ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮನೆ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಬ್ಯಾಗ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.
ಮಕ್ಕಳ ಮನೆಯ ಶಾಲಾ ಉನ್ನತೀಕರಣ ಸಮಿತಿ ಅಧ್ಯಕ್ಷ ಎ.ಆರ್.ರಘು ಮಾತನಾಡಿ, ನಮ್ಮಶಾಲೆ, ನಮ್ಮೂರ ಶಾಲೆ, ನಾನು ಕಲಿತ ಶಾಲೆ ಎಂಬ ಭಾವನೆಯಿಂದ ನಮ್ಮ ಕೈಲಾದಷ್ಟು ಸಹಕಾರ ನೀಡಿದರೆ ಸರ್ಕಾರಿ ಶಾಲೆಗಳು ಬಲವರ್ಧನೆಗೊಳ್ಳುತ್ತವೆ. ಸರ್ಕಾರಿ ಶಾಲೆಗಳಲ್ಲಿ ಎಲ್ಲ ರೀತಿಯ ಸೌಕರ್ಯಗಳಿದ್ದರೂ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿರುವುದು ಬೇಸರದ ಸಂಗತಿ. ಸರ್ಕಾರಿ ಶಾಲೆಯಲ್ಲಿ ಪ್ರತಿಭಾನ್ವಿತ ಶಿಕ್ಷಕರಿದ್ದು, ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ. ಅದಕ್ಕಾಗಿಯೇ ಮಕ್ಕಳ ಮನೆ ತೆರೆಯುವ ಮೂಲಕ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಮುಂದಿನ ದಿನಗಳಲ್ಲಿ ಶಾಲಾ ಹಂತದಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲಾಗುತ್ತದೆ. ಇಲ್ಲಿ ಮಕ್ಕಳು ತಳಹಂತದ ಶಿಕ್ಷಣ ಕಲಿಯಲಿದ್ದಾರೆ. ಇಲ್ಲಿಯೂ ಇಂಗ್ಲೀಷ್ ಭಾಷೆಗೆ ಒತ್ತು ನೀಡಲಾಗಿದ್ದು, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸಲಾಗುತ್ತಿದೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಬೇಕು ಎಂದರು.
ಎಇಇ ಕಾಳಯ್ಯ, ಎ.ಆರ್.ರಘು, ಇಂಜಿನಿಯರ್ ಮಂಜುನಾಥ, ತಾಹಿರ್ ಸಮವಸ್ತ್ರ ಮತ್ತು ಬ್ಯಾಗ್‌ಗಳನ್ನು ಉಚಿತವಾಗಿ ನೀಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಸಯ್ಯದ್ ಉಮ್ಮರ್ ಕ್ರೀಡಾ ಸಮವಸ್ತ್ರಗಳನ್ನು ವಿತರಿಸಿದರು.
ಮುಖ್ಯಶಿಕ್ಷಕ ಜಿ.ಎನ್.ರವಿ, ಎಸ್‌ಡಿಎಂಸಿ ಸದಸ್ಯರಾದ ಮಂಜು, ಶಂಕರ್, ಉದಯ್‌ಕುಮಾರ್, ಅತಿಕ್ ಹಾಗೂ ಶಿಕ್ಷಕರಾದ ನಾಗಕುಮಾರ್, ನಾಗೇಶ್, ಪ್ರವೀಣ್, ಮಹೇಶ್, ಮಂಜುಳಾ, ಕು.ಅಶ್ವಿನಿ ಹಾಗೂ ಮಕ್ಕಳ ಮನೆ ಶಿಕ್ಷಕಿಯರಾದ ಸೌಮ್ಯಾ, ಶಿಲ್ಪಾ ಇದ್ದರು.