ಮುರಗೋಡ: ಗ್ರಾಮೀಣ ಮಕ್ಕಳಿಗೆ ಶಿಕರು ಉತ್ತಮ ಗುಣಮಟ್ಟದ ಶಿಣ ನೀಡಲು ಮುಂದಾಗಬೇಕು ಎಂದು ಮುರಗೋಡದ ನಿವೃತ್ತ ಮುಖ್ಯ ಶಿಕ್ಷಕ ಡಾ.ಬಿ.ವೈ. ಚಿಕ್ಕಣ್ಣವರ ಹೇಳಿದರು.
ಸ್ಥಳಿಯ ಬಿ.ಆರ್. ಅಂಬೇಡ್ಕರ್ ಪ್ರೌಢಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಪಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು ಎಂದರು. ಸಂಸ್ಥೆ ಚೇರ್ಮನ್ ಶಾಂತಕ್ಕ ಕೆಳಗೇರಿ ಅಧ್ಯತೆ ವಹಿಸಿದ್ದರು. ಹಿರೇಮಠದ ಮಹೇಶ ಸ್ವಾಮಿ, ನಿರ್ದೇಶಕರಾದ ನಾಗಪ್ಪ ಕೆಳಗೇರಿ, ಮಲ್ಲಿಕಾರ್ಜುನ ಕೆಳಗೇರಿ, ಶಿವಪ್ರಸಾದ್ ಕೆಳಗೇರಿ, ಉದಯ ಚಿಕ್ಕಣ್ಣವರ, ಶಿಕರಾದ ಎಂ.ಡಿ. ಯಾಕೋಶಿ, ಬಿ.ಆರ್. ರಾಹುತ, ಸಿದ್ದಪ್ಪ ದೇವಟಗಿ, ಸುಭಾಸ ತೊರಗಲ್ಲ, ಸಿದ್ದಪ್ಪ ದೇವಟಗಿ, ದೀಪಕ ಬಾಳಿಕಾಯಿ ಇದ್ಧರು.