮೂಡುವಂತೆ ಮಾಡಬೇಕು ಎಂದರು.
ಈ ಕಾರ್ಯಾಗಾರದಲ್ಲಿ ಬೆಳಗಾವಿ ಗ್ರಾಮೀಣ ಭಾಗದ ಅನುದಾನ ರಹಿತ ಅನುದಾನಿತ ಹಾಗೂ ಸರಕಾರಿ ಪ್ರೌಢಶಾಲೆಗಳಿಂ ದ 100ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಹಾಗೂ ಎಕ್ಸ್ಪರ್ಟ್ ಪಿಯು ಕಾಲೇಜಿನ ಉಪನ್ಯಾಸಕರಾದ ನಾಗೇಶ್ ದಂಡಾಪೂರಿ ಇವರು ಶಿಕ್ಷಕರಿಗೆ ಕಾರ್ಯಾಗಾರವನ್ನು ನಡೆಸಿಕೊಟ್ಟರು ಎಸ್.ಎಸ್.ಮಠದ್, ಮಹಾಂತೇಶ ಹುಲಗ ಬಾಳಿ, ನೂಡಲ್ ಅಧಿಕಾರಿ ವಿನಾಯಕ ವನ್ನೂರ್, ಡಿ.ಆರ್.ನಾಯ್ಕ, ಶೆಟ್ಟಿ ಸರ್ , ನಾಗೇಶ್ ಸರ್ ಮೊದಲಾದವರು ಇದ್ದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮೀ ಪಾಟೀಲ ಅವರು ವಹಿಸಿದ್ದರು.