ಕಲಬುರಗಿ: ಮಕ್ಕಳ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಆ ಮೂಲಕ ಮಕ್ಕಳಲ್ಲಿ ಮನೋಬಲ ಹೆಚ್ಚಿಸಬೇಕು ಎಂದು ಖ್ಯಾತ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಹೇಳಿದರು.
ಸರ್ಕಾರಿ ಬಿಇಡಿ ಕಾಲೇಜಿನಲ್ಲಿ ಸರ್ಕಾರಿ ಶಿP್ಷÀಕರ ಶಿಕ್ಷಣ ಮಹಾವಿದ್ಯಾಲಯ, ಜಿ¯್ಲÁ ಕನ್ನಡ ವೈದ್ಯ ಸಾಹಿತ್ಯ ಪರಿಷತ್‌ನಿಂದ ಲಿಂ.ಗೌರಮ್ಮ ಬಸವರಾಜಪ್ಪ ಕಾಮರೆಡ್ಡಿ ಸ್ಮರಣಾರ್ಥ ಬುಧವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಕಲಿಕಾ ಸಮಸ್ಯೆ ಮತ್ತು ಮನಸ್ಸಿನ ಸ್ವಾಸ್ಥÈ ಕುರಿತು ವಿಶೇಷ ಉಪನ್ಯಾಸ ಹಾಗೂ ಮನಸ್ಸು ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರತಿ ಮಗುವಿನ ಕಾರ್ಯಚಟುವಟಿಕೆ, ಆ ಮಗುವಿನಲ್ಲಿನ ಆಸಕ್ತಿಯನ್ನು ಶಿಕ್ಷಕರು ಅರಿಯಬೇಕು. ಪಾಲಕರಿಗೆ ಮನವರಿಕೆ ಮಾಡಿಕೊಟ್ಟು ಪ್ರೋತ್ಸಾಹಿಸುವಂತೆ ಹೇಳಬೇಕು. ಮಕ್ಕಳ ಬಾಳಿನ ಶಿಲ್ಪಿಗಳು ಶಿಕ್ಷಕರೇ ಹೊರತು ಇನ್ನಾರಲ್ಲ ಎಂದರು.
ನಿವೃತ್ತ ಶಿP್ಷÀಕ, ಹಿರಿಯ ಸಾಹಿತಿ ಬಸವರಾಜಪ್ಪ ಕಾಮರೆಡ್ಡಿ ಅವರು ಮನಸ್ಸು ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು. ಸರ್ಕಾರಿ ಬಿಇಡಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಜಿ.ಎಂ.ವಿಜಯಕುಮಾರ ಅಧ್ಯP್ಷÀತೆ ವಹಿಸಿದ್ದರು.
ಪ್ರಮುಖರಾದ ಡಾ.ಎಸ್.ಬಿ.ಕಾಮರೆಡ್ಡಿ, ಎಸ್.ಎಸ್.ಹಿರೇಮಠ, ಡಾ.ಶಶಿಶೇಖರ ರೆಡ್ಡಿ, ಪ್ರೊ.ಚನ್ನಾರಡ್ಡಿ ಪಾಟೀಲï ಇತರರಿದ್ದರು. ರಾಚಪ್ಪ ಭದ್ರಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಅನಿಲಕುಮಾರ ಬಿರಾದಾರ್ ನಿರೂಪಣೆ ಮಾಡಿದರು. ಕೆ.ಸುಧಾ ಪ್ರಾರ್ಥಿಸಿದರು. ಬಸವರಾಜ ಶೆಟ್ಟಿ ವಂದಿಸಿದರು.