ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ವ್ಯಾಲಿ ಕಿಡ್ಸ್ನ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಉದ್ಘಾಟಿಸಿದರು. ಕವಿತಾ ಶೇಖರ್, ಡಾ.ಉಮೇಶ್ ರಾವ್, ಮಂಜುಳಾ ಗಂಗಾಧರ್ ಮತ್ತಿತರರಿದ್ದರು. 
ಜಿಲ್ಲೆ

ಮಕ್ಕಳ ಮುಗ್ದ ಮನಸ್ಸು ಹಸಿ ಮಣ್ಣಿನ ಮುದ್ದೆಯಂತೆ

ಚಿಕ್ಕಮಗಳೂರು: ಮಕ್ಕಳ ಮುಗ್ಧ ಮನಸ್ಸು ಹಸಿ ಮಣ್ಣಿನ ಮುದ್ದೆಯಂತೆ. ವಾಲಿದ ಕಡೆ ಬಾಗುವುದು ಸಹಜ. ಶಿಕ್ಷಕರು ಮಕ್ಕಳ ಮನಸ್ಸನ್ನು ಸ್ಥಿರವಾಗಿ ಗಟ್ಟಿಗೊಳಿಸಿ ದೇಶದ ಸತ್ಪçಜೆಗಳಾಗಿ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ವ್ಯಾಲಿ ಕಿಡ್ಸ್ನ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ಸಂಸ್ಕಾರವAತ, ಶಿಕ್ಷಣವಂತ ,ರಾಷ್ಟç ಪೇಮಿಗಳಾಗಿ ರೂಪುಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಆ ನಿಟ್ಟಿನಲ್ಲಿ ವ್ಯಾಲಿ ಕಿಡ್ಸ್ ಶಾಲೆ ಲಾಭದ ಆಸೆಗೆ ಒಳಗಾಗದೇ, ಮಕ್ಕಳಲ್ಲಿ ರಾಷ್ಟçಭಕ್ತಿ, ಮೌಲ್ಯಯುತ ಶಿಕ್ಷಣ ಹಾಗೂ ಸಂಸ್ಕಾರವನ್ನು ಬೋಧಿಸುತ್ತಿದೆ ಎಂದರು.

ಇತ್ತೀಚಿಗೆ ದಿನದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಚಟ, ಅಧಿಕ ಅಂಕಗಳಿಸದ ಕಾರಣ ಆತ್ಮಹತ್ಯೆಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಮೌಲ್ಯಾಧಾರಿತ ಶಿಕ್ಷಣದ ಕೊರತೆಯೇ ಕಾರಣ. ಪಾಲಕರು ಕೇವಲ ಅಂಕಗಳಿಕೆಗೆ ಮಾತ್ರ ಮಕ್ಕಳನ್ನು ಸೀಮಿತಗೊಳಿಸದೇ ವ್ಯವಹಾರಿಕ ಜ್ಞಾನದ ಪರಿಪಾಠವನ್ನು ಬೋಧಿಸುವತ್ತ ಗಮನಹರಿಸಬೇಕು ಎಂದು ಹೇಳಿದರು.

ಎಳೆ ವಯಸ್ಸಿನ ಮಕ್ಕಳು ಪಾಲಕರ ಅನುಕರಣೆಯಲ್ಲಿ ತೊಡಗುತ್ತಾರೆ. ಆ ನಿಟ್ಟಿನಲ್ಲಿ ಪಾಲಕರು ಸನ್ನಡತೆಯಿಂದ ಕೂಡಿದಾಗ ಮಾತ್ರ ಮಕ್ಕಳು ಆ ದಾರಿಯಲ್ಲಿ ಸಾಗುತ್ತಾರೆ. ಹಳಿ ತಪ್ಪಿದರೆ ದುರ್ನಡತೆ ದಾರಿಯಲ್ಲಿ ಸಾಗಿ ಬದುಕು ದುಸ್ತರವಾಗಲಿದೆ ಎಂದು ಎಚ್ಚರಿಸಿದರು.

