ಯಾದಗಿರಿ: ಶೈಕ್ಷಣಿಕವಾಗಿ ಹಿಂದುಳಿದ ಯಾದಗಿರಿ ಜಿಲ್ಲೆಯ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಹಲವು ತೊಡಕುಗಳಿದ್ದರೂ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಲು ಹೇಗೆ ಸಾಧ್ಯ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.
ಹೌದು ಇದು ಅಕ್ಷರಶಃ ಸತ್ಯ. ಮಂಗಳವಾರ ಬೆಳ್ಳಂ ಬೆಳಗ್ಗೆ `ವಿಜಯವಾಣಿ' ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ನಗರದ ಹೊಸ ಬಸ್ ನಿಲ್ದಾಣದಲ್ಲಿ ಶಾಲಾ-ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಯಾವ ರೀತಿ ಒದ್ದಾಡುತ್ತಿದ್ದಾರೆ ಎಂಬುದು ಅನಾವಣಗೊಂಡಿತು.
ತಾಲೂಕು ಮತ್ತು ಹೋಬಳಿಯಿಂದ ಜಿಲ್ಲಾ ಕೇಂದ್ರಕ್ಕೆ ಅಭ್ಯಾಸಕ್ಕಾಗಿ ಸಾವಿರಾರು ಸಂಖ್ಯೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬೆಳ್ಳಂ ಬೆಳಗ್ಗೆ ೭-೩೦ಕ್ಕೆ ನಗರದ ಹೊಸ ಬಸ್ ನಿಲ್ದಾಣಕ್ಕೆ ಬಂದಿಳಿಯುತ್ತಾರೆ. ಆದರೆ ಅಲ್ಲಿಂದ ಶಾಲಾ-ಕಾಲೇಜಿಗೆ ತೆರಳಲು ಸಮರ್ಪಕ ನಗರ ಸಂಚಾರ ಬಸ್ ಇಲ್ಲದ ಕಾರಣ ಈ ವಿದ್ಯಾರ್ಥಿಗಳು ಆಟೋ ಇಲ್ಲವೆ ಬೇರೆ ವಾಹನದ ವ್ಯವಸ್ಥೆ ಮಾಡಿಕೊಂಡು ಹೋಗಬೇಕು. ಇಲ್ಲದಿದ್ದರೆ ಅಂದಿನ ಶಾಲಾ-ಕಾಲೇಜಿಗೆ ರಜೆ ಹಾಕುವುದು ಅನಿವಾರ್ಯ. ಇಂತಹ ಸ್ಥಿತಿಯಲ್ಲಿ ಜಿಲ್ಲೆಯ ಫಲಿತಾಂಶ ಹೆಚ್ಚಳ ನಿರೀಕ್ಷಿಸುವುದಾದರೂ ಹೇಗೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುಂತೆ ಮಾಡಿದೆ.
ನಿತ್ಯ ನೂರಾರು ಗ್ರಾಮಗಳಿಂದ ಸಾವಿರಾರು ವಿದ್ಯಾರ್ಥಿಗಳು ನಿz್ದೆಗಟ್ಟು, ಉಪವಾಸ ಬಿದ್ದು ಸಕಾಲಕ್ಕೆ ಸಿಗದ ಬಸ್‌ಗಾಗಿ ಪರದಾಡುತ್ತಿರುವ ಕಹಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗಿರಿಜಿ¯್ಲÉ ಕೇಂದ್ರ ಸ್ಥಾನ ಯಾದಗಿರಿ ನಗರಕ್ಕೆ ನಿತ್ಯವೂ ನೂರಕ್ಕೂ ಹೆಚ್ಚು ಹಳ್ಳಿಗಳ ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರೌಢಶಾಲೆ ಮತ್ತು ಕಾಲೇಜು ಶಿಕ್ಷಣಕ್ಕಾಗಿ ಬಂದು ಹೋಗುತ್ತಾರೆ.
ಹೀಗೆ ಬರುವ ಬಹುತೇಕ ವಿದ್ಯಾರ್ಥಿಗಳು ಕನಿಷ್ಠ ೨೦ ಕಿಮೀದಿಂದ ೭೦ಕಿಮೀ ದೂರದ ಊರುಗಳಿಂದ ಜಿ¯್ಲÁ ಕೇಂದ್ರದ ಈ ನಗರದ ವಿವಿಧ ಸರ್ಕಾರಿ ಶಾಲಾ-ಕಾಲೇಜುಗಳಿಗೆ ನಿತ್ಯ ಹಾಜರಾಗಬೇಕು. ಶಾಲಾ ಸಮಯಕ್ಕೆ ಬರುವುದು ಅನಿವಾರ್ಯವಾಗಿದ್ದರಿಂದ ನೂರಾರು ಹಳ್ಳಿಗಳ ಮಕ್ಕಳು ಬೆಳಗಿನ ಜಾವ ೪ರ ಸುಮಾರಿಗೆ ಎದ್ದು, ಅವಸರದಲ್ಲಿಯೇ ನಿತ್ಯ ಕರ್ಮ ಮುಗಿಸಿ, ನಾಷ್ಟ, ಊಟ ಮಾಡದೇ ಪಾಲಕರು ಕಟ್ಟಿದ ಬುತ್ತಿಚೀಲ, ಮಣಭಾರ ಪುಸ್ತಕ ಬ್ಯಾಗ್ ಹೊತ್ತು ಬಸ್ ನಿಲ್ದಾಣಕ್ಕೆ ಬೆಳಗಿನ ಜಾವ ೫ಕ್ಕೆ ಬಂದು ಬಸ್‌ಗಾಗಿ ಕಾಯ್ದು ನಗರಕ್ಕೆ ಆಗಮಿಸುತ್ತಾರೆ.
ಇಲ್ಲಿ ಬಂದು ಇಳಿದ ಮೇಲೆ ತಮ್ಮ ಶಾಲೆಗಳಿಗೆ ಹೊಗಲು ಮತ್ತು ಅಲ್ಲಿಂದ ಬಸ್ ನಿಲ್ದಾಣಕ್ಕೆ ಬರಲು ಸರಿಯಾದ ಸಮಯಕ್ಕೆ ನಗರ ಸಂಚಾರ ಬಸ್‌ಗಳಿಲ್ಲ. ಅದಕ್ಕಾಗಿ ನಿಲ್ದಾಣದಲ್ಲಿ ಮತ್ತು ಶಾಲೆ ಮುಂದೆ ಗಂಟೆಗಟ್ಟಲೆ ಕಾಯುವ ಸ್ಥಿತಿ ಎದುರಾಗಿದೆ. ಶಾಲೆ ಆರಂಭದ ಸಮಯ ಆಗುತ್ತಿದ್ದಂತೆ ಅನಿವಾರ್ಯವಾಗಿ ಆಟೋರಿಕ್ಷಾದಲ್ಲಿ ದುಡ್ಡು ಕೊಟ್ಟು ಹೋಗಿ ಬರುವುದು ನಿತ್ಯದ ಕಾಯಕವಾಗಿದೆ. ಹೀಗಿರುವಾಗ ನಮ್ಮ ಸಮಸ್ಯೆ ಕೇಳುವವರು ಯಾರು ? ಎಂಬ ಪ್ರಶ್ನೆ ವಿದ್ಯಾರ್ಥಿಗಳಾಗಿದ್ದು, ಕೂಡಲೇ ಸಂಬAಧಿಸಿದ ಮೇಲಧಿಕಾರಿಗಳು ಸಮರ್ಪಕ ಬಸ್ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.