ಕೊಡೇಕಲ್: ವಲಯದ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ಬಸ್ ಸಂಚಾರ ಕೊರತೆಯಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕಾಗಿ ಪರಿಣಮಿಸಿದ್ದು, ಸಾರ್ವಜನಿಕರು ಕೂಡ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ನಿತ್ಯ ತಾಲೂಕು ಕೇಂದ್ರ ಹುಣಸಗಿಯಿಂದ ಬೆಳಗ್ಗೆ ಎರಡು ಬಸ್‌ಗಳ ಮಾತ್ರ ಸಂಚಾರವಿದ್ದು, ಈ ಬಸ್‌ಗಳು ಬಲಶೆಟ್ಟಿಹಾಳ, ಗೆದ್ದಲಮರಿ, ಜುಮಾಲಪುರ, ಜುಮಾಲಪುರ ತಾಂಡಾ, ಹಣಮಸಾಗರ, ಅಮ್ಮಾಪುರ ಎಸ್.ಕೆ, ರಾಯನಗೊಳ, ದಾಸರಗೋಟ, ಜೊಗುಂಡಬಾವಿ ಮಾರ್ಗವಾಗಿ ನಾರಾಯಣಪುರಗೆ ತೆರಳುತ್ತವೆ. ಆದರೆ ನಿತ್ಯ ಬೆಳಗ್ಗೆ ಎರಡು ಬಸ್ ಸಂಚಾರ ಮಾಡಿದರೆ ಸಂಜೆ ಮಾತ್ರ ಈ ಮಾರ್ಗವಾಗಿ ಕೇವಲ ಒಂದು ಸಂಚಾರ ಮಾಡುತ್ತದೆ.
ನಿತ್ಯ ಬೆಳಗ್ಗೆ ೭ ಮತ್ತು ೯ಕ್ಕೆ ಬರುವ ಬಸ್ ಪ್ರಯಾಣಿಕರಿಂದ ತುಂಬಿಕೊAಡಿರುತ್ತದೆ. ಹೀಗಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಕುಳಿತುಕೊಳ್ಳುವುದಿರಲಿ ಬಸ್‌ನಲ್ಲಿ ಕಾಲಿಡಲು ಕೂಡ ಸ್ಥಳವಿಲ್ಲದಂತಾಗಿ ಶಾಲಾ-ಕಾಲೇಜುಗಳಿಗೆ ತಡವಾಗಿ ಹೋಗುವುದು ಇಲ್ಲದಿದ್ದರೆ ರಜೆ ಹಾಕುವುದು ಅನಿವಾರ್ಯವಾಗಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರತಿದಿನ ಸಮೀಪದ ಜೊಗುಂಡಬಾವಿ ಮತ್ತು ನಾರಾಯಣಪುರ ಸರ್ಕಾರಿ ಪ್ರೌಢಶಾಲೆ ಮತ್ತು ಕಾಲೇಜಿಗೆ ತೆರಳುತ್ತಾರೆ. ಈ ಮಾರ್ಗದ ಬಸ್ ಸಂಚಾರ ತೀರಾ ವಿರಳವಾಗಿದ್ದರಿಂದ ಸಾರ್ವಜನಿಕರು ಸೇರಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಎದುರಿಸಬೇಕಾಗಿದೆ. ಹಾಗೊ ಹೀಗೋ ಮಾಡಿ ವಿದ್ಯಾರ್ಥಿಗಳು ಬಸ್ ಟಾಪ್ ಅಥವಾ ಮೆಟ್ಟಿಲುಗಳ ಮೇಲೆ ಕುರಿತು ಹೋಗುತ್ತಾರೆ. ಆದರೆ ನಮಗೆ ಬಸ್‌ನ ಒಳಹೋಗಿ ನಿಲ್ಲುವುದಕ್ಕೂ ಆಗುವುದಿಲ್ಲ ಎಂದು ವಿದ್ಯಾರ್ಥಿನಿಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಒಟ್ಟಾರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರತಿದಿನ ತಡವಾಗಿ ಶಾಲೆಗೆ ಹೋಗುವುದು ಒಂದೆಡೆಯಾದರೆ ಇನ್ನೂ ವೃದ್ಧರು, ರೋಗಿಗಳು ಮತ್ತು ಬಾಣಂತಿಯರು ಬಸ್‌ನಲ್ಲಿ ಸ್ಥಳವಕಾಶ ಇಲ್ಲದೆ ತೊಂದರೆ ಅನುಭವಿಸಬೇಕಾಗಿದೆ. ಹೀಗಾಗಿ ಕೂಡಲೇ ಜನಪ್ರತಿನಿಧಿಗಳು ಹಾಗೂ ಸಾರಿಗೆ ಇಲಾಖೆ ಮೇಲಧಿಕಾರಿಗಳು ಈ ವಿಷಯ ಗಂಭೀರವಾಗಿ ಪರಿಗಣಿಸಿ ಗ್ರಾಮೀಣ ಭಾಗಕ್ಕೆ ಹೆಚ್ಚುವರಿ ಬಸ್ ಸೇವೆ ಒದಗಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಹಾಗೂ ವೃದ್ಧರು ಮತ್ತು ಬಾಣಂತಿಯರ ಸಮಸ್ಯೆಗೆ ಸ್ಪಂದಿಸಬೇಕೆAಬುದು ಜನರ ಒತ್ತಾಯವಾಗಿದೆ.