ವಿದ್ಯಾರ್ಥಿಗಳ ಮನದಾಳದಲ್ಲಿ ಗಟ್ಟಿ ಬೀಜ ಭಿತ್ತಬೇಕು. ಹೊಸ ಹೊಸ ವಿಚಾರಧಾರೆ, ಆಗು-ಹೋಗುಗಳನ್ನು ತಿಳಿಸಬೇಕು. ಆಗ ಹೆಮ್ಮರವಾಗಿ ಬೆಳೆದರೂ ಪಾಲಕರ ಕೈಗೆ ದೊರೆಯಲು ಸಾಧ್ಯ ಹಾಗೂ ಭವಿಷ್ಯದ ಸಮಾಜವನ್ನು ಆತ್ಮವಿಶ್ವಾಸದಿಂದ ಎದುರಿಸಲು ಸನ್ನದ್ಧರಾಗುತ್ತಾರೆ ಎಂದರು.

ಅಧಿಕ ಅಂಕ, ಸ್ಥಾನಮಾನಕ್ಕಾಗಿ ಮಕ್ಕಳ ಬಾಲ್ಯದ ಸಹಜತೆಯನ್ನು ಪಾಲಕರು ಕಿತ್ತುಕೊಳ್ಳಬಾರದು. ಮಕ್ಕಳಿಗೆ ಮುದ್ದು ಇರಬೇಕು. ಅತಿಯಾದರೆ ಅಮೃತವು ವಿಷವೇ. ಹೀಗಾಗಿ ಪ್ರೀತಿಯ ನಡುವೆ ಸ್ವಲ್ಪಮಟ್ಟಿನ ಹಿಡಿತವನ್ನು ಕಾಪಾಡಿಕೊಳ್ಳಬೇಕು. ಜೊತೆಗೆ ರಾಮಯಣ, ಮಹಾಭಾರತ, ವಚನ, ಕಥೆ ಹಾಗೂ ಆದರ್ಶ ಪುರುಷರ ಸಾಧನೆಗಳನ್ನು ಪರಿಚಯಿಸಬೇಕು ಎಂದು ತಿಳಿಸಿದರು.

ನಗರಸಭೆ ಸದಸ್ಯೆ ಕವಿತಾ ಶೇಖರ್ ಮಾತನಾಡಿ, ಮಕ್ಕಳ ಜೀವನ ಖಾಲಿ ಚೀಲದಂತೆ. ಆಸಕ್ತಿ ಹೊಂ ದಿರುವ ವಿಷಯದಲ್ಲಿ ಶಿಕ್ಷಕರು ಜ್ಞಾನವನ್ನು ತುಂಬಿಸಬೇಕು. ಭವಿಷ್ಯದಲ್ಲಿ ಸಚ್ಚಿನ್ ತೆಂಡೂಲ್ಕರ್, ಲತಾ ಮಂಗೇಶ್ವರ್, ಪಿ.ಟಿ.ಉಷಾ ಅಥವಾ ದೇಶದ ಹೆಮ್ಮೆಯ ಮಾಜಿ ರಾಷ್ಟçಪತಿ ಕಲಾಂ ಮಾದರಿಯಲ್ಲಿ ಸಾಧನೆಗೈಯ್ಯಲು ಸಾಧ್ಯವಾಗಲಿದೆ ಎಂದರು.

ವೈದ್ಯ ಡಾ. ಉಮೇಶ್ ರಾವ್ ಮಾತನಾಡಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಮೊದಲು ಪಾಲಕರು ಟಿವಿ ಧಾರವಾಹಿಗಳನ್ನು ಬದಿಗಿರಿಸಿ, ವಿದ್ಯಾರ್ಜನೆ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅಲ್ಲದೇ ದೇವಾಲಯಗಳಿಗೆ ಕಳಿಸುವ ಜೊತೆಗೆ ಇತಿಹಾಸ ಧರ್ಮಗ್ರಂಥದ ಸಾರವನ್ನು ಪರಿಚಯಿಸಿದರೆ ನಾಡಿನಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯ ಎಂದರು.

ವೇದಿಕೆ ಕಾರ್ಯಕ್ರಮದ ನಂತರ ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ವ್ಯಾಲಿ ಕಿಡ್ಸ್ ಶಾಲೆಯ ಪೌಂಡರ್ ಮಂಜುಳಾ ಗಂಗಾಧರ್, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.