ಮೇಲುಕೋಟೆ: ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವ ಮೂಲಕ ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಯುವ ಮುಖಂಡ ದರ್ಶನ ಪುಟ್ಟಣ್ಣಯ್ಯ ಹೇಳಿದರು.
ಮೇಲುಕೋಟೆ ಹೋಬಳಿಯ ಜಕ್ಕನಹಳ್ಳಿಯಲ್ಲಿ ಪಾದಯಾತ್ರೆ ನಡೆಸಿದ ಸಂದರ್ಭ ರೈತ ಸಂಘದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ನಾನು ಮತ ಕೇಳಲು ಬಂದಿಲ್ಲ. ಕ್ಷೇತ್ರದಲ್ಲಿ ಭ್ರಷ್ಟಾಚಾರ, ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಬೇಕಿದೆ. ಹಾಗಾಗಿ ಪಾದಯಾತ್ರೆ ನಡೆಸುತ್ತಿದ್ದೇನೆ ಎಂದರು.
ಸುನೀತಾ ಪುಟ್ಟಣ್ಣಯ್ಯ ಮಾತನಾಡಿ, ಕ್ಷೇತ್ರದಲ್ಲಿ ರೈತರ ಮತ್ತು ಬಡವರ ಅಭಿವೃದ್ಧಿ ಆಗಬೇಕು ಎಂದರು.
ರೈತ ಮುಖಂಡ ಕನ್ನಗೋನಹಳ್ಳಿ ಪರಮೇಶಗೌಡ ಮಾತನಾಡಿ ಕೆ.ಎಸ್ ಪುಟ್ಟಣ್ಣಯ್ಯ ರವರ ವ್ಯಕ್ತಿಯಲ್ಲ ಅವರೊಂದು ಶಕ್ತಿಯಾಗಿ ರೈತ ಸಂಘವನ್ನು ಕಟ್ಟಿಬೆಳೆಸಿದ್ದಾರೆ. ಈ ಸಂಘಟನೆಯ ಮಹತ್ವ ಕಾಪಾಡಬೇಕು ಎಂದವರು ಹೇಳಿದರು. ಮುಖಂಡರಾದ ಚಿಕ್ಕಾಡೆ ಹರೀಶ್, ಅಮೃತಿ ರಾಜಶೇಖರ್, ತುಳಸಿದಾಸ್, ವಿಜಯಕುಮಾರ್, ಅಕ್ಷತಾ ಪುಟ್ಟಣ್ಣಯ್ಯ, ಸ್ಮೀತಾ ಪುಟ್ಟಣ್ಣಯ್ಯ, ಕದಲಗೆರೆ ರಾಮು, ಯೋಗಣ್ಣ, ಪಾಪ್ಪಣ, ಅಮೃತಿ ರವಿ, ರಮೇಶ್, ಮಹೇಶ್ ಇತರರಿದ್ದರು. ನಂತರ ಪಾದಯಾತ್ರೆ ನ್ಯಾಮನಹಳ್ಳಿಗೆ ತೆರಳಿತು.